More

    ಓದುವ ಅಭಿರುಚಿ ಮೈಗೂಡಿಸಿಕೊಳ್ಳಿ- ಹನುಮಂತಗೌಡ ಪಾಟೀಲ್ ಸಲಹೆ

    ಲಿಂಗಸುಗೂರು: ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಭರಾಟೆಯಿಂದ ಓದುವ ಮತ್ತು ಸಾಹಿತ್ಯ ರಚಿಸುವ ಹವ್ಯಾಸ ಕ್ಷಿಣಿಸುತ್ತಿದೆ ಎಂದು ಶಾರದಾ ವಿದ್ಯಾ ಮಂದಿರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹನುಮಂತಗೌಡ ಪಾಟೀಲ್ ಕಳವಳ ವ್ಯಕ್ತಪಡಿಸಿದರು.

    ಇದನ್ನೂ ಓದಿ: ವ್ಯಕ್ತಿತ್ವ ವಿಕಾಸಗೊಳಿಸುವ ಪುಸ್ತಕ ಓದುವ ಹವ್ಯಾಸ: ಕವಯತ್ರಿ ಡಾ.ಲತಾ ರಾಜಶೇಖರ್ ಅಭಿಮತ

    ಪಟ್ಟಣದ ಶಾರದಾ ವಿದ್ಯಾ ಮಂದಿರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆಯಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಹಾಗೂ ಗಿರಿಜಾ ಮಾಲಿಪಾಟೀಲ್ ರಚಿತ ಕಡಲು ಮತ್ತು ಮೌನ ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

    ಸಮಾಜದ ಓರೆಕೋರೆಗಳನ್ನು ತಿದ್ದುವ ಮತ್ತು ಉತ್ತಮ ಮಾರ್ಗದರ್ಶನ ನೀಡುವಲ್ಲಿ ಸಾಹಿತ್ಯದ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಹಿತ್ಯಿಕ ಚಟುವಟಿಕೆ ಮತ್ತು ಓದುವ ಅಭಿರುಚಿ ಮೈಗೂಡಿಸಿಕೊಳ್ಳಬೇಕು ಎಂದರು.

    ಆಡಳಿತಾಧಿಕಾರಿ ಮಹೇಶ ತೋಟದ್, ಪ್ರಾಚಾರ್ಯ ಮಹಾಂತೇಶ ಸುಂಕದ್, ಮುಖ್ಯಶಿಕ್ಷಕ ಸಿಸ್ಟರ್ ರೆನ್ನಿ ಡಿಸೋಜಾ, ಗಿರೀಶ, ಶರಣಪ್ಪ ಆನೆಗುಂದಿ, ವಿಜಯ ಕುಮಾರ, ರಾಜಾವಾಸುದೇವ ನಾಯಕ, ನಿರುಪಾದಿ, ಬಸವರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts