More

    ಟಿಕ್​​​ಟಾಕ್​ ನಿಷೇಧವನ್ನು ನೋಟು ಅಮಾನ್ಯೀಕರಣಕ್ಕೆ ಹೋಲಿಕೆ ಮಾಡಿದ ಸಂಸದೆ ನುಸ್ರತ್​ ಜಹಾನ್​

    ಕೋಲ್ಕತ್ತ: ಕೇಂದ್ರ ಸರ್ಕಾರ ಎರಡು ದಿನಗಳ ಹಿಂದೆ ಅಂದರೆ ಸೋಮವಾರ ಸಂಜೆ ಚೀನಾದ ಟಿಕ್​ಟಾಕ್​ ಸೇರಿ 59 ಆ್ಯಪ್​​ಗಳನ್ನು ನಿಷೇಧಿಸಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ಬಹುತೇಕ ಪಕ್ಷಗಳೂ ಸ್ವಾಗತಿಸಿವೆ.

    ಈ ಮಧ್ಯೆ ತೃಣಮೂಲ ಕಾಂಗ್ರೆಸ್​ನ ಸಂಸದೆ, ನುಸ್ರತ್​ ಜಹಾನ್​ ಅವರು ಚೀನಾ ಆ್ಯಪ್​ಗಳ ನಿಷೇಧ ಅದರಲ್ಲೂ ಟಿಕ್​​​ಟಾಕ್​​ ಬ್ಯಾನ್​ ಮಾಡಿದ್ದನ್ನು, ಕೇಂದ್ರ ಸರ್ಕಾರ 2016ರಲ್ಲಿ ಘೋಷಿಸಿದ್ದ ನೋಟು ಅಮಾನ್ಯೀಕರಣಕ್ಕೆ ಹೋಲಿಸಿದ್ದಾರೆ.

    ಚೀನಾ ಆ್ಯಪ್​ ಟಿಕ್​ಟಾಕ್​ ಬ್ಯಾನ್​ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಹಿಂದೆ ಮುಂದೆ ಯೋಚಿಸದೆ, ಹಠಾತ್​ ಆಗಿ ತೆಗೆದುಕೊಂಡಿದೆ. ಇದರಿಂದಾಗಿ ನಿರುದ್ಯೋಗಕ್ಕೀಡಾಗುವವರ ಮುಂದಿನ ಗತಿಯೇನು? 2016ರಲ್ಲಿ ರಾತ್ರೋರಾತ್ರಿ ನೋಟು ಅಮಾನ್ಯೀಕರಣವಾದಾಗ ಒಂದಷ್ಟು ಜನರು ಹೇಗೆ ಸಂಕಷ್ಟಕ್ಕೀಡಾಗಿದ್ದರೋ, ಅದೇ ರೀತಿ ಈಗಲೂ ಸಹ ಅನೇಕರು ಕಷ್ಟಪಡಲಿದ್ದಾರೆ ಎಂದು ನುಸ್ರತ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ಮಾಸ್ಮಾದಿಂದಾಗಿ ಬದುಕಿದೆ: ನಾನು ಪ್ಲಾಸ್ಮಾ ದಾನಮಾಡಿರುವೆ, ನೀವೂ ಮಾಡಿ ಎಂದ ಸಚಿವ

    ರಾಷ್ಟ್ರದ ಭದ್ರತೆ, ಹಿತಾಸಕ್ತಿ ದೃಷ್ಟಿಯಿಂದ ಕೇಂದ್ರ ಸರ್ಕಾರ ಚೀನಾ ಆ್ಯಪ್​​​ಗಳನ್ನು ಬ್ಯಾನ್​ ಮಾಡಿದೆ. ಇದರಿಂದ ನನಗೇನೂ ಸಮಸ್ಯೆ ಇಲ್ಲ. ಆದರೆ ಅದೆಷ್ಟೋ ಜನ ಉದ್ಯೋಗ ಕಳೆದುಕೊಳ್ಳುತ್ತಾರಲ್ಲ, ಅವರ ಬಗ್ಗೆಯೂ ಯೋಚನೆ ಮಾಡಬೇಕು ಎಂದಿದ್ದಾರೆ.
    ಹಾಗೇ ಚೀನಾ ಆ್ಯಪ್​ಗಳ ಬ್ಯಾನ್​ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಚೀನಾದ ಆ್ಯಪ್​ಗಳನ್ನು ಬ್ಯಾನ್​ ಮಾಡಿದರೆ ಸಾಲದು. ಇನ್ನೂ ಖಡಕ್​ ಪ್ರತಿಕ್ರಿಯೆಯನ್ನು ಆ ದೇಶಕ್ಕೆ ನೀಡಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ‘ಲಕ್ಷ್ಮೀ ಬಾಂಬ್​’ ಮತ್ತು ‘ಭುಜ್​’, ಓಟಿಟಿಗೆ ಸೇಲ್​ ಆಗಿದ್ದು ಎಷ್ಟಕ್ಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts