More

    ಲಿಂಗಸಮಾನತೆ ಪ್ರತಿಪಾದನೆಗೆ ವಿಶ್ವಸಂಸ್ಥೆ ಅವಾರ್ಡ್​: ಪ್ರಥಮ ಭಾರತೀಯರಾಗಿ ಮೇಜರ್​ ಸುಮನ್​

    ನವದೆಹಲಿ: ಸೇನಾ ಲಿಂಗಸಮಾನತೆ ಪ್ರತಿಪಾದನೆಗಾಗಿ ವಿಶ್ವಸಂಸ್ಥೆಯಿಂದ ಕೊಡಲಾಗುವ ಪ್ರತಿಷ್ಠಿತ ಪ್ರಶಸ್ತಿಗೆ ಇದೇ ಮೊದಲ ಬಾರಿಗೆ ಭಾರತೀಯರೊಬ್ಬರು ಆಯ್ಕೆಯಾಗಿದ್ದಾರೆ. ಮೇಜರ್ ಸುಮನ್ ಗವಾನಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ.

    ಸುಮನ್​ ಅವರನ್ನು ಹೊರತುಪಡಿಸಿದರೆ ಇನ್ನೋರ್ವರು ಬ್ರೆಜಿಲ್​ನ ನೌಕಾಪಡೆ ಅಧಿಕಾರಿ ಕಾರ್ಲಾ ಮಾಂಟೆರೋ ಡಿ ಕ್ಯಾಸ್ಟ್ರೊ ಅರೌಜೊ. ಇದೇ ಮೊದಲ ಬಾರಿಗೆ ಇಬ್ಬರಿಗೆ ಈ ಪ್ರಶಸ್ತಿ ಲಭಿಸಿದೆ.

    ಇದನ್ನೂ ಓದಿ: ಭಾವಿ ಪತಿಗೆ ಕಳಿಸಿದಳೊಂದು ಜೋಕ್​- ಆತನ ರಿಪ್ಲೈ ನೋಡಿ ಮದುವೆ ಮುರಿದೇ ಬಿಟ್ಳು!

    ಈ ಪ್ರಶಸ್ತಿಯನ್ನು 2016ರಲ್ಲಿ ಸ್ಥಾಪಿಸಲಾಗಿದೆ. ಶಾಂತಿ ಕಾರ್ಯಾಚರಣೆ ಸಂದರ್ಭದಲ್ಲಿ ಮಹಿಳೆ, ಶಾಂತಿ ಹಾಗೂ ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳುವವರಿಗೆ  ಕಳೆದ ನಾಲ್ಕು ವರ್ಷಗಳಿಂದ ಪ್ರಶಸ್ತಿ ನೀಡುತ್ತಾ ಬರಲಾಗಿದೆ.

    ಶಾಂತಿ ಕಾರ್ಯಾಚರಣೆಯ ಪಡೆಯ ಕಮಾಂಡರ್ ಹಾಗೂ ಮುಖ್ಯಸ್ಥರು ಮಹಿಳಾ ಶಾಂತಿಪಾಲಕರನ್ನು ಪ್ರಶಸ್ತಿಗಾಗಿ ನಾಮಕರಣಗೊಳಿಸುತ್ತಾರೆ. ಮೇಜರ್ ಸುಮನ್ ಗವಾನಿ ಈ ಪ್ರಶಸ್ತಿಗೆ ಭಾಜನರಾಗಿರುವ ಮೊದಲ ಶಾಂತಿಪಾಲಕರಾಗಿದ್ದಾರೆ.

    ಸುಮನ್​ ಅವರನ್ನು ದಕ್ಷಿಣ ಸುಡಾನ್​ನ ವಿಶ್ವಸಂಸ್ಥೆ ಮಿಷನ್​ನಲ್ಲಿ (ಯುಎನ್ಎಂಐಎಸ್ಎಸ್) ನಿಯೋಜನೆಗೊಳಿಸಲಾಗಿತ್ತು. ಇವರು ವಿಶ್ವಸಂಸ್ಥೆಯ 230 ಸೇನಾ ವೀಕ್ಷಕರಿಗೆ ಲೈಂಗಿಕ ದೌರ್ಜನ್ಯದ ಕುರಿತಾದ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಿದ್ದರು. ಜತೆಗೆ, ಮಹಿಳಾ ಸೇನಾ ವೀಕ್ಷಕರ ಸಂಖ್ಯೆಯನ್ನು ಹೆಚ್ಚು ಮಾಡುವಲ್ಲಿ ಇದು ಇವರು ಅಪಾರವಾಗಿ ಶ್ರಮಿಸಿದ್ದಾರೆ.

    ಇದನ್ನೂ ಓದಿ: ಸಿರಿವಂತ ವಿದೇಶಿ ಹುಡುಗನೆಂದು ನಂಬಿ ಐದೂವರೆ ಲಕ್ಷ ಕಳಕೊಂಡ ಬೆಂಗಳೂರು ಮಹಿಳೆ!

    ಪ್ರಶಸ್ತಿಗೆ ಭಾಜನರಾಗಿರುವ ಇಬ್ಬರು ಮಹಿಳೆಯರನ್ನು ವಿಶ್ವಸಂಸ್ಥೆ ಪ್ರಭಾವಿ ಮಾದರಿ ವ್ಯಕ್ತಿಗಳೆಂದು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಶ್ಲಾಘಿಸಿದ್ದಾರೆ.
    ಇದೇ 29ರಂದು ನಡೆಯಲಿರುವ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಶಾಂತಿ ಪಾಲನಾ ದಿನದಂದು ಗೌರವಿಸಲಾಗುವುದು.

    ಆರೋಗ್ಯವಾಗಿದ್ದ ಮದುಮಗಳಿಗೆ ವೈದ್ಯರು ಕೊಟ್ಟರು ಕರೊನಾ ಪಾಸಿಟಿವ್ ರಿಪೋರ್ಟ್​​: ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts