More

    ಶ್ರೀಮುರಳಿಗೆ ತೆಲುಗು ಚಿತ್ರರಂಗಕ್ಕೆ ವೆಲ್​ಕಮ್​ ಮಾಡಿದ ಜಗಪತಿ ಬಾಬು

    ಬೆಂಗಳೂರು: ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರವು ತೆಲುಗಿಗೆ ಡಬ್​ ಆಗಿ ಬಿಡುಗಡೆಯಾಗುತ್ತಿರುವ ವಿಷಯ ಗೊತ್ತೇ ಇದೆ. ಇದೀಗ ಆ ಚಿತ್ರದ ತೆಲುಗು ಟೀಸರ್​ ಇಂದು ಬಿಡುಗಡೆಯಾಗಿದೆ.

    ಇದನ್ನೂ ಓದಿ: 2021ಕ್ಕೆ ಸ್ಟಾರ್ಸ್ ಸ್ವಾಗತ|ಹೆಚ್ಚೆಚ್ಚು ಸಿನಿಮಾಗಳನ್ನು ನೀಡುತ್ತೇನೆ..

    ‘ಮದಗಜ’ ಚಿತ್ರದ ಟೀಸರ್​, ಶ್ರೀಮುರಳಿ ಹುಟ್ಟುಹಬ್ಬದ ಅಂಗವಾಗಿ ಡಿಸೆಂಬರ್​ 17ರಂದು ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲ, ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಚಿತ್ರಕ್ಕೆ ಸಿಗುತ್ತಿರುವ ಪ್ರೋತ್ಸಾಹವನ್ನು ಗಮನಿಸಿದ ತೆಲುಗು ಮಂದಿ, ಚಿತ್ರವನ್ನು ತೆಲುಗಿಗೆ ಡಬ್​ ಮಾಡುವುದಕ್ಕೆ ಮುಂದಾದರು. ಆ ನಂತರ ಚಿತ್ರದ ತೆಲುಗು ಡಬ್ಬಿಂಗ್​ ಹಕ್ಕುಗಳು ಒಳ್ಳೆಯ ಬೆಲೆಗೆ ಮಾರಾಟವಾಗಿದೆ ಎಂಬ ಸುದ್ದಿಯೊಂದು ಬಂದಿತ್ತು.

    ಇದೀಗ ಚಿತ್ರದ ತೆಲುಗು ಟೀಸರ್​ ಬಿಡುಗಡೆಯಾಗಿದೆ. ಕನ್ನಡ ಚಿತ್ರದ ಟೀಸರ್​ಗೆ ಧ್ವನಿ ಕೊಟ್ಟಂತೆಯೇ, ತೆಲುಗು ಅವತರಣಿಕೆಗೂ ಮುರಳಿ ಧ್ವನಿ ನೀಡಿದ್ದಾರೆ. ಈ ಟೀಸರ್​, ಯೂಟ್ಯೂಬ್​ನ ಆದಿತ್ಯ ಚಾನಲ್​ನಲ್ಲಿ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ.
    ಎಲ್ಲಕ್ಕಿಂತ ಹೆಚ್ಚಾಗಿ, ತೆಲುಗಿನ ಹಿರಿಯ ನಟ ಜಗಪತಿ ಬಾಬು, ಶ್ರೀಮುರಳಿಗೆ ತೆಲುಗು ಚಿತ್ರರಂಗಕ್ಕೆ ಸುಸ್ವಾಗತ ಕೋರಿದ್ದಾರೆ. ತೆಲುಗು ಚಿತ್ರರಂಗಕ್ಕೆ ಸ್ವಾಗತ ಎಂದು ಹಾರೈಸಿದ್ದಾರೆ.

    ಇದನ್ನೂ ಓದಿ: 2021ಕ್ಕೆ ಸ್ಟಾರ್ಸ್ ಸ್ವಾಗತ| ಈ ವರ್ಷ ನಾಲ್ಕು ಸಿನಿಮಾ ಫಿಕ್ಸ್…

    ‘ಮದಗಜ’ ಚಿತ್ರಕ್ಕೆ ಮಹೇಶ್​ ಕುಮಾರ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ಉಮಾಪತಿ ಶ್ರೀನಿವಾಸ್​ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್​ ಇದ್ದು, ಮಿಕ್ಕಂತೆ ಚಿಕ್ಕಣ್ಣ, ದೇವಯಾನಿ, ಜಗಪತಿ ಬಾಬು ಮುಂತಾದವರು ನಟಿಸುತ್ತಿದ್ದಾರೆ. ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ.

    2021ಕ್ಕೆ ಸ್ಟಾರ್ಸ್ ಸ್ವಾಗತ| ಈ ಸಲ ಪ್ರವಾಸ ಮಿಸ್ ಮಾಡಲ್ಲ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts