More

    ನನ್ನ ಪತ್ನಿ ಮನೆಯಲ್ಲೇ ಇರಿ ಅಂದ್ರೂ ಪ್ರವಾಸಕ್ಕೆ ಹೋದೆ… ಜಗದೀಶ್ವರನನ್ನು ಮೆಚ್ಚಿಸಬಹುದು, ಜಗ ಮೆಚ್ಚಿಸುವುದು ಕಷ್ಟ: ಸಿ.ಟಿ.ರವಿ

    ಬೆಂಗಳೂರು: ”ಪ್ರವಾಸಕ್ಕೆ ಹೋಗುವ ಮೊದಲು ನನ್ನ ಪತ್ನಿ ಪಲ್ಲವಿ, ‘ಭಾನುವಾರ ಯಾಕ್ರೀ ಹೋಗ್ತೀರಿ? ಎಲ್ಲರೂ ನಿಮ್ಮಂತೆಯೇ ಕೆಲಸ ಮಾಡುತ್ತಾರಾ? ಮನೆಯಲ್ಲೇ ಇರಿ’ ಎಂದಳು. ಆದರೂ ಹೋದೆ. ನಾನು ಪ್ರವಾಸ ಮಾಡಿದ್ದು ಸ್ವಂತ ಕಾರ್ಯಕ್ಕಲ್ಲ, ಸಾರ್ವಜನಿಕ ಕೆಲಸ ಮಾಡಲು” ಎಂದಿರುವ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಲಾಕ್​ಡೌನ್​ ನಿಯಮ ಉಲ್ಲಂಘನೆ ವಿವಾದದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ರಾಜ್ಯದಾದ್ಯಂತ ಭಾನುವಾರವಿಡೀ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದ್ದರೂ ನಿನ್ನೆ(ಭಾನುವಾರ) ಬೆಂಬಲಿಗರ ಜತೆ ಸಚಿವರು ಪ್ರವಾಸಿ ತಾಣಗಳಲ್ಲಿ ಸಂಚರಿಸಿ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದರು. ಆ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವರು, ”ಒಂದು ವೇಳೆ ನಾನು ಬಾರದಿದ್ದರೆ, ‘ಧರೆ ಕುಸಿದರೂ ಬಾರದ ಸಚಿವ, ಶಾಸಕ’ ಎಂದು ಟೀಕಿಸುತ್ತಾರೆ. ಏನು ಮಾಡುವುದು? ಅದಕ್ಕೆ ಹೇಳಿರಬೇಕು, ಜಗದೀಶ್ವರನನ್ನು ಮೆಚ್ಚಿಸಬಹುದು, ಜಗ ಮೆಚ್ಚಿಸುವುದು ಕಷ್ಟ. ನಾನು ಯಾರನ್ನು ಮೆಚ್ಚಿಸಲು ಕೆಲಸ ಮಾಡುತ್ತಿಲ್ಲ. ಜೀವನ ತುಕ್ಕು ಹಿಡಿದು ಹೋಗಬಾರದು, ಸವೆದು ಹೋಗಬೇಕೆಂದು ಕೆಲಸ ಮಾಡುತ್ತಿದ್ದೇನೆ” ಎಂದಿದ್ದಾರೆ. ಇದನ್ನೂ ಓದಿರಿ ವಿಭೂತಿ ಹಚ್ಚಿದರೆ ಕರೊನಾ ಬರಲ್ಲ!

    ”ಹಿಂದೆಯೂ ಲಾಕ್​ಡೌನ್ ಸಂದರ್ಭದಲ್ಲಿ ಕೆಲಸ ಮಾಡಿದ್ದೇನೆ. ಕೆಲಸ ಮಾಡಿದರೂ ತಪ್ಪು, ಮಾಡದಿದ್ದರೂ ತಪ್ಪು. ಹಾಗಿದ್ದರೆ ಯಾವುದು ಸರಿ? ನಿಯಮ ಮುರಿಯಬೇಕೆಂದು ಅಥವಾ ಇವೆಲ್ಲವನ್ನೂ ಮೀರಿದವನೆಂಬ ಅಹಂಕಾರವು ನನಗಿಲ್ಲ. ನನಗಿರುವುದು ಕರ್ತವ್ಯ ಪ್ರಜ್ಞೆ ಮಾತ್ರ. ನನ್ನ ಪ್ರವಾಸವನ್ನೇ ವಿವಾದದ ದೃಷ್ಟಿಯಿಂದ ನೋಡುವವರಿಗೆ ಇನ್ನೊಂದು ಮುಖವೂ ಇದೆ ಹಾಗೂ ಇರುತ್ತದೆ ಎಂದು ಹೇಳುವ ದೃಷ್ಟಿಯಿಂದಷ್ಟೇ ಇದನ್ನು ಹಂಚಿಕೊಳ್ಳುತ್ತಿದ್ದೇನೆ”.

    ನನ್ನ ಪತ್ನಿ ಮನೆಯಲ್ಲೇ ಇರಿ ಅಂದ್ರೂ ಪ್ರವಾಸಕ್ಕೆ ಹೋದೆ... ಜಗದೀಶ್ವರನನ್ನು ಮೆಚ್ಚಿಸಬಹುದು, ಜಗ ಮೆಚ್ಚಿಸುವುದು ಕಷ್ಟ: ಸಿ.ಟಿ.ರವಿ”ಮಾರ್ಚ್ 24ರಂದು ಜಾರಿಯಾದ ಲಾಕ್​ಡೌನ್​ ವೇಳೆಯೂ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಕೋವಿಡ್ ಸೋಂಕನ್ನು ಎದುರಿಸಲು ಬೇಕಾದ ಪೂರ್ವಸಿದ್ಧತೆಯ ತಯಾರಿ, ದುಡಿಯುವ ವರ್ಗಕ್ಕೆ ಅಗತ್ಯ ನೆರವು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಚಿಕ್ಕಮಗಳೂರು ನಗರದಾದ್ಯಂತ ಸೈಕಲ್​ನಲ್ಲೇ ಸಂಚರಿಸಿ ಜನರಲ್ಲಿ ವಿಶ್ವಾಸ ಮತ್ತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೆ” ಎಂದು ಸಿ.ಟಿ.ರವಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿರಿ ಕುಣಿಗಲ್​ ಶಾಸಕ ಡಾ.ರಂಗನಾಥ್​ಗೆ ಕರೊನಾ, ರಾಜ್ಯ-ರಾಷ್ಟ್ರಮಟ್ಟದ ಕಾಂಗ್ರೆಸ್​ ನಾಯಕರಲ್ಲೂ ಸೋಂಕಿನ ಭೀತಿ

    ”ಜಾವಳಿ, ದುರ್ಗದಹಳ್ಳಿ ಭಾಗದಲ್ಲಿ ಅಲ್ಲಲ್ಲಿ ಧರೆ ಕುಸಿತ ಲ್ಯಾಂಡ್ ಸ್ಲೈಡ್ ಆಗಿದೆ ಎಂಬ ಮಾಹಿತಿ ಬಂತು. ಹಾಗಾಗಿ ಭಾನುವಾರದ ಲಾಕ್​ಡೌನ್ ಅರಿವಿದ್ದರೂ ನಾನು ಪ್ರವಾಸ ಕೈಗೊಂಡೆ. ಪ್ರವಾಸೋದ್ಯಮ ಇಲಾಖೆಯ ಕಾಮಗಾರಿ ಬಗ್ಗೆ ಯೋಜನಾ ವರದಿ ತಯಾರಿಸಲು ಸ್ಥಳೀಯ ಅಗತ್ಯಕ್ಕೆ ತಕ್ಕ ನಿರ್ದೇಶನ ನೀಡಲು ನಾನು ಸೇರಿದಂತೆ ಆರೇಳು ಜನರ ಸಣ್ಣ ತಂಡದೊಂದಿಗೆ ಸ್ಥಳೀಯ ಶಾಸಕ ಕುಮಾರಸ್ವಾಮಿ ಅವರೊಂದಿಗೆ ದೇವರಮನೆ, ಹೇಮಾವತಿ ನದಿಯ ಉಗಮಸ್ಥಾನ ಜಾವಳಿ, ದುರ್ಗದ ಬೈಲು, ಬಲ್ಲಾಳರಾಯನ ದುರ್ಗ, ನಡುವಾಳೆ ಮೊದಲಾದ ಕಡೆ ಹೋಗಿದ್ದೆ”.

    ನನ್ನ ಪತ್ನಿ ಮನೆಯಲ್ಲೇ ಇರಿ ಅಂದ್ರೂ ಪ್ರವಾಸಕ್ಕೆ ಹೋದೆ... ಜಗದೀಶ್ವರನನ್ನು ಮೆಚ್ಚಿಸಬಹುದು, ಜಗ ಮೆಚ್ಚಿಸುವುದು ಕಷ್ಟ: ಸಿ.ಟಿ.ರವಿ”ಸೋಮವಾರ ಕಡೂರು ತರೀಕೆರೆಗೆ ಹೋಗುವ ಯೋಜನೆ ಇದ್ದಿದ್ದರಿಂದ ಮಂಗಳವಾರದಿಂದ ಬೆಂಗಳೂರಿಗೆ ಹೋಗಬೇಕಾಗಿದ್ದರಿಂದ, ಅನಿವಾರ್ಯವಾಗಿ ಈ ಹಿಂದೆಯೂ ಲಾಕ್​ಡೌನ್​ ವೇಳೆ ಜಿಲ್ಲೆಯಾದ್ಯಂತ ಸಂಚರಿಸಿದ ಕಾರಣ ಕರ್ತವ್ಯ ಪ್ರಜ್ಞೆಗಿಂತ ಉಳಿದ ಸಂಗತಿ ಗೌಣವಾಗಿದ್ದರಿಂದ ಮೂಡಿಗೆರೆ ತಾಲೂಕಿಗೆ ಪ್ರವಾಸ ಮಾಡಿ ಬಂದೆ. ನಾನು ಮಾಸ್ಕ್ ಧರಿಸಿಯೇ ಓಡಾಡಿದ್ದೇನೆ. ಉಳಿದವರಿಗೂ ಮಸ್ಕ್​ ಧರಿಸುವಂತೆ ಹಾಗೂ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸಿದ್ದೇನೆ. ನನ್ನೊಂದಿಗೆ ಬಂದವರು ಧರಿಸಿದ್ದರು, ಸ್ಥಳೀಯ ಕೆಲವರು ಧರಿಸಿರಲಿಲ್ಲ. ಅವರಿಗೆ ಗದರಿಸಿ ನನ್ನ ಕರ್ತವ್ಯ ಮಾಡಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

    ಬಸ್​ ನಿಲ್ದಾಣದಲ್ಲೇ ಕರೊನಾ ಶಂಕಿತನ ಶವ ಬಿಟ್ಟು ಹೋದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts