19 ವರ್ಷಗಳ ನಂತರ ಬನ್ಸಾಲಿ ಚಿತ್ರದಲ್ಲಿ ಮಾಧುರಿ ದೀಕ್ಷಿತ್

blank

ಮುಂಬೈ: ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ದೇವದಾಸ್​ ಚಿತ್ರದಲ್ಲಿ ಚಂದ್ರಮುಖಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಮಾಧುರಿ ದೀಕ್ಷಿತ್​. ಚಿತ್ರ ಸೂಪರ್​ಹಿಟ್​ ಆಗಿತ್ತು. ಆ ನಂತರ ಅವರಿಬ್ಬರೂ ಒಟ್ಟಿಗೆ ಕೆಲಸ ಮಾಡುವ ಮಾತುಗಳು ಆಗಾಗ ಕೇಳಿಬರುತ್ತಿತ್ತಾದರೂ, ಅದು ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ಇನ್ನಿಬ್ಬರು ಸ್ಟಾರ್ ನಟರು ಸೇರ್ಪಡೆಯಾದರಂತೆ ಕಮಲ್ ಹಾಸನ್ ಹೊಸ ಚಿತ್ರಕ್ಕೆ …

ಈಗ 19 ವರ್ಷಗಳ ನಂತರ ಬನ್ಸಾಲಿ ಮತ್ತು ಮಾಧುರಿ ದೀಕ್ಷಿತ್​ ಒಟ್ಟಿಗೆ ಕೆಲಸ ಮಾಡುವ ಮುಹೂರ್ತ ಬಂದಿದೆ. ಸದ್ಯ, ಗಂಗೂಬಾಯಿ ಕತಿಯಾವಾಡಿ ಚಿತ್ರವನ್ನು ನಿರ್ದೇಶಿಸುತ್ತಿರುವ ಬನ್ಸಾಲಿ, ಅದನ್ನು ಇದೇ ವರ್ಷ ಬಿಡುಗಡೆ ಮಾಡುವ ಬಗ್ಗೆ ಯೋಚನೆ ಮಾಡಿದ್ದಾರೆ. ಈ ಮಧ್ಯೆ, ಅವರು ಹೀರಾ ಮಂಡಿ ಎಂಬ ಇನ್ನೊಂದು ಕಥೆಯನ್ನು ಸಿದ್ಧಪಡಿಸಿದ್ದು, ಅದರಲ್ಲಿ ನಟಿಸುವಂತೆ ಅವರು ಮಾಧುರಿ ದೀಕ್ಷಿತ್​ ಅವರನ್ನು ಕೇಳಿದ್ದಾರಂತೆ.

ಲಾಕ್​ಡೌನ್​ನಲ್ಲಿ ಹೀರಾ ಮಂಡಿ ಚಿತ್ರದ ಸ್ಕ್ರಿಪ್ಟ್​ ಕೈಗೆತ್ತಿಕೊಂಡಿದ್ದ ಬನ್ಸಾಲಿ, ಈಗಾಗಲೇ ಅದನ್ನು ಬಹುತೇಕ ಫೈನಲ್​ ಮಾಡಿದ್ದಾರೆ. ಈಗಾಗಲೇ ಅವರು ಸೋನಾಕ್ಷಿ ಸಿನ್ಹಾ ಮತ್ತು ಹ್ಯೂಮಾ ಖುರೇಶಿ ಅವರನ್ನು ಪ್ರಮುಖ ಪಾತ್ರಗಳಿಗೆ ಫೈನಲ್​ ಮಾಡಿದ್ದಾರೆ. ಚಿತ್ರದಲ್ಲಿ ಒಂದು ಮುಜ್ರ ಹಾಡಿದ್ದು, ಅದರಲ್ಲಿ ಮಾಧುರಿ ಅವರೇ ಕಾಣಿಸಿಕೊಂಡರೆ ಚೆನ್ನ ಎಂಬ ನಿರ್ಧಾರಕ್ಕೆ ಬನ್ಸಾಲಿ ಬಂದಿದ್ದಾರೆನ್ನಲಾಗಿದೆ.

ಇದನ್ನೂ ಓದಿ: ಆಕ್ಸಿಜನ್ ಬ್ಯಾಂಕ್ ಸ್ಥಾಪಿಸಲು ಮುಂದಾದ ಟಾಲಿವುಡ್ ನಟ ಚಿರಂಜೀವಿ

ಈ ವಿಷಯವನ್ನು ಅವರು ಮಾಧುರಿ ಅವರಿಗೂ ತಿಳಿಸಿದ್ದು, ಮಾಧುರಿ ಸಹ ಹಾಡಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ಗ್ರೀನ್​ ಸಿಗ್ನಲ್​ ನೀಡಿದ್ದಾರಂತೆ. ವೈಭವಯುತ ಸೆಟ್​ನಲ್ಲಿ ಈ ಮುಜ್ರ ಹಾಡಿನ ಚಿತ್ರೀಕರಣ ಆಗಲಿದೆಯಂತೆ.

ಬಡವರ ಹತ್ತಿರ ಭಿಕ್ಷೆ ಕೇಳಬೇಡಿ … ಕಂಗನಾ ಟಾಂಗ್ ಕೊಟ್ಟಿದ್ದು ಯಾರಿಗೆ?

Share This Article

ಹಗಲಿನಲ್ಲಿ ನಿದ್ದೆ ಮಾಡ್ತೀರಾ? Daytime Sleeping ಒಳ್ಳೆಯದೋ… ಕೆಟ್ಟದೋ..? sleeping

sleeping: ಸಾಮಾನ್ಯವಾಗಿ, ಅನೇಕ ಜನರು ಹಗಲಿನಲ್ಲಿ ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಿಗೆ ಎಷ್ಟೇ ಪ್ರಯತ್ನಿಸಿದರೂ ಹಗಲಿನಲ್ಲಿ…

ಪ್ರತಿದಿನ ಬೆಳಗ್ಗೆ ಎಳನೀರು ಕುಡಿಯುತ್ತೀರಾ? ಹಾಗಿದ್ರೆ ಇದು ನಿಮಗೆ ಗೊತ್ತಿರಲಿ…coconut water

coconut water: ಬೇಸಿಗೆಯಲ್ಲಿ ದೇಹವನ್ನು ಹೈಡ್ರೀಕರಿಸಲು ನೀರಿನ ಜತೆ ನೈಸರ್ಗಿಕ ಆರೋಗ್ಯಕರ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು.…

ಗಂಡ-ಹೆಂಡತಿಯ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾಗಿದ್ದರೆ ಈ ರೀತಿ ಸುಲಭವಾಗಿ ತಿಳಿದುಕೊಳ್ಳಬಹುದು..! Husband and Wife

Husband and Wife : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ…