More

    ಜೈನಮುನಿ ಕಾಮಕುಮಾರ ನಂದಿ ಮಹರಾಜ ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್​: FIRನಲ್ಲಿ ಮಹತ್ವದ ಮಾಹಿತಿ ಬಹಿರಂಗ

    ಚಿಕ್ಕೋಡಿ: ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹರಾಜರ ಹತ್ಯೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಆರೋಪಿಗಳಾದ ನಾರಾಯಣ ಮಾಳಿ ಹಾಗೂ ಹಸನ್ ದಲಾಯತ್ ಇಬ್ಬರು ಸೇರಿಯೇ ಜೈನಮುನಿಗಳನ್ನು ಹತ್ಯೆ ಮಾಡಿದ್ದಾರೆ ಎಂಬುದು ಚಿಕ್ಕೋಡಿ ಠಾಣೆಯಲ್ಲಿ ದಾಖಲಾದ ಎಫ್ಐಆರ್‌ನಲ್ಲಿ ಉಲ್ಲೇಖವಾಗಿದೆ.

    ಆರೋಪಿಗಳು ಮೊದಲು ಜೈನಮುನಿಗಳಿಗೆ ಕರೆಂಟ್ ಶಾಕ್ ಕೊಟ್ಟು ಕೊಲ್ಲಲು ಯತ್ನಿಸಿದ್ದಾರೆ. ಇದಾದ ಬಳಿಕ ಇಬ್ಬರೂ ಸೇರಿ ಟವೆಲ್‌ನಿಂದ ಜೈನಮುನಿಗಳ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾರೆ. ನಾರಾಯಣ ಮಾಳಿಗೆ ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೈನಮುನಿಗಳನ್ನೇ ಆರೋಪಿಗಳು ಕೊಲೆ ಮಾಡಿದ್ದಾರೆ.

    ಇದನ್ನೂ ಓದಿ: ಮರ್ಮಾಂಗ ಕತ್ತರಿಸಿಕೊಂಡು MBBS ವಿದ್ಯಾರ್ಥಿ ಸಾವಿಗೆ ಶರಣು: ನಿಗಾವಹಿಸಿದ್ರು ಉಳೀಲಿಲ್ಲ ಪುತ್ರ, ಪಾಲಕರ ಆಕ್ರಂದನ

    ಗೋಣಿಚೀಲದಲ್ಲಿ ಕಟ್ಟಿ ಶವ ಸಾಗಾಟ

    ಹಣ ವಾಪಸ್​ ಕೇಳಿದ್ದಕ್ಕೆ ಎ1 ಆರೋಪಿ ನಾರಾಯಣ ಮಾಳಿ ಭಾರೀ ಕೋಪಗೊಂಡಿದ್ದ. ಲಾರಿ ಚಾಲಕನಾಗಿದ್ದ ಸ್ನೇಹಿತ, ಎ2 ಆರೋಪಿ ಹಸನಸಾಬ್ ದಲಾಯತ್ ಜತೆ ಸೇರಿ ಕೊಲೆ‌ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಗೋಣಿಚೀಲದಲ್ಲಿ ಕಟ್ಟಿ ಬೈಕ್‌ನಲ್ಲಿ ಶವ ಸಾಗಿಸಿದ್ದಾರೆ.

    ಬಟ್ಟೆ ಮತ್ತು ಡೈರಿ ದಹನ

    ಹಿರೇಕೋಡಿಯಿಂದ ಖಟಕಬಾವಿಯವರೆಗೂ ಸುಮಾರು 35 ಕಿಮೀ ಬೈಕ್ ಮೇಲೆ ಶವ ಸಾಗಾಟ ಮಾಡಿದ್ದಾರೆ. ಬಳಿಕ ಖಟಕಬಾವಿಯ ಕೊಳವೆ ಬಾವಿಯ ಬಳಿ ದೇಹವನ್ನು ಪೀಸ್ ಪೀಸ್ ಮಾಡಿದ್ದಾರೆ. ನಂತರ ತಮ್ಮ ರಕ್ತ ಸಿಕ್ತ ಬಟ್ಟೆಗಳನ್ನು ಹಾಗೂ ಜೈನಮುನಿಗಳಿಗೆ ಸೇರಿದ ಡೈರಿಯನ್ನು ಸ್ಥಳದಲ್ಲೇ ಸುಟ್ಟು ಹಾಕಿದ್ದಾರೆ. ಆನಂತರ ಮೃತದೇಹದ ತುಂಡುಗಳನ್ನು ಕೊಳಬೆ ಬಾವಿ ಒಳಗೆ ಹಾಕಿದ್ದಾರೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

    ಇದನ್ನೂ ಓದಿ: ಗ್ರೀನ್​ ಟೀ ತಯಾರಿಸುವಾಗ, ಕುಡಿಯುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಲೇಬಾರದು!

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

    ಹಿರೇಕೋಡಿ ಗ್ರಾಮದ ನಂದಿಪರ್ವತ ಜೈನ ಆಶ್ರಮದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ಜುಲೈ 6ರಂದು ಬೆಳಗ್ಗೆ ತಮ್ಮ ಆಶ್ರಮದಿಂದ ನಾಪತ್ತೆಯಾಗಿದ್ದರು. ಜೈನಮುನಿ ಕಾಣಿಸದಿದ್ದಾಗ ಆಶ್ರಮದ ಭಕ್ತರೇ ಶೋಧ ನಡೆಸಿದ್ದರು. ಆದರೆ, ಜೈನಮುನಿ ಸುಳಿವು ಸಿಗದಿದ್ದಾಗ ಚಿಕ್ಕೋಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡು‌ ತನಿಖೆ ಕೈಗೊಂಡಿದ್ದ ಚಿಕ್ಕೋಡಿ ಪೊಲೀಸರು, ಅನುಮಾನದ ಮೇಲೆ ಇಬ್ಬರನ್ನು ವಶಕ್ಕೆ ಪಡೆದಿದ್ದರು. ನಂತರ ತನಿಖೆಯ ವೇಳೆ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಹತ್ಯೆ ಮಾಡಿರುವ ರಹಸ್ಯ ಬಯಲಾಯಿತು. (ದಿಗ್ವಿಜಯ ನ್ಯೂಸ್​)

    ಬದಲಾಯಿತು ಪಾಕ್​ ಮಹಿಳೆಯ ಜೀವನ ಶೈಲಿ: ಮಾಂಸಾಹಾರಿ ಸೀಮಾ ಈಗ ಸಸ್ಯಾಹಾರಿ, ನಿತ್ಯವೂ ದೇವರ ಸೇವೆ!

    ವರುಣನ ಅಬ್ಬರಕ್ಕೆ ಅಪಾಯ ಮಟ್ಟ ಮೀರಿದ ಯುಮುನಾ ನದಿ: ರಾಷ್ಟ್ರ ರಾಜಧಾನಿಗೆ ಪ್ರವಾಹ ಭೀತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts