More

    ಪಂಜಾಬ್​ನ ‘ತಬ್ಲಿಘಿ ಜಮಾತ್​’ ಎಂದು ಕರೆದಿದ್ದು ಯಾವ ವಿಶ್ವವಿದ್ಯಾಲಯವನ್ನು? ಆ ವಿವಿ ಮಾಡಿದ್ದಾದರೂ ಏನು?

    ಜಲಂಧರ್​: ಪಂಜಾಬ್​ನಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಸೋಂಕು ಹಬ್ಬುವುದನ್ನು ತಡೆಯಲು ಅಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಜನರು ಪಾಸ್​ ಇಲ್ಲದೆ ಮನೆಯಿಂದ ಹೊರಗೆ ಬರುವಂತೆಯೇ ಇಲ್ಲ. ಅಷ್ಟೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

    ಇಂಥ ಸಂದರ್ಭದಲ್ಲಿ 2,100ಕ್ಕೂ ಅಧಿಕ ಜನರು ಖಾಸಗಿ ವಿವಿಯೊಂದರ ಆವರಣದಲ್ಲಿ ಆಶ್ರಯ ಪಡೆದಿರುವುದು ಬೆಳಕಿಗೆ ಬಂದಿದೆ.
    ಪಗ್ವಾರಾದ ಜಲಂಧರ್​- ದೆಹಲಿ ರಸ್ತೆಯಲ್ಲಿರುವ ಲವ್ಲೀ ಪ್ರೊಫೆಷನಲ್​ ಯುನಿವರ್ಸಿಟಿ ದೇಶದ ಅತಿದೊಡ್ಡ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದೆನಿಸಿದೆ. ಇಲ್ಲಿ ದೇಶ-ವಿದೇಶದ ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಕರೊನಾ ಸೋಂಕು ವ್ಯಾಪಿಸುತ್ತಿದ್ದಂತೆ, ವಿವಿಗೂ ಸೂಚನೆಗಳನ್ನು ನೀಡಲಾಗಿತ್ತು. ಕ್ಯಾಂಪಸ್​ನಲ್ಲಿ ಕೇವಲ 315 ವಿದೇಶಿಯರಿದ್ದಾರೆ. ಲಾಕ್​ಡೌನ್​ ಕಾರಣದಿಂದಾಗಿ ವಿಮಾನಯಾನ ಸಾಧ್ಯವಾಗದ ಕಾರಣ ಅವರಿಗೆ ಕ್ಯಾಂಪಸ್​ನಲ್ಲಿಯೇ ಆಶ್ರಯ ನೀಡಲಾಗಿದೆ ಎಂದು ವಿವಿ ಅಧಿಕಾರಿಗಳು ಈ ಮೊದಲು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದರು.

    ಇಲ್ಲಿನ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿಯೊಬ್ಬ ಸೋಂಕಿಗೆ ಒಳಗಾಗುತ್ತಿದ್ದಂತೆ ವಿವಿಯ ನಿಜ ಬಣ್ಣ ಬಯಲಾಗಿದೆ. ಏಕೆಂದರೆ, ವಿವಿ ಆವರಣದಲ್ಲಿ 2,100ಕ್ಕೂ ಹೆಚ್ಚು ಜನರಿರುವುದು ಬೆಳಕಿಗೆ ಬಂದಿದೆ. ಇಲ್ಲಿರುವ ಮೆಸ್​ಗಳ ಸಿಬ್ಬಂದಿ ಸಂಖ್ಯೆಯೇ 570 ಆಗಿದೆ. ಇದಲ್ಲದೇ, 179 ಬೋಧಕ ವರ್ಗದವರು, 46 ವಾರ್ಡನ್​ಗಳು, ಇತರ ಉದ್ಯೋಗಿಗಳು ಇದ್ದಾರೆ ಎಂದು ಜಿಲ್ಲಾಧಿಕಾರಿ ಗುರುವಿಂದರ್​ ಸಿಂಗ್​ ಜೋಹಲ್​ ತಿಳಿಸಿದ್ದಾರೆ. ಇದೀಗ ಕ್ಯಾಂಪಸ್​ನಲ್ಲಿರುವವರ ನೈಜ ಸಂಖ್ಯೆ ತಿಳಿಸುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ.

    ವಿಶ್ವವಿದ್ಯಾಲಯದ ಈ ಕ್ರಮ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ವಿವಿಯು ಪಂಜಾಬ್​ನ ‘ತಬ್ಲಿಘಿ ಜಮಾತ್​’ ನಂತಾಗಿದೆ ಎಂದು ಸ್ಥಳೀಯ ಕಾಂಗ್ರೆಸ್​ ಮುಖಂಡರು ಹೇಳಿದ್ದಾರೆ. ವಿದ್ಯಾರ್ಥಿಗಳ ವಿವರಗಳನ್ನು ಮುಚ್ಚಿಟ್ಟ ವಿವಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿವಿ ಎದುರು ಪ್ರತಿಭಟನೆಯನ್ನು ನಡೆಸಿದ್ದಾರೆ. ವಿವಿಯ ವಿದ್ಯಾರ್ಥಿಗಳ ಜೀವದ ಚೆಲ್ಲಾಟವಾಡಿರುವುದು ಮಾತ್ರವಲ್ಲದೆ, ಸುತ್ತಲಿನ ಹತ್ತಾರು ಹಳ್ಳಿಗಳ ಜನರ ಬದುಕಿಗೂ ಕುತ್ತು ತರುವ ಕಾರ್ಯ ನಡೆಸಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ.

    ಈ ನಡುವೆ, ಪಂಜಾಬ್​ ಉನ್ನತ ಶಿಕ್ಷಣ ಇಲಾಖೆ ವಿವಗೆ ನೋಟಿಸ್​ ಜಾರಿ ಮಾಡಿದ್ದು, ವಿವಿ ಆರಂಭಕ್ಕೆ ನೀಡಲಾಗಿದ್ದ, ನಿರಾಕ್ಷೇಪಣಾ ಪತ್ರವನ್ನೇಕೆ ಹಿಂಪಡೆಯಬಾರದು ಎಂಬುದಕ್ಕೂ ವಿವರ ನೀಡಿ ಎಂದಿದೆ. ಇದಕ್ಕೆ ಉತ್ತರ ನೀಡುವುದಾಗಿ ವಿವಿ ಹೇಳಿದೆ.

    ಏಪ್ರಿಲ್​ 20ರ ನಂತರ ಬದಲಾಗಲಿದೆ ಪರಿಸ್ಥಿತಿ, ಆನ್​ಲೈನ್​ ಶಾಪಿಂಗ್​ ಮೇಲಿದ್ದ ನಿರ್ಬಂಧ ತೆರವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts