More

    ಯಾರ್ಕರ್ ಸ್ಪೆಷಲಿಸ್ಟ್ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ವಿದಾಯ

    ಕೊಲಂಬೊ: ಆಕರ್ಷಕ ಯಾರ್ಕರ್ ಎಸೆತಗಳಿಗೆ ಹೆಸರಾಗಿದ್ದ ಶ್ರೀಲಂಕಾದ ಹಿರಿಯ ವೇಗದ ಬೌಲರ್ ಲಸಿತ್ ಮಾಲಿಂಗ ಮಂಗಳವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಕಳೆದ ಒಂದೂವರೆ ದಶಕದಿಂದ ಶ್ರೀಲಂಕಾದ ತಂಡದ ಭಾಗವಾಗಿದ್ದ 38 ವರ್ಷದ ಮಾಲಿಂಗ, ಟಿ20 ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಂಡಿದ್ದರು. 2014ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಮಾಲಿಂಗ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ. ‘ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನನ್ನ ಶೂಗಳನ್ನು ಕಳಚುವ ಸಮಯ ಇದಾಗಿದೆ. ನನ್ನ ಕ್ರಿಕೆಟ್ ಜರ್ನಿಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಅಭಾರಿಯಾಗಿದ್ದೇನೆ. ನನ್ನ ಅನುಭವವನ್ನು ಯುವ ಕ್ರಿಕೆಟಿಗರೊಂದಿಗೆ ಹಂಚಿಕೊಳ್ಳಲು ಬಯಸುವೆ’ ಎಂದು ಮಾಲಿಂಗ ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ನಿಗದಿತ ಓವರ್‌ಗಳ ತಂಡಕ್ಕೆ ರೋಹಿತ್ ಶರ್ಮ ಸಾರಥ್ಯ?

    ಪಲ್ಲೆಕಲೆಯಲ್ಲಿ ವೆಸ್ಟ್ ಇಂಡೀಸ್ ಎದುರು 2020ರ ಮಾರ್ಚ್‌ನಲ್ಲಿ ಕಡೇ ಬಾರಿಗೆ ರಾಷ್ಟ್ರೀಯ ತಂಡದ ಪರ ಟಿ20 ಪಂದ್ಯವಾಡಿದ್ದರು. ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 546 ವಿಕೆಟ್ ಕಬಳಿಸಿದ್ದಾರೆ. 2010ರಲ್ಲೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಮಾಲಿಂಗ, 2019ರಲ್ಲಿ ಏಕದಿನ ಕ್ರಿಕೆಟ್‌ನಿಂದಲೂ ಹಿಂದೆ ಸರಿದಿದ್ದರು. ಇತ್ತೀಚೆಗೆ ಪ್ರಕಟಿಸಿದ್ದ ಶ್ರೀಲಂಕಾದ ಟಿ20 ವಿಶ್ವಕಪ್ ತಂಡದಲ್ಲಿ ಮಾಲಿಂಗ ಸ್ಥಾನ ಪಡೆದಿರಲಿಲ್ಲ.

    ಇದನ್ನೂ ಓದಿ: 5ನೇ ಟೆಸ್ಟ್ ಪಂದ್ಯ ರದ್ದತಿ ಕುರಿತು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಹೇಳಿದ್ದೇನು? 

    ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪ್ರತಿನಿಧಿಸಿದ್ದ ಮಾಲಿಂಗ 122 ಪಂದ್ಯಗಳಿಂದ 170 ವಿಕೆಟ್ ಪಡೆದಿದ್ದಾರೆ. 84 ಟಿ20 ಪಂದ್ಯಗಳಿಂದ 107 ವಿಕೆಟ್, 226 ಏಕದಿನ ಪಂದ್ಯಗಳಿಂದ 338 ವಿಕೆಟ್ ಹಾಗೂ 30 ಟೆಸ್ಟ್ ಪಂದ್ಯಗಳಿಂದ 101 ವಿಕೆಟ್ ಪಡೆದಿದ್ದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿದ್ದರು.

              ಪಂದ್ಯ, ವಿಕೆಟ್
    ಏಕದಿನ, 226, 338
    ಟಿ20, 84, 107
    ಟೆಸ್ಟ್, 30, 101
    ಐಪಿಎಲ್: 112, 170

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts