More

    ಯೂಟ್ಯೂಬ್​ ವಿಡಿಯೋ ನೋಡಿ ಸೋರೆಕಾಯಿ ಜ್ಯೂಸ್​ ಮಾಡಿ ಕುಡಿದ ವ್ಯಕ್ತಿ ದುರಂತ ಸಾವು!

    ಇಂದೋರ್​: ಪ್ರಸ್ತುತ ಜಮಾನದಲ್ಲಿ ಅನೇಕರು ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಅಥವಾ ಗೊತ್ತಿಲ್ಲದೇ ಇರುವ ಸಂಗತಿಯನ್ನು ತಿಳಿದುಕೊಳ್ಳಲು ಯೂಟ್ಯೂಬ್​ (You tube) ಅನ್ನು ಅವಲಂಬಿಸಿದ್ದಾರೆ. ಅದರಲ್ಲೂ ಅಡುಗೆ ಸಂಬಂಧಿಸಿದ ವಿಡಿಯೋಗಳನ್ನು ಹೆಚ್ಚಿನಮ ಜನರು ವೀಕ್ಷಣೆ ಮಾಡುತ್ತಾರೆ. ಅಲ್ಲದೆ, ಆರೋಗ್ಯ ಸಂಬಂಧಿತ ಪರಿಹಾರಗಳಿಗಾಗೂ ಯೂಟ್ಯೂಬ್​ ಅನ್ನೇ ನೆಚ್ಚಿಕೊಂಡಿದ್ದಾರೆ. ಆದರೆ, ಒಂದು ಮಾತು ನೆನಪಿರಲಿ. ಯೂಟ್ಯೂಬ್​ (You tube) ಅಥವಾ ಗೂಗಲ್​ (Google)ನಲ್ಲಿ ಹೇಳುವುದೇ ಫೈನಲ್​ ಅಲ್ಲ. ಅದೇ ಫೈನಲ್​ ಅಂತಾ ತಿಳಿದುಕೊಂಡರೆ ಕೆಲವೊಮ್ಮೆ ಎಂಥಾ ಅನಾಹುಗಳು ಸಂಭವಿಸುತ್ತವೆ ಎನ್ನುವುದಕ್ಕೆ ಈ ಘಟನೆಯೇ ತಾಜಾ ಉದಾಹರಣೆಯಾಗಿದೆ.

    ಯೂಟ್ಯೂಬ್​ ವಿಡಿಯೋ (YouTube Video) ಒಂದನ್ನು ನೋಡಿ ತನ್ನ ಕೈ ನೋವಿಗೆ ಪರಿಹಾರ ಅಂತಾ ತಿಳಿದು ಸೋರೆಕಾಯಿ ಜ್ಯೂಸ್ (​Bottle gourd Juice) ಮಾಡಿ ಕುಡಿದ ವ್ಯಕ್ತಿ ದುರಂತ ಸಾವಿಗೀಡಾಗಿರುವ ಘಟನೆ ಮಧ್ಯಪ್ರದೇಶ (Madhya Pradesh)ದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಧರ್ಮೇಂದ್ರ ಕೊರೊಲೆ (32) ಎಂದು ಗುರುತಿಸಲಾಗಿದೆ. ಈತ ಖಂದ್ವಾ ಜಿಲ್ಲೆಯ ಸ್ವರ್ಣಬಾಘ್​ ಕಾಲನಿಯ ನಿವಾಸಿ. ವೃತ್ತಿಯಲ್ಲಿ ಚಾಲಕನಾಗಿದ್ದ.

    ಅಪಘಾತ (Accident)ದಿಂದಾಗಿ ಧರ್ಮೇಂದ್ರ ಅವರು ಬಹು ದಿನಗಳಿಂದ ಕೈ ನೋವಿನಿಂದ ಬಳಲುತ್ತಿದ್ದರು ಎಂದು ಅವರ ಸಂಬಂಧಿಕರಾದ ಮನೀಶ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಚಿಕಿತ್ಸೆ (Treatment) ಪಡೆದಿದ್ದರೂ ಆತನಿಗೆ ಪರಿಹಾರ ಸಿಕ್ಕಿರಲಿಲ್ಲ. ನಂತರ ನೋವಿಗೆ ಸಾಧ್ಯವಿರುವ ಔಷಧಿಗಾಗಿ ಯೂಟ್ಯೂಬ್‌ನಲ್ಲಿ ಹುಡುಕಿದಾಗ ಕಾಡಿನಲ್ಲಿ ಬೆಳೆದ ಬಾಟಲ್ ಸೋರೆಕಾಯಿ ನೋವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಕೊಂಡರು.

    ಯೂಟ್ಯೂಬ್​ ವಿಡಿಯೋ (YouTube Video) ನೋಡಿದ ಬಳಿಕ ಬಾಟಲ್ ಸೋರೆಕಾಯಿ ಬಗ್ಗೆ ಮಾಹಿತಿ ಸಂಗ್ರಹಿಸಿದ ಧರ್ಮೇಂದ್ರ, ಕಾಡೊಂದರಲ್ಲಿ ಸೋರೆಕಾಯಿ ಸಂಗ್ರಹಿಸಿದ್ದರು. ಬಳಿಕ ಅದನ್ನು ಜ್ಯೂಸ್ ಮಾಡಿ ಸೇವಿಸಿದರು. ಇದರ ಬೆನ್ನಲ್ಲೇ ಮಂಗಳವಾರ (ನ.08) ವಾಂತಿ ಮತ್ತು ತೀವ್ರ ಸುಸ್ತಿನಿಂದ ಬಳಲಿದ್ದರು. ಬಳಿಕ ಅವರ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದಾದರೂ ಧರ್ಮೇಂದ್ರ ಬದುಕುಳಿಯಲಿಲ್ಲ.

    ಶವಪರೀಕ್ಷೆ ವರದಿ ಬಂದ ನಂತರವಷ್ಟೇ ಧರ್ಮೇಂದ್ರ ಸಾವಿಗೆ ನಿಖರ ಕಾರಣ ತಿಳಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಧರ್ಮೇಂದ್ರ ಕೆಲವು ವರ್ಷಗಳಿಂದ ನಗರದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಅವರ ಕುಟುಂಬ ಸದಸ್ಯರ ಹೇಳಿಕೆಯನ್ನೂ ಪೊಲೀಸರು ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಕೋಟಿ ದಾಟಿದ ವೀವ್ಸ್: ವಿಜಯಾನಂದ ಹಾಡಿಗೆ ಎಲ್ಲೆಡೆ ಉತ್ತಮ ರೆಸ್ಪಾನ್ಸ್

    150 ವರ್ಷಗಳ ಬಳಿಕ ಮತ್ತೆ ಕನ್ನಡಕ್ಕಾಗಿ ಮಿಡಿದ ಕನ್ನಡ ನಿಘಂಟು ತಜ್ಞ ಫರ್ಡಿನೆಂಡ್ ಕಿಟೆಲ್ ಕುಟುಂಬ!

    ಮೋದಿ ಕಾರ್ಯಕ್ರಮಕ್ಕೆ ದೇವೇಗೌಡರನ್ನು ಕರೀಲಿಲ್ಲ ಅನ್ನೋದು ಹಸಿ ಸುಳ್ಳು! ಆಮಂತ್ರಣದ ದಾಖಲೆ ಬಿಡುಗಡೆ ಮಾಡಿದ ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts