More

    ಕಸ ವಿಂಗಡನೆ ಕಡ್ಡಾಯ

    ಮಹಾಲಿಂಗಪುರ: ಸರ್ಕಾರದ ಹೊಸ ನೀತಿ ಪ್ರಕಾರ ಕಸ ಸಂಗ್ರಹಿಸಿ ಪ್ಲಾಸ್ಟಿಕ್, ಹಸಿ ಹಾಗೂ ಒಣ ಕಸ ವಿಂಗಡನೆ ಕಡ್ಡಾಯವಾಗಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.

    2018-19 ನೇ ಸಾಲಿನ ಸ್ವಚ್ಛ ಭಾರತ ಮಿಷನ್ ಅನುದಾನದಡಿ ಮಹಾಲಿಂಗಪುರ ಪುರಸಭೆ ವತಿಯಿಂದ ಚಿಮ್ಮಡ ಗ್ರಾಮದಲ್ಲಿ 70.30 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗುವ ಘನತ್ಯಾಜ್ಯ ವಿಲೇೀವಾರಿ ಘಟಕದ ಶೆಡ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಪುರಸಭೆ ನೂತನ ಮುಖ್ಯಾಧಿಕಾರಿ ಎಚ್.ಎಸ್. ಚಿತ್ತರಗಿ ಮಾತನಾಡಿ, ಸರ್ಕಾರ ನಮಗೆ ಜನಸೇವೆ ಮಾಡುವ ಸುಯೋಗ ಒದಗಿಸಿದ್ದು, ಜನತೆ ನೆನೆಪಿಡುವ ಹಾಗೆ ಕಾಮಗಾರಿಗಳನ್ನು ಮಾಡಲಾಗುವುದು ಎಂದರು.

    ಬಿಜೆಪಿ ಮುಖಂಡ ಎಂ.ಐ. ಕೋಳಿಗುಡ್ಡ, ಮಹಾಲಿಂಗಪ್ಪ ಕುಳ್ಳೋಳ್ಳಿ, ಚನಬಸು ಹುರಕಡ್ಲಿ, ವಿಷ್ಣುಗೌಡ ಪಾಟೀಲ, ಬಸವರಾಜ ಹಿಟ್ಟಿನಮಠ, ರವಿ ಜವಳಗಿ, ಶಿವಾನಂದ ಅಂಗಡಿ, ರಾಜು ಚಮಕೇರಿ, ಬಸವರಾಜ ಯರಗಟ್ಟಿ, ಸಂಜು ಅಂಬಿ, ಪುರಸಭೆ ಅಧಿಕಾರಿಗಳಾದ ಡಿ.ಬಿ. ಪಠಾಣ್, ರಾಜು ಹೂಗಾರ, ಎಸ್.ಜಿ. ಅಳ್ಳಿಮಟ್ಟಿ, ಚಿಮ್ಮಡ ಗ್ರಾಮದ ಮುಖಂಡರಾದ ಮಲ್ಲು ಬಿರಾದಾರ ಪಾಟೀಲ, ಎಲ್.ಎಸ್. ಬಳಗಾರ, ಗುರುಪಾದ ಉರಬಿನವರ, ಯು.ಪಿ. ಬಳಗಾರ ಸೇರಿ ಮತ್ತಿತರರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts