More

    ಲಿಕ್ಕರ್​ ಮಾಫಿಯಾ ಮಟ್ಟಹಾಕಲು ಹೋದ ಪೇದೆ​ಯ ಹತ್ಯೆ, ಎಸ್​ಐ ಸ್ಥಿತಿ ಗಂಭೀರ: ಸಿಎಂ ಯೋಗಿ ಖಡಕ್​ ಆದೇಶ

    ಲಖನೌ: ಉತ್ತರ ಪ್ರದೇಶದ ಕಾಸ್​ಗಂಜ್​ ಜಿಲ್ಲೆಯಲ್ಲಿನ ಲಿಕ್ಕರ್​ ಮಾಫಿಯಾ ಮಟ್ಟಹಾಕಲು ಹೋಗಿ ದುಷ್ಕರ್ಮಿಗಳಿಂದ ಕಾನ್ಸ್​ಟೇಬಲ್ ಹತ್ಯೆಯಾಗಿದ್ದು, ಪ್ರಕರಣದ ಪ್ರಮುಖ ಆರೋಪಿಯನ್ನು ಎನ್​ಕೌಂಟರ್​ನಲ್ಲಿ ಹೊಡೆದುರುಳಿಸಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

    ಲಿಕ್ಕರ್​ ಮಾಫಿಯಾ ಕಿಂಗ್​ಪಿನ್​ಗೆ ವಾರೆಂಟ್​ ನೀಡಲು ಪೊಲೀಸ್​ ತಂಡವೊಂದು ಕಾಸ್​ಗಂಜ್​ ಜಿಲ್ಲೆಯ ಗ್ರಾಮವೊಂದಕ್ಕೆ ತೆರಳಿತ್ತು. ಈ ವೇಳೆ ದುಷ್ಕರ್ಮಿಗಳು ಕಾನ್ಸ್​ಟೇಬಲ್​ ಹತ್ಯೆ ಮಾಡಿದ್ದು, ಸಬ್​ ಇನ್ಸ್​ಪೆಕ್ಟರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆಂದು ಕಾಸ್​ಗಂಜ್​ ಪೊಲೀಸ್​ ವರಿಷ್ಠಾಧಿಕಾರಿ ಮನೋಜ್​ ಸೊಂಕರ್​ ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿರಿ: ತುಂಬಿದ ಶಾಲೆಯಲ್ಲಿ ಮಕ್ಕಳ ಮುಂದೆ ಹಸ್ತಮೈಥುನ ಮಾಡಿ, ವಿಡಿಯೋ ಹರಿಬಿಟ್ಟ ಶಿಕ್ಷಕಿ..!

    ಪ್ರಕರಣದ ಪ್ರಮುಖ ಆರೋಪಿಯನ್ನು ಎನ್​ಕೌಂಟರ್​ನಲ್ಲಿ ಹೊಡೆದುರುಳಿಸಲಾಗಿದೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮನೋಜ್​ ತಿಳಿಸಿದ್ದಾರೆ.

    ಕಾಸ್​ಗಂಜ್​ನಲ್ಲಿ ನಡೆದಿದ್ದೇನು?
    ಅಕ್ರಮ ಲಿಕ್ಕರ್​ ಕಾರ್ಖಾನೆ ಮೇಲೆ ದಾಳಿ ಮಾಡಲು ಮತ್ತು ಕಿಂಗ್​ಪಿನ್​ಗೆ ವಾರೆಂಟ್​ ನೀಡಲು ತೆರಳಿದ ಪೊಲೀಸ್​ ತಂಡದ ಮೇಲೆ ಗೂಂಡಾಗಳು ಮಂಗಳವಾರ ಸಂಜೆ ಕಾಸ್​ಗಂಜ್​ ಏರಿಯಾದಲ್ಲಿ ದಾಳಿ ಮಾಡಿದ್ದಾರೆ. ಈ ವೇಳೆ ಕಾನ್ಸ್​ಟೇಬಲ್​ ದೇವೇಂದ್ರ ಮೃತಪಟ್ಟಿದ್ದು, ಎಸ್​ಐ ಅಶೋಕ್​ ಕುಮಾರ್​ಗೆ ಗಂಭೀರ ಗಾಯವಾಗಿದೆ. ಮೂಲಗಳ ಪ್ರಕಾರ ಗೂಂಡಾಗಳು ಪೇದೆಯನ್ನು ಹಿಡಿದು ಬಟ್ಟೆಯನ್ನು ಕಿತ್ತೆಸೆದು ದೊಣ್ಣೆ ಮತ್ತು ಶಸ್ತ್ರಾಸ್ತ್ರಾಗಳಿಂದ ಹಿಗ್ಗಾಮುಗ್ಗ ಥಳಿಸಿದ್ದಾರೆನ್ನಲಾಗಿದೆ.

    ಇದನ್ನೂ ಓದಿರಿ: ಭೂಮಂಡಲದಲ್ಲಿ ನನ್ನಂಥ ನಟಿಯಿಲ್ಲ!; ಸುಳ್ಳಾದರೆ ಅಹಂಕಾರ ಬಿಡ್ತಾರಂತೆ ಕಂಗನಾ..

    ಸಿಎಂ ಯೋಗಿ ಆದಿತ್ಯನಾಥ್​ ಹೇಳಿದ್ದೇನು?
    ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಿಎಂ ಯೋಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಮೃತ ಕಾನ್ಸ್​ಟೇಬಲ್​ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದು, ಗಾಯಾಳು ಎಸ್​ಐಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)

    ರಾಮಮಂದಿರ ನಿರ್ಮಾಣಕ್ಕೆ 51 ಲಕ್ಷ ರೂ. ದೇಣಿಗೆ ನೀಡಿ ಕಾಂಗ್ರೆಸ್​ ಶಾಸಕಿ ಕೊಟ್ಟ ಕರೆ ಹೀಗಿದೆ…

    ಪೊಲೀಸ್ ಪರೀಕ್ಷೆ ನಕಲಿಗೆ ಬೇಲಿ; ಇಲಾಖೆಯಿಂದ ಬಯೋಮೆಟ್ರಿಕ್ ಅಸ್ತ್ರ

    ಹಿಮ ಕರಗಿ ದುರಂತ?; ವಿಜಯವಾಣಿ ಪ್ರತ್ಯಕ್ಷ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts