More

    ‘ರಾ’ ಗಿಂತ ‘ಚಿನ್​’ ಪ್ರಭಾವ ಹೆಚ್ಚು: ರಚಿನ್​ ಬ್ಯಾಟಿಂಗ್​ ಕುರಿತು ಹಾಸ್ಯ ಚಟಾಕಿ ಹಾರಿಸಿದ ಡ್ರಾವಿಡ್​

    ಅಹಮದಾಬಾದ್​: ಅ.05ರಂದು ನಡೆದ ಐಸಿಸಿ ಪುರುಷರ ಏಕದಿನ ವಿಶ್ವಕಪ್​ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್​ ವಿರುದ್ಧ ನ್ಯೂಜಿಲೆಂಡ್​ ತಂಡವು 9 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಕಿವೀಸ್​ ಪಡೆಯ ಗೆಲವಿನಲ್ಲಿ ಭಾರತದ ಮೂಲದ ರಚಿನ್ ರವೀಂದ್ರ ಪ್ರಮುಖ ಪಾತ್ರವಹಿಸಿದರು.

    ನ್ಯೂಜಿಲೆಂಡ್​ ಬ್ಯಾಟಿಂಗ್​ ಆರ್ಡರ್​ ಅನ್ನು ಸದ್ಬಳಕೆ ಮಾಡಿಕೊಂಡ ರಚಿನ್​, ಚೊಚ್ಚಲ ಶತಕ​ ಸಿಡಿಸಿದರು. 23 ವರ್ಷದ ರಚಿನ್​, ಕೇನ್​ ವಿಲಿಯಮ್ಸನ್​ ಗೈರು ಹಾಜರಿಯಲ್ಲಿ ನ.03 ಬ್ಯಾಟಿಂಗ್​ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದರು. ಇಂಗ್ಲೆಂಡ್​ ಬೌಲರ್​ಗಳನ್ನು ಮನಸೋ ಇಚ್ಛೆ ಕಾಡಿದ ರಚಿನ್,​ ಕೇವಲ 93 ಎಸೆತಗಳಲ್ಲಿ 5 ಸಿಕ್ಸರ್​, 11 ಬೌಂಡರಿ ಸಮೇತ ಅಜೇಯ 123 ರನ್​ ಗಳಿಸಿ ಮಿಂಚಿದರು. ಡೆವನ್​ ಕಾನ್ವೆ (ಅಜೇಯ 153 ರನ್​, 121 ಎಸೆತ, 3 ಸಿಕ್ಷರ್​, 19 ಬೌಂಡರಿ)ಗೆ ರಚಿನ್​ ಉತ್ತಮ ಸಾಥ್​ ನೀಡುವ ಮೂಲಕ ಅದ್ಭುತ ಜತೆಯಾಟದೊಂದಿಗೆ ತಂಡವನ್ನು ಗೆಲವಿನ ದಡ ಸೇರಿಸಿದರು.

    ರಚಿನ್​ ರವೀಂದ್ರ ಭಾರತೀಯರು ಅದರಲ್ಲೂ ಕನ್ನಡರಿಗರ ಗಮನ ಸೆಳೆದರು. ಅದಕ್ಕೆ ಕಾರಣ ರಚಿನ್​ ಅವರ ಮೂಲ ಬೆಂಗಳೂರು. ಯುವ ಆಲ್ರೌಂಡರ್ ಆಗಿ ನ್ಯೂಜಿಲೆಂಡ್ ತಂಡಕ್ಕೆ ಭರವಸೆ ಮೂಡಿಸಿದ್ದಾರೆ. ರಚಿನ್ ತಂದೆ ರವಿ ಕೃಷ್ಣಮೂರ್ತಿ ಟೆಕ್ಕಿ ಆಗಿದ್ದು, 1990ರಲ್ಲಿ ನ್ಯೂಜಿಲೆಂಡ್​ಗೆ ತೆರಳಿ ಅಲ್ಲಿಯೇ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಕ್ಲಬ್ ಪರ ಕ್ರಿಕೆಟ್ ಆಡಿದ ಅನುಭವ ಹೊಂದಿರುವ ರವಿ ಕೃಷ್ಣಮೂರ್ತಿ, ರಚಿನ್ ಬಾಲ್ಯದ ಕೋಚ್ ಕೂಡ ಆಗಿದ್ದಾರೆ. ಟೀಮ್ ಇಂಡಿಯಾ ದಿಗ್ಗಜರಾದ ಸ‘ಚಿನ್’ ತೆಂಡುಲ್ಕರ್ ಹಾಗೂ ‘ರಾ’ಹುಲ್ ದ್ರಾವಿಡ್ ಹೆಸರು ಸೇರಿಸಿ ರಚಿನ್ ಎಂದು ಹೆಸರಿಡಲಾಗಿದೆ.

    ಇದನ್ನೂ ಓದಿ: 14 ಬಾರಿ ಮುಖಾಮುಖಿ ಒಮ್ಮೆ ಮಾತ್ರ ಗೆಲುವು! ಸಾಂಪ್ರದಾಯಿಕ ಎದುರಾಳಿಗಳ ವಿಶ್ವಕಪ್​ ಹಾದಿ ಹೀಗಿದೆ….

    ರಾಹುಲ್ ಡ್ರಾವಿಡ್​ ಹಾಸ್ಯ ಚಟಾಕಿ

    ರಚಿನ್​ ವಿಚಾರ ತಿಳಿಯುತ್ತಿದ್ದಂತೆ ವಾಲ್​ ಆಫ್​ ಕ್ರಿಕೆಟ್​ ಖ್ಯಾತಿಯ ರಾಹುಲ್​ ಡ್ರಾವಿಡ್​ ಹಾಸ್ಯ ಚಟಾಕಿ ಹಾರಿಸಿದ್ದಾರೆ. ರಚಿನ್​ ಬ್ಯಾಟಿಂಗ್​ ನೋಡಿದರೆ ಅವರ ಹೆಸರಿನಂತೆ ಸಚಿನ್​ರಿಂದ ಹೆಚ್ಚು ಮತ್ತು ನನ್ನಿಂದ ಕಡಿಮೆ ಪ್ರಭಾವಿತಗೊಂಡಿರುವಂತೆ ತೋರುತ್ತದೆ ಎಂಧು ಡ್ರಾವಿಡ್​ ಹೇಳಿದ್ದಾರೆ.

    ನಿಮಗೆ ತಿಳಿದಿದೆಯೇ? ಅವರ ಬ್ಯಾಟಿಂಗ್​ ನೋಡಿದೆ. ಅವರು ಐದು ಸಿಕ್ಸರ್​ ಬಾರಿಸಿದರು. ಬಹುಶಃ ಅವರ ಹೆಸರಿನಲ್ಲಿ ಚಿನ್​ ಹೆಚ್ಚಿಗೆ ಇರುವುದರ ಪ್ರಭಾವ ಇರಬಹುದು. ನಾನು ಬೌಂಡರಿಯಿಂದಾಚೆಗೆ ಹೆಚ್ಚು ಚೆಂಡನ್ನು ಹೊಡೆಯಲು ಸಾಧ್ಯವಾಗಲಿಲ್ಲ. ಬಹುಶಃ ಇದರಲ್ಲಿ ಸಚಿನ್ ಖಂಡಿತವಾಗಿಯೂ ಅವರಿಗೆ ಸಹಾಯ ಮಾಡಿದ್ದಾರೆ ಎನ್ನುತ್ತಾ ರಾಹುಲ್​ ಮುಗುಳ್ನಕ್ಕರು.

    ಇದೇ ಸಂದರ್ಭದಲ್ಲಿ ನ್ಯೂಜಿಲೆಂಡ್​-ಇಂಗ್ಲೆಂಡ್​ ನಡುವಿನ ಉದ್ಘಾಟನಾ ಪಂದ್ಯದ ಬಗ್ಗೆ ಮಾತನಾಡಿದ ರಾಹುಲ್​, ಉಭಯ ತಂಡಗಳು ಉತ್ತಮ ನಿರ್ವಹಣೆ ತೋರಿದವು. ಅದರಲ್ಲಿ ನ್ಯೂಜಿಲೆಂಡ್​ ವಿಜಯ ಸಾಧಿಸುವ ಮೂಲಕ ಒಳ್ಳೆಯ ಆರಂಭ ಪಡೆದಿದೆ. ರಚಿನ್​ ಮತ್ತು ಕಾನ್ವೆ ಉತ್ತಮ ಜತೆಯಾಟ ನೀಡಿದರು ಎಂದು ಡ್ರಾವಿಡ್​ ಮೆಚ್ಚುಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ 2021ರಲ್ಲಿ ಕಾನ್ಪುರದಲ್ಲಿ ನಡೆದ ಟೆಸ್ಟ್​ ಪಂದ್ಯದಲ್ಲಿ ರಚಿನ್​ ಸುಮಾರು 1 ಗಂಟೆಗೂ ಅಧಿಕ ಸಮಯ ಕ್ರೀಸ್​ನಲ್ಲಿ ನಿಂತು ಪಂದ್ಯವನ್ನು ಡ್ರಾ ಮಾಡಿದನ್ನು ಸ್ಮರಿಸಿ, ಮೆಚ್ಚುಗೆ ಸೂಚಿಸಿದರು.

    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ 2019ರ ಫೈನಲಿಸ್ಟ್​ಗಳ ಮುಖಾಮುಖಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಕಿವೀಸ್ ಬೌಲರ್​ಗಳ ಸಂಘಟಿತ ದಾಳಿಗೆ ನಲುಗಿದರೂ, ಅನುಭವಿ ಜೋ ರೂಟ್ (77) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್​ಗೆ 282 ರನ್ ಪೇರಿಸಿತು. ಪ್ರತಿಯಾಗಿ ಕಾನ್​ವೇ- ರಚಿನ್ ಅಜೇಯ ಜತೆಯಾಟದ ಬಲದಿಂದ ಕಿವೀಸ್, 36.2 ಓವರ್​ಗಳಲ್ಲಿ 1 ವಿಕೆಟ್​ಗೆ 283 ರನ್​ ಗಳಿಸಿ, ಇನ್ನೂ 82 ಎಸೆತಗಳು ಬಾಕಿಯಿರುವಂತೆಯೇ ಸುಲಭ ಗೆಲುವು ದಾಖಲಿಸಿತು. (ಏಜೆನ್ಸೀಸ್​)

    ವಿಶ್ವಕಪ್​ ಮೊದಲ ಪಂದ್ಯದಲ್ಲೇ ಚೊಚ್ಚಲ ಶತಕ ಸಿಡಿಸಿದ ರಚಿನ್​ ಯಾರು? ರಾಹುಲ್​-ಸಚಿನ್​, ಬೆಂಗಳೂರಿಗಿರುವ ಸಂಬಂಧವೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts