More

    ಇಸ್ಲಾಂ ಪ್ರಚಾರಕನ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ; 3 ಹಳ್ಳಿಗಳಿಗೆ ದಿಗ್ಬಂಧನ; ಸೂಪರ್​ ಸ್ಪ್ರೆಡರ್​ ಭೀತಿ

    ಗುವಾಹಟಿ: ಆಲ್​ ಇಂಡಿಯಾ ಜಮಾತ್​ ಉಲೇಮಾ ಉಪಾಧ್ಯಕ್ಷ ಹಾಗೂ ಈಶಾನ್ಯ ರಾಜ್ಯಗಳ ಅಮೀರ್​-ಎ- ಶರೀಯತ್​ ಆಗಿದ್ದ ಖೈರುಲ್​ ಇಸ್ಲಾಂ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಪಾಲ್ಗೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆದ ಸ್ಥಳದ ಸುತ್ತಲಿನ ಮೂರು ಗ್ರಾಮಗಳಿಗೆ ದಿಗ್ಬಂಧನ ವಿಧಿಸಲಾಗಿದೆ.

    ಗುವಾಹಟಿಯಲ್ಲಿ ಈಗಾಗಲೇ ಕರ್ಫ್ಯೂ ಜಾರಿಯಲ್ಲಿದೆ. ಜನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಅದರ ನಡುವೆ, ನೌಗಾಂವ್​ನಲ್ಲಿ ನಡೆದ 87 ವರ್ಷದ ಧರ್ಮ ಪ್ರಚಾರಕನ ಅಂತ್ಯಕ್ರಿಯೆಯಲ್ಲಿ 10 ಸಾವಿರ ಜನರು ಪಾಲ್ಗೊಂಡಿದ್ದರು ಎಂದು ಅಂದಾಜಿಸಲಾಗಿದೆ. ಇವರ ಮಗ ಅಮಿನುಲ್​ ಇಸ್ಲಾಂ ಸ್ಥಳೀಯ ಶಾಸಕ.

    ಇದನ್ನೂ ಓದಿ; ಕೋವಿಡ್​ ಎಫೆಕ್ಟ್​: ಬರ್ತ್​ ಡೇ ಪಾರ್ಟಿ ನೀಡಿದವನು ಆಸ್ಪತ್ರೆಗೆ; ಪಾಲ್ಗೊಂಡವನು ಮಸಣಕ್ಕೆ 

    ನಮ್ಮ ತಂದೆ ಸುತ್ತಲಿನ ಪ್ರದೇಶದಲ್ಲಿ ತುಂಬ ಜನಪ್ರಿಯ ವ್ಯಕ್ತಿಯಾಗಿದ್ದರು. ತಂದೆಯ ಸಾವಿನ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಮುನ್ನೆಚ್ಚರಿಕೆ ಕೈಗೊಂಡು, ಹಲವು ವಾಹನಗಳನ್ನು ಮಾರ್ಗ ಮಧ್ಯದಲ್ಲಿಯೇ ಹಿಂದಕ್ಕೆ ಕಳುಹಿಸಿದರೂ ಸಾವಿರಾರು ಜನರು ಬಂದಿದ್ದರು ಎಂದು ಶಾಸಕ ಅಮಿನುಲ್​ ಹೇಳಿದ್ದಾರೆ.

    ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಒಂದು ಪ್ರಕರಣ ದಾಖಲಿಸಿಕೊಂಡಿದ್ದರೆ, ಸ್ಥಳದಲ್ಲಿದ್ದ ದಂಡಾಧಿಕಾರಿಗಳು ಇನ್ನೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇದನ್ನೂ ಓದಿ; ಕರೊನಾದಿಂದ ಹೆಚ್ಚುತ್ತೆ ಪ್ರತಿರೋಧ ಶಕ್ತಿ; ಮರು ಸೋಂಕಿನ ಸಂಭಾವ್ಯತೆಯೂ ಕಡಿಮೆ 

    ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಿಲ್ಲ ಆದರೆ, ಲಾಕ್​ಡೌನ್​ ನಿಯಮ ಉಲ್ಲಂಘಿಸಿರುವುದು, ವ್ಯಕ್ತಿಗತ ಅಂತರ ಪಾಲಿಸದಿರುವುದು, ಮಾಸ್ಕ್​ ಧರಿಸದಿರುವುದು ಮೊದಲಾದ ಕಾರಣಗಳಿಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆದರೆ, ಅಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಒಂದೆಡೆ ಸೇರಿದ್ದು, ಕರೊನಾ ಸೂಪರ್​ಸ್ಪ್ರೆಡ್ಡರ್​ ಆಗುವ ಭೀತಿ ಅಧಿಕಾರಿಗಳದ್ದಾಗಿದೆ.

    ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts