More

    ಗೋಕರೆ ರಸ್ತೆ ಅವ್ಯವಸ್ಥೆಗೆ ಬಿಡದ ಗ್ರಹಣ

    ಕೆಸರುಗದ್ದೆಯಾದ ರಸ್ತೆಯಲ್ಲಿ ಸಂಚಾರ ದುಸ್ತರ

    ಕೃಷಿ ಚಟುವಟಿಕೆಗಳಿಗೆ ತಡೆಗೋಡೆ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
    ದೇವನಹಳ್ಳಿ ತಾಲೂಕು ಯಲಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಕರೆ ಗ್ರಾಮದ ಡಾ. ಬಿ.ಅಂಬೇಡ್ಕರ್ ಸಮುದಾಯ ಭವನದ ಮುಂಭಾಗದ ರಸ್ತೆ ಅವ್ಯವಸ್ಥೆಗೆ ಹಿಡಿದಿರುವ ಗ್ರಹಣ ಬಿಡುವಂತೆಯೇ ಕಾಣುತ್ತಿಲ್ಲ. ಪ್ರತಿ ಮಳೆಗಾಲದಲ್ಲಿ ಕೆಸರುಗದ್ದೆಯಂತಾಗುವ ರಸ್ತೆಯಿಂದಾಗಿ ಈ ಭಾಗದ ಜನಸಂಚಾರಕ್ಕೆ ಪ್ರತಿವರ್ಷವೂ ಸಂಚಾಕಾರ ಎದುರಾಗುತ್ತಲೇ ಇದೆ.
    ಹೌದು! ದಶಕಗಳಿಂದಲೂ ಈ ರಸ್ತೆಗೆ ಅಭಿವೃದ್ಧಿಯ ಭಾಗ್ಯಸಿಕ್ಕಿಲ್ಲ. ಇದೇ ಪಂಚಾಯಿತಿಗೆ ಹತ್ತಾರು ಪಿಡಿಒಗಳು ಬಂದು ಹೋಗಿದ್ದರೂ ರಸ್ತೆ ಅವ್ಯವಸ್ಥೆಗೆ ಶಾಶ್ವತ ಪರಿಹಾರವಂತೂ ಸಿಕ್ಕಿಲ್ಲ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಈ ರಸ್ತೆಗೆ ಕಾಯಕಲ್ಪ ನೀಡುವುದಾಗಿ ಈ ಹಿಂದಿನ ಹಲವು ಪಿಡಿಒಗಳು ಹೇಳುತ್ತಲೇ ಬರುತ್ತಿದ್ದಾರೆ. ಆದರೆ ಇದುವರೆಗೆ ಯಾವುದೇ ಪ್ರಯೋಜವಾಗಿಲ್ಲ.
    ಕೃಷಿ ಚಟುವಟಿಕೆಗಳಿಗೆ ಅಡೆತಡೆ: ಈ ರಸ್ತೆಯ ಎರಡೂ ಬದಿ ರೇಷ್ಮೆ ಸಾಕಣೆ, ತೋಟಗಾರಿಕೆ ಬೆಳೆ, ಹೈನುಗಾರಿಕೆ, ಕೋಳಿಾರ್ಮ್ ಮತ್ತಿತರ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಇಂಥ ಹದಗೆಟ್ಟ ರಸ್ತೆಯಲ್ಲಿ ರೈತರು ಉತ್ಪನ್ನಗಳನ್ನು ಸಾಗಣೆ ಮಾಡಲು ಹರಸಾಹಸಪಡುವಂತಾಗಿದೆ. ಪಾದಚಾರಿಗಳೂ ಸಂಚರಿದಂತ ಪರಿಸ್ಥಿತಿ ಇರುವುದರಿಂದ ಜಾನುವಾರುಗಳನ್ನು ಕರೆದೊಯ್ಯಲು ಹಾಗೂ ವಾಹನಗಳನ್ನು ಈ ರಸ್ತೆಯಲ್ಲಿ ಚಲಾಯಿಸಲು ಸಾಧ್ಯವಿಲ್ಲದಂತಾಗಿದೆ.
    ಪತ್ರಕ್ಕೂ ಸ್ಪಂದನೆ ಇಲ್ಲ: ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕುಂದುಕೊರತೆ ಸಭೆಯಲ್ಲೂ ಈ ಬಗ್ಗೆ ಗ್ರಾಮಸ್ಥರು ಗಮನ ಸೆಳೆದಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ಸಿಎಂ ಸೂಚನೆ ನೀಡಿದ್ದರೂ ಪ್ರಗತಿ ಕಾಣಲಿಲ್ಲ. ನರೇಗಾ ಯೋಜನೆ ಅಥವಾ ಮತ್ತಿತರ ಯೋಜನೆ ಅಡಿಯಲ್ಲಿ ಕಡೇಪಕ್ಷ ಜಲ್ಲಿ ಮಿಶ್ರಿತ ಮಣ್ಣಿನ ರಸ್ತೆಯನ್ನಾಗಿಯಾದರೂ ಅಭಿವೃದ್ಧಿಪಡಿಸಬೇಕು ಮತ್ತು ಮಳೆಯ ನೀರು ಸರಾಗವಾಗಿ ಹರಿಯುವಂತೆ ಎರಡೂ ಬದಿ ತುರ್ತಾಗಿ ಚರಂಡಿಯ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪತ್ರ ಬರೆದಿದ್ದರೂ ಲಶ್ರುತಿ ಮಾತ್ರ ಶೂನ್ಯವಾಗಿದೆ.

    ರೈತಾಪಿ ಜನರ ಪರದಾಟ ಪ್ರತಿ ಮಳೆಗಾಲದಲ್ಲಿ ಈ ರಸ್ತೆ ತೀವ್ರ ಹದಗೆಡುತ್ತದೆ. ಎತ್ತಿನಗಾಡಿ, ಟ್ರ್ಯಾಕ್ಟರ್ ಮತ್ತಿತರ ವಾಹನಗಳ ಚಕ್ರ ಕೆಸರಿನಲ್ಲಿ ಸಿಲುಕಿ ಪರದಾಡುವ ಪರಿಸ್ಥಿತಿ ಸಾಮಾನ್ಯವಾಗಿದೆ. ಎತ್ತಿನ ಗಾಡಿ ಚಕ್ರಗಳು ಬದಿಯಲ್ಲಿ ಹುದುಗಿಹೋಗಿ ಎತ್ತುಗಳು ಗಾಯಗೊಳ್ಳುವ ೆ. ಪ್ರತಿನಿತ್ಯ ಕೆಸರಿನಲ್ಲಿ ಸಿಲುಕುವ ವಾಹನಗಳನ್ನು ಪ್ರಕರಣಗಳು ನಡೆದಿವೆ. ಈ ಹಿಂದೆ ಈ ರಸ್ತೆಗೆ ಡಾಂಬರೀಕರಣ ನಡೆಸುವುದಾಗಿ ರಸ್ತೆಯುದ್ದಕ್ಕೂ ಜಲ್ಲಿ ಹಾಕಲಾಗಿತ್ತು. ಇನ್ನೇನು ರಸ್ತೆ ಡಾಂಬರೀಕರಣಗೊಳ್ಳಲಿದೆ ಎಂಬ ಗ್ರಾಮಸ್ಥರ ನಿರೀಕ್ಷೆ ಇಂದಿಗೂ ನಿರೀಕ್ಷೆಯಾಗಿಯೇ ಉಳಿದಿದೆ. ಇದೀಗ ಜಲ್ಲಿಯೆಲ್ಲ ಮಣ್ಣನಡಿ ಹುದುಗಿಹೋಗಿದ್ದು ರಸ್ತೆ ಅಕ್ಷರಶಃ ಕೆಸರುಗದ್ದೆಯಾಗಿದೆ.



    ಗೋಕರೆ ಗ್ರಾಮದಲ್ಲಿನ ಡಾ.ಬಿ.ಅಂಬೇಡ್ಕರ್ ಸಮುದಾಯ ಭವನ ಮುಂಭಾಗದ ರಸ್ತೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನರೇಗಾ ಯೋಜನೆಯಡಿ ಕಾಯಕಲ್ಪ ನೀಡುವ ಚಿಂತನೆ ಇದೆ. ಇಲ್ಲವಾದರೆ ಈ ಬಾರಿ ನರೇಗಾದಲ್ಲಿ ಈ ರಸ್ತೆಯನ್ನು ಸೇರಿಸಿ ಕ್ರಿಯಾಯೋಜನೆ ಸಿದ್ದಪಡಿಸಲಾಗುವುದು. ಈ ಹಿಂದೆ ಯಾವ ಕಾರಣಕ್ಕೆ ತಡೆಯಾಗಿದೆ ಎಂಬುದನ್ನು ಪರಿಶೀಲಿಸಿ ಶೀಘ್ರದಲ್ಲೇ ರಸ್ತೆ ಅಭಿವೃದ್ಧಿಗೆ ಕ್ರಮವಹಿಸಲಾಗುವುದು.

    ರವಿಕುಮಾರ್, ಪಿಡಿಒ ಯಲಿಯೂರು ಪಂಚಾಯಿತಿ

    ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ ಎನ್ನುತ್ತಾರೆ, ರೈತರು ದೇಶದ ಬೆನ್ನುಲುಬು ಎಂದು ಭಾಷಣಗಳಲ್ಲಿ ಮಾತನಾಡುತ್ತಾರೆ. ಆದರೆ ಈ ಗ್ರಾಮದಲ್ಲಿನ ರಸ್ತೆಯೊಂದರ ಅಭಿವೃದ್ಧಿಗೆ ಏಕೆ ಮೀನಮೇಷ ಎಣಿಸುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಪಿಡಿಒ ಸೇರಿ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಆದರೆ ಇದುವರೆಗೆ ಪರಿಹಾರವಂತೂ ಸಿಕ್ಕಿಲ್ಲ.

    ವಿಶ್ವನಾಥ್, ಗೋಕರೆ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts