More

    ನಷ್ಟ ಭರಿಸಿಕೊಡುವಂತೆ ವಿಶಾಲ್​ಗೆ ಆದೇಶ ಕೊಟ್ಟ ಮದ್ರಾಸ್ ಹೈಕೋರ್ಟ್​

    ಚೆನ್ನೈ: ಕಾಲಿವುಡ್​ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ವಿವಾದಾತ್ಮಕ ನಟ ಎಂದು ಹೆಸರು ಮಾಡಿದವರೆಂದರೆ ಅದು ವಿಶಾಲ್​. ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ವಿಶಾಲ್​ಗೆ ಮದರಾಸ್​ ಹೈಕೋರ್ಟ್​ ಇನ್ನೊಂದು ಶಾಕ್​ ನಿಡಿದೆ. ಟ್ರೈಡೆಂಟ್​ ಆರ್ಟ್ಸ್​ ಎಂಬ ನಿರ್ಮಾಣ ಸಂಸ್ಥೆಗೆ ಆಗಿರುವ ನಷ್ಟವನ್ನು ಭರಿಸಿಕೊಡುವಂತೆ ಆದೇಶ ನೀಡಿದೆ.

    ಟ್ರೈಡೆಂಟ್​ ಆರ್ಟ್ಸ್​​ ಸಂಸ್ಥೆ ನಿರ್ಮಿಸಿದ ‘ಆಕ್ಷನ್​’ ಎಂಬ ಚಿತ್ರದಲ್ಲಿ ವಿಶಾಲ್​ ನಟಿಸಿದ್ದರು. ಲಾಕ್​ಡೌನ್​ಗಿಂತ ಮುನ್ನ ಬಿಡುಗಡೆಯಾದ ಈ ಚಿತ್ರ 20 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿತ್ತು. ಈ ನಷ್ಟಕ್ಕೆ ಕಾರಣರಾದ ವಿಶಾಲ್​, ನಷ್ಟ ಭರಿಸಿಕೊಡಬೇಕು ಎಂದು ನಿರ್ಮಾಣ ಸಂಸ್ಥೆ ಕೋರ್ಟ್​ ಮೆಟ್ಟಿಲೇರಿತ್ತು. ತೀರ್ಪು ನೀಡಿರುವ ಕೋರ್ಟ್​, ನಷ್ಟ ಭರಿಸಿಕೊಡಬೇಕೆಂದು ವಿಶಾಲ್​ಗೆ ಆದೇಶಿಸಿದೆ.

    ಇದನ್ನೂ ಓದಿ: Photos: ಮಾಲ್ಡೀವ್ಸ್​ನಲ್ಲಿ ತಾಪ್ಸಿ ಏನ್ಮಾಡ್ತಿದ್ದಾರೆ? ನೀವೇ ನೋಡಿ …

    ಇಷ್ಟಕ್ಕೂ ಆಗಿದ್ದೇನೆಂದರೆ, ‘ಆಕ್ಷನ್​’ ಚಿತ್ರವನ್ನು ಕಡಿಮೆ ಬಜೆಟ್​ನಲ್ಲಿ ನಿರ್ಮಿಸಬೇಕು ಎಂಬುದು ನಿರ್ಮಾಣ ಸಂಸ್ಥೆಯ ಉದ್ದೇಶವಾಗಿತ್ತು. ಆದರೆ, ಚಿತ್ರದ ಬಜೆಟ್​ ಹೆಚ್ಚಿಸಿದರೆ, ಆಗ ಲಾಭವೂ ಹೆಚ್ಚಾಗುತ್ತದೆ ಎಂದು ಹೇಳಿ ಬಜೆಟ್​ ಹೆಚ್ಚುವಂತೆ ಮಾಡಿದ್ದರು.

    ಒಂದು ಪಕ್ಷ, ಚಿತ್ರ ಸೋತರೆ ನಷ್ಟ ಭರಿಸಿಕೊಡುವುದಾಗಿ ಹೇಳಿದ್ದರಂತೆ ವಿಶಾಲ್​. ಯಾವಾಗ ಅವರೇ ಈ ಮಾತು ಹೇಳಿದರೋ, ಅದನ್ನು ನಂಬಿ ನಿರ್ಮಾಣ ಸಂಸ್ಥೆಯು ಚಿತ್ರಕ್ಕೆ 44 ಕೋಟಿಯಷ್ಟು ಹಣವನ್ನು ಚಿತ್ರತಂಡ ಖರ್ಚು ಮಾಡಿತ್ತು. ಆದರೆ, 20 ಕೋಟಿ ಕಲೆಕ್ಷನ್​ ಸಹ ಆಗದಿದ್ದರಿಂದ, ನಿರ್ಮಾಣ ಸಂಸ್ಥೆಗೆ 20ಕ್ಕೂ ಹೆಚ್ಚು ಕೋಟಿ ರೂಪಾಯಿಗಳ ನಷ್ಟವಾಗಿತ್ತು.

    ಇದನ್ನೂ ಓದಿ: VIDEOS| ಹರಿಪ್ರಿಯಾ ಹೊಸ ಹೊಸ ಅವತಾರಗಳು… 

    ಕೊನೆಗೆ ನಷ್ಟ ಭರಿಸಿಕೊಡುವ ನಿಟ್ಟಿನಲ್ಲಿ, ‘ಚಕ್ರ’ ಎಂಬ ಇನ್ನೊಂದು ಚಿತ್ರ ಮಾಡಿಕೊಡುವುದಾಗಿ ವಿಶಾಲ್​ ಪ್ರಾಮಿಸ್​ ಮಾಡಿದ್ದರಂತೆ. ಆದರೆ, ಆ ಚಿತ್ರವನ್ನು ಇದೀಗ ತಮ್ಮದೇ ನಿರ್ಮಾಣ ಸಂಸ್ಥೆಯಡಿ ಅವರು ನಿರ್ಮಿಸಿದ್ದಾರೆ. ಈ ನಿಟ್ಟಿನಲ್ಲಿ, ತಮಗಾಗಿರುವ ನಷ್ಟವನ್ನು ಭರಿಸಿ ಕೊಡುವುದರ ಜತೆಗೆ, ಓಟಿಟಿಯಲ್ಲಿ ಚಕ್ರ ಬಿಡುಗಡೆಯಾಗದಂತೆ ತಡೆಯಬೇಕು ಎಂದು ನಿರ್ಮಾಣ ಸಂಸ್ಥೆಯು ಕೋರ್ಟ್​ ಮೆಟ್ಟಿಲೇರಿತ್ತು.

    ಅದರಂತೆ, ಮದ್ರಾಸ್​ ಹೈ ಕೋರ್ಟ್​, ವಿಶಾಲ್​ಗೆ ಚಿತ್ರದಿಂದ ಆಗಿರುವ ನಷ್ಟವನ್ನು ತುಂಬಿ ಕೊಡುವಂತೆ ಆದೇಶಿಸಿದೆ.

    ನಾಲ್ಕನೇ ಮದುವೆಯಾದ್ರಾ ಖ್ಯಾತ ಗಾಯಕ ಅನೂಪ್​ ಜಲೋಟ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts