More

    ಸೌದಿಯಲ್ಲಿ ಹೈದರಾಬಾದಿ ಪತ್ನಿ ಮೇಲೆ ಪಾಕ್​ ವ್ಯಕ್ತಿ ಹಲ್ಲೆ: ರಕ್ಷಣೆಗಾಗಿ ವಿದೇಶಾಂಗ ಸಚಿವಾಲಯ ಮೊರೆ ಹೋದ ಕುಟುಂಬ

    ಹೈದರಾಬಾದ್​: ಸೌದಿ ಅರೇಬಿಯಾದಲ್ಲಿ ತನ್ನ ಪುತ್ರಿ ಮೇಲೆ ಆಕೆಯ ಪತಿ ಪಾಕಿಸ್ತಾನಿ ಮೂಲದ ವ್ಯಕ್ತಿ ‘ಹಲ್ಲೆ ನಡೆಸಿದ್ದು, ಆಕೆ ಮತ್ತು ಮೂವರು ಮಕ್ಕಳನ್ನು ರಕ್ಷಿಸಬೇಕೆಂದು ಸಂತ್ರಸ್ತೆಯ ತಾಯಿ ವಿದೇಶಾಂಗ ಇಲಾಖೆ ಸಚಿವ ಜೈಶಂಕರ್‌ ಸಹಾಯ ಕೋರಿದ್ದಾರೆ
    ತನ್ನ ಮಗಳು ಮತ್ತು ಮಕ್ಕಳನ್ನು ರಕ್ಷಿಸುವಂತೆ ಕೋರಿ ಹೈದರಾಬಾದ್‌ನಲ್ಲಿರುವ ಸಂತ್ರಸ್ತೆ ಸಾಬಾ ಬೇಗಂ ತಾಯಿ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

    ಇದನ್ನೂ ಓದಿ: ನೀವು ಮುಖೇಶ್ ಅಂಬಾನಿಯಾಗಿದ್ದರೆ ನನಗೇನು? ಐ ಡೋಂಟ್ ಕೇರ್: ಮದುವೆಯ 100 ಕೋಟಿ ಆಫರ್ ರಿಜೆಕ್ಟ್ ಮಾಡಿದ ಗಾಯಕ!

    ಆರೋಪಿ ಅಲಿ ಹುಸೇನ್ ಪಾಕಿಸ್ತಾನ ಮೂಲದವನಾಗಿದ್ದು, ಹೈದರಾಬಾದ್​ನ ರಾಜೇಂದ್ರನಗರದ ಸಾಬೇರಾ ಬೇಗಂ ಎಂಬುವರ ಪುತ್ರಿ ಸಾಬಾರನ್ನು ನಿಖಾ ಮಾಡಿಕೊಂಡಿದ್ದ. ಸೌದಿಯಲ್ಲಿ ನೆಲೆಸಿದ್ದ ಆತ ವರದಕ್ಷಿಣೆಗೆ ಪೀಡಿಸುತ್ತಿದ್ದು ಅದನ್ನು ನೀಡದ ಹಿನ್ನೆಲೆಯಲ್ಲಿ ಸಾಬಾರನ್ನು ಬಿಟ್ಟು ಹೋಗಿದ್ದ. ಮಗಳಿಗೆ ಇನ್ನೊಂದು ಮದುವೆ ಮಾಡಿಸಲು ಪಾಲಕರು ತಮ್ಮ ಪರಿಚಯಸ್ಥರನ್ನು ಸಂಪರ್ಕಿಸಿದ್ದರು. ಆದರೆ ಫೆಬ್ರವರಿ 2014 ರಲ್ಲಿ ಸಬಾ ಮತ್ತು ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನೊಂದಿಗೆ ಮತ್ತೆ ಸೌದಿಗೆ ಕರೆದೊಯ್ದಿದ್ದ ಎನ್ನಲಾಗಿದೆ.

    ಬಳಿಕ ಅಲಿ ಹುಸೇನ್ ಸಬಾಗೆ ಕಿರುಕುಳ ನೀಡಲು ಮುಂದಾಗಿದ್ದು, ಆಕೆಯ ಮೇಲೆ ನಿರ್ಬಂಧಗಳನ್ನು ಹೇರಲು ಪ್ರಾರಂಭಿಸಿದ್ದ. ತನ್ನ ಮಗಳನ್ನು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಿದ್ದ ಎಂದು ಸಾಬಾ ಅವರ ತಾಯಿ ಸಬೇರಾ ಬೇಗಂ ದೂರಿದ್ದಾರೆ.

    ಇತ್ತೀಚೆಗಷ್ಟೇ ಅಲಿ ಹುಸೇನ್ ಬಾಂಗ್ಲಾದೇಶದ ಬಾಲಕಿ (17ವರ್ಷ)ಗೆ 20 ಸಾವಿರ ರಿಯಾಲ್ ಕೊಟ್ಟು ಖರೀದಿಸಿ ವಿವಾಹವಾಗಿದ್ದ. ಮೂರು ತಿಂಗಳ ವೀಸಾದ ಮೇಲೆ ಅಪ್ರಾಪ್ತ ಬಾಲಕಿಯನ್ನು ಸೌದಿಗೆ ಕರೆದೊಯ್ದಿದ್ದ. ಇದಾದ ನಂತರ ಸಬಾಗೆ ಹಿಂಸಿಸತೊಡಗಿದ.

    ಚಿತ್ರಹಿಂಸೆಯನ್ನು ಸಹಿಸಲಾಗದೆ ಸಾಬಾ ಬೇಗಂ ತನ್ನ ಮೂವರು ಮಕ್ಕಳೊಂದಿಗೆ ಓಡಿಹೋಗಿ ಜೆಡ್ಡಾದ ಹೋಟೆಲ್‌ನಲ್ಲಿ ತಲೆಮರೆಸಿಕೊಂಡಿರುವುದಾಗಿ ತಿಳಿಸಿದ್ದಾಳೆ. ಬಳಿಕ ಸಂತ್ರಸ್ತೆಯ ತಾಯಿ ವಿದೇಶಾಂಗ ಸಚಿವ ಜೈಶಂಕರ್‌ ಅವರ ಸಹಾಯ ಕೋರಿದ್ದಾರೆ

    ಇದಕ್ಕೆ ಪ್ರತಿಕ್ರಿಯಿಸಿದ ಸೌದಿಯಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಸಬೇರಾ ಬೇಗಂ ಮತ್ತು ಆಕೆಯ ಮಕ್ಕಳನ್ನು ಸಂಪರ್ಕಿಸಿದ್ದು, ಸುರಕ್ಷಿತವಾಗಿ ಕರೆತರುವ ಭರವಸೆ ನೀಡಿರುವುದಾಗಿ ಆಕೆ ಖಚಿತಪಡಿಸಿದ್ದಾಳೆ.

    ಅನುಷ್ಕಾ ನಂತರ ರಾಜಮೌಳಿ ಹೃದಯ ಕದ್ದ ನಾಯಕಿ ಯಾರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts