More

    ‘ಆರ್​ಆರ್​ಆರ್​’ಗಿಂತಲೂ ಕಾಸ್ಟ್ಲಿಯಾಗಿರುತ್ತದಾ ರಾಜಮೌಳಿ ಹೊಸ ಚಿತ್ರ?

    ಹೈದರಾಬಾದ್​: ರಾಜಮೌಳಿ ಚಿತ್ರ ಮಾಡುತ್ತಾರೆ ಎಂದರೆ, ಏನು ಕಥೆ ಎಂದು ಯಾರೂ ಕೇಳುವುದಿಲ್ಲ. ಆದರೆ, ಚಿತ್ರದ ಬಜೆಟ್​ ಎಷ್ಟು ಎಂದು ತಪ್ಪದೇ ಕೇಳುತ್ತಾರೆ. ಅದಕ್ಕೆ ಕಾರಣ, ರಾಜಮೌಳಿ ನಿರ್ದೇಶನದ ಚಿತ್ರಗಳ ಗಾತ್ರ. ಅವರ ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರದ ಬಜೆಟ್​ 350 ಕೋಟಿ ಎಂದು ಹೇಳಲಾಗುತ್ತಿದ್ದು, ಇದು ಭಾರತದಲ್ಲೇ ಅತ್ಯಂತ ದೊಡ್ಡ ಬಜೆಟ್​ನ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಇದನ್ನೂ ಓದಿ: ಬಾಲಿವುಡ್​ ಮಂದಿ ಕಿರುಕುಳ ಕೊಟ್ಟರೆ ದೇಶ ಬಿಡುತ್ತಾರಂತೆ ಕೆಆರ್​ಕೆ

    ಈಗ ತಮ್ಮದೇ ದಾಖಲೆಯನ್ನು ತಾವೇ ಮುರಿಯುವುದಕ್ಕೆ ಮುಂದಾಗುತ್ತಿದ್ದಾರೆ ರಾಜಮೌಳಿ. ಮಹೇಶ್​ ಬಾಬು ಅಭಿನಯದಲ್ಲಿ ಅವರೊಂದು ಚಿತ್ರ ನಿರ್ದೇಶಿಸಿರುವ ವಿಷಯ ಗೊತ್ತಲ್ಲ? ಆ ಚಿತ್ರವು ಬಜೆಟ್​ ವಿಚಾರದಲ್ಲಿ ‘ಆರ್​ಆರ್​ಆರ್​’ ಚಿತ್ರವನ್ನೂ ಮೀರಿಸುತ್ತದೆ ಎಂದು ಹೇಳಲಾಗುತ್ತಿದೆ.

    ಮಹೇಶ್​ ಬಾಬು ಅಭಿನಯದಲ್ಲಿ ರಾಜಮೌಳಿ ಯಾವ ತರಹದ ಚಿತ್ರ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ, ಕಥೆ ಏನು ಎಂಬುದು ಯಾರಿಗೂ ಬಹಿರಂಗ ಮಾಡಿಲ್ಲ. ಆದರೆ, ಚಿತ್ರದ ಬಜೆಟ್​ ಮಾತ್ರ ‘ಆರ್​ಆರ್​ಆರ್​’ಗಿಂತಲೂ ಹೆಚ್ಚಾಗಿರುತ್ತದೆ ಎಂಬ ಸುದ್ದಿಯೊಂದು ಎರಡು ದಿನಗಳಿಂದ ಕೇಳಿಬರುತ್ತಲೇ ಇದೆ. ಬಜೆಟ್​ ಯಾವಾಗಲೂ ಕಥೆಗಳ ಮೇಲೆ ಅವಲಂಬಿತವಾಗಿರುತ್ತದೆ. ಹೊಸ ಚಿತ್ರವು, ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುತ್ತದೆ ಎಂದರೆ, ಈ ಬಾರಿ ಎಂಥಾ ಕಥೆ ಮಾಡಿಕೊಂಡಿದ್ದಾರೆ ರಾಜಮೌಳಿ ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ಇದನ್ನೂ ಓದಿ: ದರ್ಶನ್​ ಹೆಸರಿನ ಸಿಂಹವನ್ನು ದತ್ತು ಪಡೆದ ನಿರ್ಮಾಪಕಿ ಶೈಲಜಾ ನಾಗ್​

    ಅಂದಹಾಗೆ, ‘ಆರ್​ಆರ್​ಆರ್​’ ಚಿತ್ರವು ಅಕ್ಟೋಬರ್​ 13ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರ ಇದೀಗ ಅನಿರ್ಧಿಷ್ಟವಾಗಿ ಮುಂದಕ್ಕೆ ಹೋಗಿದೆ. ಕಾರಣ, ಚಿತ್ರದ ಚಿತ್ರೀಕರಣ ಇನ್ನಷ್ಟೇ ಪೂರ್ತಿಯಾಗಬೇಕಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಸಹ ಸಾಕಷ್ಟು ಇದೆಯಂತೆ. ಈ ಹಿನ್ನೆಲೆಯಲ್ಲಿ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದು, ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ರಹಸ್ಯವನ್ನು ಚಿತ್ರತಂಡದವರು ಇನ್ನಷ್ಟೇ ಬಹಿರಂಗಪಡಿಸಬೇಕಿದೆ.

    ಇಟಾಲಿಯನ್​ ನಟನಿಗೆ ಗಾಳ ಹಾಕಿದ ಕರಣ್​ ಜೋಹರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts