More

    ಆಸ್ಕರ್​ ಸ್ಪರ್ಧೆಗೆ ಮಲಯಾಳಂ ಚಿತ್ರ ‘ಜಲ್ಲಿಕಟ್ಟು’ ಆಯ್ಕೆ

    ಮುಂಬೈ: ಲಿಜೋ ಜೋಸ್​ ಪೆಲ್ಲಿಸ್ಸೆರಿ ನಿರ್ದೇಶನದ ಮಲಯಾಳಂ ಚಿತ್ರ ‘ಜಲ್ಲಿಕಟ್ಟು’ 93ನೇ ಆಸ್ಕರ್​ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನವಾಗಿದೆ.

    ಇದನ್ನೂ ಓದಿ: ಜಗ್ಗೇಶ್​ ಹೀರೋ ಆಗುವುದಕ್ಕೆ ಪ್ರೇರೇಪಿಸಿದ್ದು ಯಾರು ಗೊತ್ತಾ?

    2021ರ ಫೆಬ್ರವರಿಯಲ್ಲಿ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈ ಪೈಕಿ ಅತ್ಯುತ್ತಮ ಫಾರಿನ್​ ಚಿತ್ರ ಪ್ರಶಸ್ತಿಗೆ ಜಗತ್ತಿನ ಹಲವು ದೇಶಗಳಿಂದ ಚಿತ್ರಗಳು ನಾಮನಿರ್ದೇಶನವಾಗುತ್ತವೆ. ಈ ಬಾರಿ, ಭಾರತದಿಂದ 27 ಚಿತ್ರಗಳು ಪೈಪೋಟಿ ನಡೆಸಿದ್ದು, ಈ ಪೈಕಿ ‘ಜಲ್ಲಿಕಟ್ಟು’ ಚಿತ್ರಕ್ಕೆ ಭಾರತವನ್ನು ಪ್ರತಿನಿಧಿಸುವ ಅಪರೂಪದ ಅವಕಾಶ ಸಿಕ್ಕಿದೆ.

    ಈ ಬಾರಿ ಕಣದಲ್ಲಿದ್ದ 27 ಚಿತ್ರಗಳ ಪೈಕಿ ಹಿಂದಿ ಚಿತ್ರಗಳೇ ಹೆಚ್ಚಿದ್ದವು. ಇನ್ನು ಮರಾಠಿ, ಮಲಯಾಳಂ ಚಿತ್ರರಂಗದಿಂದಲೂ ಕೆಲವು ಚಿತ್ರಗಳು ಪೈಪೋಟಿ ನಡೆಸಿದ್ದವು. ಈ ಪೈಕಿ ತೀರ್ಪುಗಾರರ ಮೆಚ್ಚಿನ ಚಿತ್ರವಾಗಿ ‘ಜಲ್ಲಿಕಟ್ಟು’ ಹೊರಹೊಮ್ಮಿದ್ದು, ಮನುಷ್ಯರು ಪ್ರಾಣಿಗಳಿಗಿಂಥ ಕೆಟ್ಟವರು ಎಂದು ಸಾರುವ ಅಪರೂಪದ ಚಿತ್ರ ನಮ್ಮೆಲ್ಲರ ಆಯ್ಕೆಯಾಗಿದೆ ಎಂದು ತೀರ್ಪುಗಾರ ಮಂಡಳಿಯ ಅಧ್ಯಕ್ಷ ರಾಹುಲ್​ ರವೈಲ್​ ಹೇಳಿಕೊಂಡಿದ್ದಾರೆ.

    ಈ ಬಾರಿ ಕಣದಲ್ಲಿ ಹಿಂದಿಯಿಂದ ‘ಚಪಾಕ್’, ‘ಶಕುಂತಲಾ ದೇವಿ’, ‘ಚಲಾಂಗ್​’, ‘ಗುಲಾಬೋ ಸಿತಾಬೋ’, ‘ದಿ ಸ್ಕೈ ಈಸ್​ ಪಿಂಕ್​’, ‘ಬುಲ್​ಬುಲ್​’ ಮುಂತಾದ ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಅವೆಲ್ಲವನ್ನು ಹಿಂದಿಕ್ಕಿ, ‘ಜಲ್ಲಿಕಟ್ಟು’ ಆಯ್ಕೆಯಾಗಿರುವುದು ವಿಶೇಷ.

    ಇದನ್ನೂ ಓದಿ: ‘ಶುಗರ್​ಲೆಸ್’ ಚಿತ್ರೀಕರಣ ಮುಕ್ತಾಯ … ಗೆಟಪ್​ ಬದಲಿಸಿದ ಪೃಥ್ವಿ

    ಈ ಬಾರಿಯ ಆಯ್ಕೆಗೆ ಎಲ್ಲ ಕಡೆಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಆಸ್ಕರ್​ನಲ್ಲಿ ಸ್ಪರ್ಧಿಸುವುದಕ್ಕೆ ಭಾರತದಿಂದ ಇದು ಅರ್ಹವಾದ ಚಿತ್ರ ಎಂಬ ಮೆಚ್ಚುಗೆ ಸೋಷಿಯಲ್​ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಕಳೆದ ವರ್ಷ ರಣವೀರ್​ ಸಿಂಗ್​ ಮತ್ತು ಆಲಿಯಾ ಭಟ್​ ಅಭಿನಯದ ‘ದಿ ಗಲ್ಲಿ ಬಾಯ್​’ ಚಿತ್ರವು ಭಾರತದಿಂದ ನಾಮನಿರ್ದೇಶನಗೊಂಡಿದ್ದು, ಈ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.

    PHOTO GALLERY| ಟ್ರೆಡಿಷನಲ್​ ಲುಕ್​ನಲ್ಲಿ ಶರ್ಮಿಳಾ ಮಾಂಡ್ರೆ ಮಿಂಚಿಂಗ್​…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts