More

    ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಹೆಣ್ಣು ಚಿರತೆ ಸಾವು

    ಬೆಂಗಳೂರು: ಇಲ್ಲಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಶುಕ್ರವಾರ ಬೆಳಗ್ಗೆ 14 ವರ್ಷದ ಚಿರತೆ ಸಂಜನಾ ಮೃತಪಟ್ಟಿದೆ.

    ಜೂನ್ 2009 ರಲ್ಲಿ ಮೈಸೂರಿನಿಂದ ತರಲಾಗಿದ್ದ ಚಿರತೆಯನ್ನು ಸಂಜನಾ ಎಂದು ಹೆಸರಿಡಲಾಗಿತ್ತು, ಶುಕ್ರವಾರ ಮುಂಜಾನೆ ಉದ್ಯಾನವನದಲ್ಲಿ ಚಿರತೆ ಸಾವನ್ನಪ್ಪಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

    14 ವರ್ಷ ವಯಸ್ಸಾಗಿದ್ದರಿಂದ ವಯೋಸಹಜದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.

    ಸಾಮಾನ್ಯವಾಗಿ ಕಾಡಿನಲ್ಲಿ ಚಿರತೆಗಳ ಜೀವಿತಾವಧಿ ಸುಮಾರು 10 ವರ್ಷಗಳು ಆದರೆ ಚಿರತೆ ಸಂಜನಾಗೆ 14 ವರ್ಷ ವಯಸ್ಸಾಗಿರುವುದರಿಂದ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ದಿಗ್ವಿಜಯ ನ್ಯೂಸ್​)

    ಚಲಿಸುತ್ತಿರುವಾಗಲೇ ಹೊತ್ತಿ ಉರಿದ ದ್ವಿಚಕ್ರವಾಹನ: ಇಬ್ಬರಿಗೆ ಗಂಭೀರ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts