ಮಸ್ಕತ್: ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಶೋಯಿಬ್ ಅಖ್ತರ್, ಶಾಹಿದ್ ಅಫ್ರಿದಿ, ಸನತ್ ಜಯಸೂರ್ಯ ಮುಂತಾದ ಮಾಜಿ ಸ್ಟಾರ್ ಕ್ರಿಕೆಟಿಗರು ಮರಳಿ ಕಣಕ್ಕಿಳಿಯಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ) ಟಿ20 ಟೂರ್ನಿ ಗುರುವಾರದಿಂದ ನಡೆಯಲಿದ್ದು, ಇಂಡಿಯಾ ಮಹಾರಾಜಾಸ್ ಮತ್ತು ಏಷ್ಯಾ ಲಯನ್ಸ್ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ.
ವರ್ಲ್ಡ್ ಜೈಂಟ್ಸ್ ಟೂರ್ನಿಯಲ್ಲಿ ಆಡಲಿರುವ 3ನೇ ತಂಡ. ಡಬಲ್ ರೌಂಡ್ ರಾಬಿನ್ ಮಾದರಿ ಲೀಗ್ ಬಳಿಕ ಅಗ್ರ 2 ತಂಡಗಳು ಜನವರಿ 29ರಂದು ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.
ಭಾರತ ತಂಡದ ಮಾಜಿ ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್, ಟೂರ್ನಿಯಲ್ಲಿ ಇಂಡಿಯಾ ಮಹಾರಾಜ ತಂಡವನ್ನು ಮುನ್ನಡೆಸಲಿದ್ದಾರೆ. ವೀರೇಂದ್ರ ಸೆಹ್ವಾಗ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಅಂದು ಡೆಲ್ಲಿ ಡೇರ್‌ಡೆವಿಲ್ಸ್), ಪಂಜಾಬ್ ಕಿಂಗ್ಸ್ (ಅಂದು ಕಿಂಗ್ಸ್ ಇಲೆವೆನ್ ಪಂಜಾಬ್) ತಂಡಗಳಿಗೆ ನಾಯಕನಾದ ಅನುಭವ ಹೊಂದಿದ್ದಾರೆ. ಮೊಹಮದ್ ಕ್ೈ ತಂಡದ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾದ ಜಾನ್ ಬುಕಾನನ್ ಅವರನ್ನು ತಂಡದ ಕೋಚ್ ಆಗಿ ನೇಮಿಸಲಾಗಿದೆ.
ಪಾಕಿಸ್ತಾನದ ಮಾಜಿ ಬ್ಯಾಟರ್ ಮಿಸ್ಬಾ ಉಲ್ ಹಕ್ ಅವರನ್ನು ಏಷ್ಯಾ ಲಯನ್ಸ್ ತಂಡದ ನಾಯಕನಾಗಿ ನೇಮಿಸಲಾಗಿದೆ. ತಿಲಕರತ್ನೆ ದಿಲ್ಶಾನ್ ಉಪನಾಯಕನಾಗಿ ಆಯ್ಕೆಯಾದರೆ, ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗ ತಂಡದ ಕೋಚ್ ಆಗಿರಲಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಡರೇನ್ ಸ್ಯಾಮ್ಮಿ ವರ್ಲ್ಡ್ ಜೈಂಟ್ಸ್ ತಂಡದ ನಾಯಕನಾಗಿದ್ದರೆ, ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಸೋನಿ ಟೆನ್-1, ಸೋನಿ ಟೆನ್-3 ಚಾನಲ್‌ಗಳಲ್ಲಿ ಪಂದ್ಯಗಳು ನೇರಪ್ರಸಾರವಾಗಲಿವೆ.
ಇಂದಿನ ಪಂದ್ಯ
ಇಂಡಿಯಾ ಮಹಾರಾಜ-ಏಷ್ಯಾ ಲಯನ್ಸ್
ಆರಂಭ: ರಾತ್ರಿ 8.00
ನೇರಪ್ರಸಾರ: ಸೋನಿ ಟೆನ್1, 3.
Here are the fixtures of all the matches at the Legends Cricket League 2022 📆
— Sportskeeda (@Sportskeeda) January 18, 2022
Which matches are you looking forward to the most? 🤔#LegendsCricketLeague #AsiaLions #WorldGiants #IndiaMaharajas pic.twitter.com/15DH2Rxd00
Many Pakistani's Included In The Squad Of Legends League Cricket 🙂❤️ pic.twitter.com/WQBJgKEPV9
— Uzair Habib (@UzairHabib123) January 19, 2022
The biggest names in world cricket are back in action with the #LegendsLeagueCricket 🤩
— Sony LIV (@SonyLIV) January 19, 2022
Enjoy #BossLogonKaGame, LIVE on #SonyLIV 👉 https://t.co/5xcVRxFyFp 📺📲#LLCT20 pic.twitter.com/A1O3OMomKg