More

    ‘ಜೈಲಲ್ಲಿ ನನ್ನ ರೇಪ್​ ಮಾಡಿದರು, ಕಿಸ್​ ಮಾಡೆಂದು ಹಿಂಸಿಸಿದರು!’ ಜೈಲುವಾಸದ ಅನುಭವ ಹಂಚಿಕೊಂಡ ಸಾಮಾಜಿಕ ಕಾರ್ಯಕರ್ತೆ

    ರಿಯಾದ್​: ಸೌದಿ ಅರೇಬಿಯಾದ ಜೈಲಲ್ಲಿ 1001 ದಿನಗಳ ಜೈಲುವಾಸ ಪೂರೈಸಿ ಇದೀಗ ಹೊರಗೆ ಬಂದಿರುವ ಸಾಮಾಜಿಕ ಕಾರ್ಯಕರ್ತೆ ಲೌಜೈನ್​ ಅಲ್​ ಹಥ್ಲೌಲ್ ಜೈಲಲ್ಲಿ ತಾನು ಅನುಭವಿಸಿದ ನರಕ ಯಾತನೆಯನ್ನು ಹೇಳಿಕೊಂಡಿದ್ದಾರೆ. ಜೈಲಲ್ಲಿ ವಿಚಾರಣೆಗೆ ಬರುತ್ತಿದ್ದವರು ನನ್ನನ್ನು ರೇಪ್​ ಮಾಡಿದರು, ಕಿಸ್​ ಮಾಡೆಂದು ಹಿಂಸೆ ಕೊಟ್ಟರು ಎಂದು ಆಕೆ ಹೇಳಿಕೊಂಡಿದ್ದಾರೆ.

    ಲೌಜೈನ್ ಅಲ್ ಹಥ್ಲೌಲ್ ಸೌದಿ ಅರೇಬಿಯಾದಲ್ಲಿರುವ ಹೆಣ್ಣು ಗಂಡಿನ ಅಸಮಾನತೆ ಬಗ್ಗೆ ಧ್ವನಿ ಎತ್ತಿದ ಮಹಿಳೆ. ಸೌದಿಯಲ್ಲಿ ಕಾರುಗಳನ್ನು ಓಡಿಸಲು ಹೆಣ್ಣು ಮಕ್ಕಳಿಗೆ ಏಕೆ ಅನುಮತಿ ಇಲ್ಲ? ಯಾವಾಗಲೂ ಯಾವುದಾದರೂ ಪುರುಷ ಸಂಬಂಧಿಯೊಂದಿಗೇ ಏಕೆ ಓಡಾಡಬೇಕು ಎಂದು ಪ್ರಶ್ನಿಸಿದವಳು. ಸೌದಿ ಅರೇಬಿಯಾದ ಮಹಿಳಾ ವಿರೋಧಿ ಕಾನೂನುಗಳ ವಿರುದ್ಧ ಧ್ವನಿ ಎತ್ತಿ ಕಾರು ಡ್ರೈವ್​ ಮಾಡುವುದರ ಜತೆ ಅದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಅಕೆಯನ್ನು 2018ರಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬುಧವಾರದಂದು ಜೈಲಿನಿಂದ ಹೊರಗೆ ಬಂದಿರುವ ಆಕೆ ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾಳೆ.

    ಮೂರು ವರ್ಷಗಳ ಕಾಲ ನನ್ನನ್ನು ಜೈಲಿನಲ್ಲೇ ಅತ್ಯಾಚಾರ ಮಾಡಿದ್ದಾರೆ. ವಿಚಾರಣೆಗೆಂದು ಬರುತ್ತಿದ್ದ ಅಧಿಕಾರಿಗಳೆಲ್ಲರೂ ನನ್ನನ್ನು ರೇಪ್​ ಮಾಡಿದ್ದಾರೆ. ಒಬ್ಬರಲ್ಲ, ಇಬ್ಬರಲ್ಲ ಹಲವರಿಂದ ನಾನು ಅತ್ಯಾಚಾರಕ್ಕೆ ಒಳಗಾಗಿದ್ದೇನೆ. ಚುಂಬಿಸು ಎಂದು ಕೇಳುತ್ತಿದ್ದರು. ಅದಕ್ಕೆ ನಾನು ಒಪ್ಪದಿದ್ದಾಗ ಹಿಂಸೆ ಮಾಡುತ್ತಿದ್ದರು ಎಂದು ಆಕೆ ತಿಳಿಸಿದ್ದಾರೆ.

    ಈ ಕುರಿತಾಗಿ ಮಾನವ ಹಕ್ಕುಗಳ ವಕೀಲ ಬ್ಯಾರನೆಸ್ ಹೆಲೆನಾ ಕೆನಡಿ ಕೂಡ ಮಾಹಿತಿ ನೀಡಿದ್ದಾರೆ. ಲೌಜೈನ್​ಗೆ ಜೈಲಿನಲ್ಲಿ ನೀಲಿ ಚಿತ್ರಗಳನ್ನು ತೋರಿಸಲಾಗಿದೆ. ಆಕೆಯನ್ನು ಅತ್ಯಾಚಾರ ಮಾಡಲಾಗಿದೆ. ಕಟ್ಟಿ ಹಾಕಿ ನೇತು ಹಾಕಿ ಚಿತ್ರಹಿಂಸೆ ಕೊಡಲಾಗಿದೆ. ಕರೆಂಟ್​ ಶಾಕ್​ ಕೊಟ್ಟೂ ಹಿಂಸೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಬ್ಯೂಟಿ ಕ್ವೀನ್​ ಜೆನ್ನಾ ಕಾಂಜೊ ಹತ್ಯೆ! ಲೆಬನನ್​​ನ ರಸ್ತೆ ರಸ್ತೆಗಳಲ್ಲಿ ಆರಂಭವಾದ ಹೋರಾಟ

    ಮುಸ್ಲಿಂ ಹೆಣ್ಣುಮಕ್ಕಳಿಗೆ 18 ವರ್ಷ ಆಗದಿದ್ದರೂ ಪ್ರೌಢಾವಸ್ಥೆಗೆ ಬಂದರೆ ಮದುವೆಗೆ ಸ್ವತಂತ್ರರು; ಹೈಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts