More

    ಬೀದರ್​ನಲ್ಲಿ ರಾಜ್ಯದಲ್ಲೇ ಅತಿಹೆಚ್ಚು ಚಳಿ; ರಾಜ್ಯಾದ್ಯಂತ ಇನ್ನಷ್ಟು ಹೆಚ್ಚಲಿದೆ ಚಳಿ

    ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಸರಾಸರಿ 4-6 ಡಿಗ್ರಿ ಸೆಲ್ಸಿಯಸ್ ಕುಸಿತವಾಗಿದೆ. ಸೋಮವಾರ ಇತರೆ ಜಿಲ್ಲೆಗಳಕ್ಕಿಂತ ಬೀದರ್‌ನಲ್ಲಿ ಅತಿ ಕಡಿಮೆ 6.0 ಉಷ್ಣಾಂಶ ದಾಖಲಾಗಿದೆ.

    ಮುಂಬರುವ ದಿನಗಳಲ್ಲಿ ಬೀದರ್‌ನಲ್ಲಿ ಕನಿಷ್ಠ ತಾಪಮಾನ 5.0 ಡಿಗ್ರಿ ಸೆಲ್ಸಿಯಸ್​ಗೆ ಇಳಿಕೆಯಾಗುವ ಸಾಧ್ಯತೆ ಇದೆ. 2-3 ವರ್ಷಗಳ ಹಿಂದೆ ಇಷ್ಟೇ ತಾಪಮಾನ ದಾಖಲಾಗಿತ್ತು. ಅಲ್ಲದೆ, ವಿಜಯಪುರ, ಕಲಬುರಗಿ ಹಾಗೂ ಯಾದಗಿರಿ ಸೇರಿ ಇನ್ನಿತರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಇನ್ನಷ್ಟು ಕುಸಿತವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಇದನ್ನೂ ಓದಿ: ವಾಪಸ್​ ಬಂದ್ರು ರಂಗೀಲಾ ಬೆಡಗಿ ಊರ್ಮಿಳಾ ಮಾತೊಂಡ್ಕರ್​… 

    ಧಾರವಾಡದಲ್ಲಿ 11.8, ರಾಯಚೂರಿನಲ್ಲಿ 14.0, ಬೆಂಗಳೂರಿನಲ್ಲಿ 14.5, ದಾವಣಗೆರೆಯಲ್ಲಿ 12.3, ಹಾಸನದಲ್ಲಿ 12.4 ಹಾಗೂ ಶಿವಮೊಗ್ಗದಲ್ಲಿ 13.8 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ತೇವಾಂಶ ಹೆಚ್ಚಳದಿಂದ ಬಿಸಿಲಿನ ಹೆಚ್ಚಳ ಕಡಿಮೆಯಾಗಿದೆ. ಉತ್ತರದಿಂದ ದಕ್ಷಿಣಕ್ಕೆ ಗಾಳಿ ಬೀಸುತ್ತಿರುವುದರಿಂದ ಕನಿಷ್ಠ ತಾಪಮಾನ ಇಳಿಕೆಯಾಗುತ್ತಿದೆ. ಸೂರ್ಯದಿಂದ ಭೂಮಿ ಅತಿ ಗರಿಷ್ಠ ದೂರಕ್ಕೆ ಹೋಗುವುದರಿಂದ ಸೂರ್ಯ ಕಿರಣಗಳ ಪ್ರಭಾವ ಕಡಿಮೆಯಾಗುವ ಹಿನ್ನೆಲೆಯಲ್ಲಿ ಚಳಿ ಕಾಣಿಸಿಕೊಳ್ಳುತ್ತಿದೆ ಎಂದು ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ ತಿಳಿಸಿದರು.

    ಇಲ್ಲಿ ನಿರ್ಮಾಣವಾಯ್ತು ನಟ ಸೋನು ಸೂದ್​ ದೇವಾಲಯ: ನಿತ್ಯವೂ ಪೂಜೆ, ಆರತಿ

    ಮನೆಗೆ ಕರೆಸಿಕೊಂಡು ಬಟ್ಟೆ ಬಿಚ್ಚಿಸುತ್ತಿದ್ದ! ಬಾಲಕನ ಮೇಲೆ ಬಾಲಕನಿಂದಲೇ ನಡೆಯುತ್ತಿತ್ತು ಲೈಂಗಿಕ ದೌರ್ಜನ್ಯ

    ಜಗಳ ಮಾಡುವಾಗ ಮೆದುಳಿನಿಂದ ಶಬ್ದ ಬರುತ್ತಿದ್ದು, ಭಯವಾಗುತ್ತಿದೆ; ಪರಿಹಾರ ಏನು?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts