More

    ಪ್ಮಾಸ್ಮಾದಿಂದಾಗಿ ಬದುಕಿದೆ: ನಾನು ಪ್ಲಾಸ್ಮಾ ದಾನಮಾಡಿರುವೆ, ನೀವೂ ಮಾಡಿ ಎಂದ ಸಚಿವ

    ನವದೆಹಲಿ: ಕರೊನಾ ಸೋಂಕಿಗೆ ಒಳಗಾಗಿ ಅಪಾಯದ ಹಂತ ತಲುಪಿದ್ದ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಇದೀಗ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
    ಈ ಕುರಿತು ತಮ್ಮ ಅನುಭವ ಹಂಚಿಕೊಂಡ ಅವರು, ಪ್ರಾಣಾಪಾಯದ ಸ್ಥಿತಿಗೆ ತಲುಪಿದ್ದ ನಾನು ಪ್ಲಾಸ್ಮಾ ಥೆರಪಿಯಿಂದ ಬದುಕುಳಿದಿದ್ದೇನೆ ಎಂದರು.

    ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಟ್ವಿಟರ್‌ ಮೂಲಕ ಮಾಹಿತಿ ನೀಡಿರುವ ಸಚಿವರು, ಎಲ್ಲರ ಶುಭ ಹಾರೈಕೆಗಳಿಂದ ನಾನು ಬದುಕಿ ಬಂದಿದ್ದೇನೆ. ಸದ್ಯ ಮನೆಯಲ್ಲಿ ಇದ್ದೇನೆ. ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡುವ ಸಿಎಂ ಕೇಜ್ರಿವಾಲ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಕ್ರಾಂತಿಕಾರಿ ನಡೆ. ಇದರಿಂದಾಗಿಯೇ ನಾನು ಮರು ಜೀವ ಪಡೆದಿದ್ದೇನೆ. ಹೀಗಾಗಿ ಎಲ್ಲ ಕರೊನಾ ಸೋಂಕಿತರು ಗುಣಮುಖರಾದ ನಂತರ ಪ್ಲಾಸ್ಮಾ ದಾನ ಮಾಡಬೇಕು. ನಾನೂ ಕೂಡ ನನ್ನ ಪ್ಲಾಸ್ಮಾ ದಾನ ಮಾಡಿದ್ದೇನೆ ಎಂದರು.

    ತೀವ್ರ ಜ್ವರ ಬಾಧಿಸಿದ್ದರಿಂದ ದೆಹಲಿಯ ರಾಜೀವ್‌ ಗಾಂಧಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದೆ. ಆದರೆ ಮೊದಲ ದಿನ ನೆಗೆಟಿವ್‌ ಎಂದು ವರದಿ ಬಂತು. ಆದರೆ ಜ್ವರ ಮಾತ್ರ ಕಡಿಮೆಯಾಗಿರಲಿಲ್ಲ. ಎರಡನೇ ಬಾರಿ ಪುನಃ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂಬ ಮಾಹಿತಿ ನೀಡಿದರು.

    ಇವರ ಸ್ಥಿತಿ ತೀವ್ರವಾಗಿ ಹದಗೆಟ್ಟಿರುವ ಬಗ್ಗೆ ವೈದ್ಯರು ಹೇಳಿದ್ದರು. ಜ್ವರದ ಮಟ್ಟವೂ ಹೆಚ್ಚಾಗಿ ಆಕ್ಸಿಜನ್‌ ಮಟ್ಟ ಏಕಾಏಕಿ ಕುಸಿದಿತ್ತು. ನಂತರ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಸಾಕೇತ್‌ನಲ್ಲಿರುವ ಮಾಕ್ಸ್‌ ಆಸ್ಪತ್ರೆಗೆ ಅಡ್ಮಿಟ್‌ ಮಾಡಲಾಗಿತ್ತು.

    ಇದನ್ನೂ ಓದಿ: ಎಲ್ಲೆಂದರಲ್ಲಿ ಪಿಪಿಇ ಕಿಟ್​ ಬಿಸಾಡಿದ್ರೆ ಕಠಿಣ ಕ್ರಮ; ಶ್ರೀರಾಮುಲು

    ಈ ಹಂತದಲ್ಲಿ ಅವರಿಗೆ ಪ್ಲಾಸ್ಮಾ ಥೆರಪಿ ನೀಡಲಾಗಿತ್ತು. ನಂತರ ಚೇತರಿಸಿಕೊಂಡಿದ್ದರು. ಗುಣಮುಖರಾಗಿದ್ದ ಅವರು ಇತ್ತೀಚೆಗಷ್ಚೇ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು,.
    ಪ್ಲಾಸ್ಮಾ ಥೆರಪಿ ಹಾಗೂ ದಾನದ ಕುರಿತಾಗಿ ವೈದ್ಯರು ಹೇಳಿರುವುದು ಹೀಗೆ: ‘ಮನುಷ್ಯರ ದೇಹದಲ್ಲಿ ದೇಹನಿರೋಧಕ ಶಕ್ತಿ ಹೆಚ್ಚಿಗೆ ಇದ್ದಷ್ಟು ಯಾವುದೇ ವೈರಸ್‌ಗಳು ಸುಲಭದಲ್ಲಿ ಅಟ್ಯಾಕ್‌ ಮಾಡುವುದಿಲ್ಲ. ಕರೊನಾ ವೈರಸ್‌ ಕೂಡ ಇದರಿಂದ ಹೊರತಾಗಿಲ್ಲ. ರೋಗವನ್ನು ಉಂಟು ಮಾಡುವ ವೈರಸ್‌ಗಳ ವಿರುದ್ಧ ಹೋರಾಡಲು ದೇಹವು ಪ್ರತಿರೋಧಕ ಗುಣಗಳನ್ನು ಬೆಳೆಸಿಕೊಂಡಿರುತ್ತವೆ. ಕರೊನಾ ವೈರಸ್‌ನಿಂದ ಗುಣಮುಖರಾದವರ ದೇಹದಲ್ಲೂ ಇಂತಹ ಪ್ರತಿರೋಧ ಕಣಗಳು ಅಭಿವೃದ್ಧಿಯಾಗಿರುತ್ತವೆ. ಇವು ರಕ್ತದ ದುಗ್ಧರಸದಲ್ಲಿ (ರಕ್ತದಲ್ಲಿರುವ ಪಾರದರ್ಶಕ ದ್ರವ) ಇರುತ್ತವೆ.

    ಅಂಥ ವ್ಯಕ್ತಿಗಳ ದುಗ್ಧರಸದಲ್ಲಿ ಇರುವ ಪ್ರತಿರೋಧ ಕಣಗಳನ್ನು ತೆಗೆದು, ಅದನ್ನು ಸೋಂಕಿತರ ರಕ್ತಕ್ಕೆ ಸೇರಿಸಲಾಗುತ್ತದೆ. ಸೋಂಕಿನಿಂದ ಗುಣಮುಖನಾದ ಒಬ್ಬ ವ್ಯಕ್ತಿಯಿಂದ ಎರಡು ಡೋಸ್‌ನಷ್ಟು ಪ್ರತಿರೋಧ ಕಣಗಳನ್ನು ತೆಗೆಯಲು ಅವಕಾಶವಿದೆ. ಒಬ್ಬ ರೋಗಿಗೆ ಒಂದು ಡೋಸ್ ಸಾಕಾಗುತ್ತದೆ. ಹೀಗಾಗಿ ಗುಣಮುಖರಾದವರು ಒಬ್ಬರೇ ಇಬ್ಬರು ಸೋಂಕಿತರಿಗೆ ಪ್ರತಿರೋಧ ಕಣಗಳನ್ನು ನೀಡಿ ಅವರಿಬ್ಬರನ್ನು ಗುಣಪಡಿಸಬಹುದಾಗಿದೆ.

    ಪ್ಲಾಸ್ಮಾ ಥೆರಪಿಯ ಫಲಿತಾಂಶಗಳು ರೋಗಿಯಿಂದ ರೋಗಿಗೆ ಭಿನ್ನವಾಗಿರುತ್ತದೆ. ಏಕೆಂದರೆ ರೋಗಿಯಲ್ಲಿನ ರೋಗ ನಿರೋಧಕ ಶಕ್ತಿ ಭಿನ್ನವಾಗಿರುವ ಕಾರಣ, ಅದರ ಸಾಮರ್ಥ್ಯದ ಮೇಲೆ ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತದೆ ಎನ್ನುತ್ತಾರೆ ವೈದ್ಯರು. (ಏಜೆನ್ಸೀಸ್‌)

    ಪ್ರಾಣದ ಹಂಗುತೊರೆದು ಎನ್‌ಕೌಂಟರ್‌ ವೇಳೆ ಮಗು ಕಾಪಾಡಿದ ಯೋಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts