More

    ಲಾಕ್​ಡೌನ್​​ನಲ್ಲಾಯ್ತು ಕಣ್​ ಕಣ್ಣ ಸಲಿಗೆ.. ಆತನಿಗೆ 38, ಆಕೆಗೆ 40.. ಈಗ ಇಬ್ಬರೂ ಎಂಗೇಜ್ಡ್​!

    ಲಾಕ್​ಡೌನ್​ ಯಾರ್ಯಾರನ್ನೋ ಎಲ್ಲೆಲ್ಲೋ ಬಂಧಿ ಆಗುವ ಹಾಗೆ ಮಾಡಿದ್ದರೆ, ಇಲ್ಲಿಬ್ಬರಿಗೆ ಲಾಕ್​ಡೌನ್​ನಲ್ಲಿ ಲವ್ ಎಟ್​ ಫಸ್ಟ್​ ಸೈಟ್​ ಆಗಿದ್ದಷ್ಟೇ ಅಲ್ಲ.. ಅದೇ ಅವರಿಗೀಗ ಅನುರಾಗ ಬಂಧನವೂ ಆಗಿದೆ.

    ವಿಶೇಷವೆಂದರೆ ವರ್ಷಗಟ್ಟಲೆ ಒಂದೇ ಕಡೆ ಇದ್ದೂ ಒಬ್ಬರನ್ನೊಬ್ಬರು ನೋಡಿರದಿದ್ದರೂ ಲಾಕ್​ಡೌನ್​ ಇವರಿಬ್ಬರ ಮಧ್ಯೆ ಕಣ್​ ಕಣ್ಣ ಸಲಿಗೆ ಉಂಟಾಗುವಂತೆ ಮಾಡಿದೆ. ಅಂದಹಾಗೆ ಇಂಥದ್ದೊಂದು ವಿಚಿತ್ರ ಪ್ರೇಮಪ್ರಸಂಗ ಸಂಭವಿಸಿದ್ದು ಇಟಲಿಯ ವೆರೊನಾ ಎಂಬಲ್ಲಿ. ಈ ಲವ್ ಎಟ್​ ಫಸ್ಟ್ ಸೈಟ್​ ಪ್ರೇಮಿಗಳ ಹೆಸರು ಮೈಕೆಲ್​ ಡಿ ಅಲ್ಪಾವೊಸ್​ ಹಾಗೂ ಪಾವೊಲಾ ಆ್ಯಗ್ನೆಲಿ. ಆತನಿಗೆ 38, ಆಕೆಗೆ 40.

    ಲಾಕ್​ಡೌನ್​ ಘೋಷಣೆ ಆದ ಬಳಿಕ ಮಾರ್ಚ್​ನಲ್ಲಿ ಪಾವೊಲಾ ಆ್ಯಗ್ನೆಲಿ ಮನೆಯೊಳಗೇ ಕೂತಿರಲು ಬೋರಾಗಿ ತಾನಿದ್ದ ಅಪಾರ್ಟ್​ಮೆಂಟ್​ನ ಬಾಲ್ಕನಿಗೆ ಬಂದಿದ್ದಳು. ಅದೇ ಸಮಯಕ್ಕೆ ಮೈಕೆಲ್​ ಡಿ ಅಲ್ಪಾವೊಸ್​ ಕೂಡ ಟೆರೇಸ್​ಗೆ ಬಂದಿದ್ದಾನೆ. ಆಗ ಒಬ್ಬರನ್ನೊಬ್ಬರು ನೋಡಿದ್ದು, ಪರಸ್ಪರ ಆಕರ್ಷಿತರಾಗಿದ್ದಾರೆ.

    ಆ್ಯಗ್ನೆಲಿ ತನ್ನ ಐದನೇ ವಯಸ್ಸಿನಿಂದ ಆ ಅಪಾರ್ಟ್​ಮೆಂಟ್​ನ ಆರನೇ ಮಹಡಿಯಲ್ಲಿದ್ದರೂ, ಅಲ್ಲೇ ಎದುರುಗಡೆ ಏಳನೇ ಮಹಡಿಯಲ್ಲಿ ನೆಲೆಸಿದ್ದ ಮೈಕೆಲ್​ನನ್ನು ಒಮ್ಮೆಯೂ ನೋಡಿರಲಿಲ್ಲವಂತೆ. ಆದರೆ ಆತನ ಸೋದರಿಗೆ ಆ್ಯಗ್ನೆಲಿಯ ಪರಿಚಯವಿತ್ತು. ತನ್ನ ಗಮನ ಸೆಳೆದ ಯುವತಿಯ ಹೆಸರನ್ನು ತಂಗಿ ಮೂಲಕ ತಿಳಿದುಕೊಂಡ ಮೈಕೆಲ್​, ಆಕೆಗೋಸ್ಕರ ಇನ್​ಸ್ಟಾಗ್ರಾಮ್​ ಖಾತೆ ತೆರೆದು ಆಕೆಯ ಪ್ರೊಫೈಲ್​ ಹುಡುಕಿ ಫ್ರೆಂಡ್​ ಆಗಿದ್ದ. ಅಲ್ಲಿಂದ ಅವರಿಬ್ಬರ ಪರಿಚಯ, ಸ್ನೇಹಕ್ಕೆ ತಿರುಗಿ, ಪ್ರೀತಿಯಾಗಿ ಇದೀಗ ಆರು ತಿಂಗಳ ಬಳಿಕ ಇಬ್ಬರ ಎಂಗೇಜ್​ಮೆಂಟ್​ ಆಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts