More

    ಜೀವನದಲ್ಲಿರಲಿ ಕಲಿಕೆ ನಿರಂತರ: ಅಸ್ಸಾಂ, ಮೇಘಾಲಯ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕಿವಿಮಾತು

    ಬೆಂಗಳೂರು: ಅಂತರ ರಾಜ್ಯ ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮದ ಅಂಗವಾಗಿ ಕರ್ನಾಟಕಕ್ಕೆ ಭೇಟಿ ನೀಡಿರುವ ಅಸ್ಸಾಂ ಮತ್ತು ಮೇಘಾಲಯದ ವಿದ್ಯಾರ್ಥಿಗಳು-ಸಿಬ್ಬಂದಿ ಜತೆ ರಾಜ್ಯಪಾಲ ಥಾವರ್​​ಚಂದ್ ಗೆಹ್ಲೋಟ್ ಅವರು ಸಂವಾದ ನಡೆಸಿದರು.

    ನಮ್ಮ ದೇಶ ವಿವಿಧ ಸಂಸ್ಕೃತಿ, ಅನೇಕ ಭಾಷೆಗಳನ್ನು ಹೊಂದಿದೆ. ವಿವಿಧತೆಯಲ್ಲಿ ಏಕತೆ ಕಾಣುವ ದೇಶ ನಮ್ಮದು. ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ದೇಶದಲ್ಲಿ ಮುನ್ನಡೆಯಬೇಕು. ಸೌರ್ಹಾದತೆ, ಏಕತೆ, ಸಮಾನತೆ ಸಾರುವ ಮೂಲಕ ಏಕ ಭಾರತ ಮತ್ತು ಶ್ರೇಷ್ಠ ಭಾರತವನ್ನು ಕಟ್ಟಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ಇದನ್ನೂ ಓದಿ: ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

    ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ನಿರಂತರವಾಗಿ ವಿದ್ಯಾರ್ಥಿ ಆಗಿರಬೇಕು. ಜೀವನಪೂರ್ತಿ ಕಲಿಕೆಯಲ್ಲಿ ತೊಡಗಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ನಮ್ಮ ದೇಶಕ್ಕೆ ಮಹನೀಯರ ತಮ್ಮ ತ್ಯಾಗಗಳಿಂದ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅದನ್ನು ಕಾಪಾಡಿಕೊಳ್ಳಬೇಕು ಹಾಗೂ ನಮಗೆ ಸಾಕಷ್ಟು ನೀಡಿರುವ ದೇಶಕ್ಕೆ ನಾವು ಚಿರಋಣಿಯಾಗಿರಬೇಕು ಎಂದು ತಿಳಿಸಿದರು.

    ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್​, ಕ್ರೀಡಾ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್, ಉಪ ನಿರ್ದೇಶಕ ಅನಿಲ್ ಕುಮಾರ್, ಐಐಎಂ ಬೆಂಗಳೂರು ಮ್ಯಾನೇಜರ್ ಜಿ.ಶಿವಕೋಟಿ ರೆಡ್ಡಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

    ಟ್ರಾಫಿಕ್ ಫೈನ್, ಮತ್ತೆ 50% ಆಫರ್​​: ಎಷ್ಟು ದಿನಗಳವರೆಗೆ ಅವಕಾಶ?

    ಎರಡನೇ ಪತಿಯೂ ಸಾವಿಗೀಡಾದ್ದರಿಂದ ನೊಂದು ಹೆಣ್ಣುಮಕ್ಕಳಿಬ್ಬರ ಜತೆ ಒಂದೇ ಕುಣಿಕೆಗೆ ಕೊರಳೊಡ್ಡಿದ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts