More

    ಮೋದಿಜೀ ನಿಮ್ಮ ಬಗ್ಗೆ ಗೌರವವಿದೆ, ಆದರೆ ಕೆಳಮಟ್ಟದ ಅಧಿಕಾರಿಗಳಿಂದಾಗಿ ನಾನು ಸಾಯುತ್ತಿದ್ದೇನೆ ಎಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ!

    ಭೋಪಾಲ್​: ಗಿರಣಿ ಕಾರ್ಖಾನೆಯನ್ನು ನಡೆಸುತ್ತಿದ್ದ ವ್ಯಕ್ತಿಯೊಬ್ಬ ವಿದ್ಯುತ್​ ಬಿಲ್​ ಕಟ್ಟಲಾಗದೆಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಛತರ್​ಪುರದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮೊದಲು ಆತ ಪ್ರಧಾನಿ ನರೇಂದ್ರ ಮೋದಿಯವರಿಗೆ ಏಳು ಪುಟಗಳ ಡೆತ್​ ನೋಟ್​ ಬರೆದಿಟ್ಟಿರುವುದಾಗಿ ಹೇಳಲಾಗಿದೆ.

    ಮುನೇಂದ್ರ ರಾಜ್​ಪುತ್​ ಗಿರಣಿ ಕಾರ್ಖಾನೆಯನ್ನು ನಡೆಸುತ್ತಾನೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಆತನಿಗೆ ನಷ್ಟವುಂಟಾಗಿದ್ದು, ಕಳೆದ ಕೆಲ ತಿಂಗಳಿನಿಂದ ವಿದ್ಯುತ್​ ಬಿಲ್ ಕಟ್ಟಲಾಗಲಿಲ್ಲವಂತೆ. ಸುಮಾರು 80 ಸಾವಿರ ರೂಪಾಯಿ ವಿದ್ಯುತ್​ ಬಿಲ್​ ಬಾಕಿಯಿದೆಯಂತೆ. ಅದೇ ಕಾರಣಕ್ಕೆ ವಿದ್ಯುತ್​ ನಿಗಮದ ಅಧಿಕಾರಿಗಳು ಕಾರ್ಖಾನೆಗೆ ವಿದ್ಯುತ್​ ಸಂಪರ್ಕ ಕಡಿತಗೊಳಿಸಿದ್ದಾರೆ. ಅದರೊಂದಿಗೆ ಊರವರ ಎದುರಿಗೆ ಮುನೇಂದ್ರಗೆ ಅವಮಾನಿಸಿದ್ದಾರಂತೆ.

    ಅದರಿಂದಾಗಿ ಮನನೊಂದ ಆತ ತನ್ನ ಕಾರ್ಖಾನೆಯ ಬಳಿಯಿರುವ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
    ಪ್ರಧಾನಿ ಮೋದಿಯವರೇ ನನಗೆ ನಿಮ್ಮ ಬಗ್ಗೆ ಗೌರವವಿದೆ. ನಿಮ್ಮ ಸರ್ಕಾರ ಅದ್ಭುತ ಕೆಲಸಗಳನ್ನು ಮಾಡಿದೆ. ಆದರೆ ಕೆಳ ಮಟ್ಟದಲ್ಲಿರುವ ಅಧಿಕಾರಿಗಳು ಬಡವರ ಬದುಕನ್ನು ಇನ್ನಷ್ಟು ಬರಡು ಮಾಡುತ್ತಿದ್ದಾರೆ. ವಿದ್ಯುತ್​ ನಿಗಮದ ಅಧಿಕಾರಿಗಳ ಟಾರ್ಚರ್​ನಿಂದಾಗೇ ನಾನಿಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಆತ ಬರೆದಿದ್ದಾನೆ.

    ನನ್ನ ಮೃತ ದೇಹವನ್ನು ನಿಗಮದ ಅಧಿಕಾರಿಗಳಿಗೆ ಕೊಡಿ. ಬಳಕೆಗೆ ಬರುವ ಅಂಗಾಂಗಳನ್ನು ಮಾರಿಕೊಂಡು ಅವರು ವಿದ್ಯುತ್​ ಬಿಲ್​ ತುಂಬಿಸಿಕೊಳ್ಳಲಿ ಎಂದು ಆತ ಹೇಳಿಕೊಂಡಿದ್ದಾನೆ. ಪ್ರಕರಣವನ್ನು ಸ್ಥಳೀಯ ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

    ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts