More

    ಬಳ್ಳಾರಿಯಲ್ಲಿ ತಲೆ ಎತ್ತುತ್ತಿದೆ ರಾಜ್ಯದಲ್ಲೇ ಅತೀದೊಡ್ಡ ಅಪ್ಪು ಪ್ರತಿಮೆ!

    ಬಳ್ಳಾರಿ: ಪುನಿತ್ ರಾಜಕುಮಾರ್​ ಅಂದರೆ ಬಳ್ಳಾರಿ ಜನರಿಗೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿ ಅಭಿಮಾನಕ್ಕೆ ಸಾಕ್ಷಿಯಾಗಿ ರಾಜ್ಯದಲ್ಲೇ ಅತಿ ದೊಡ್ಡ ಪುನೀತ್ ಪುತ್ಥಳಿ ಗಣಿ ನಾಡಲ್ಲಿ ತಲೆಯೆತ್ತುತ್ತಿದೆ. ಕೆಜಿಫ್ ೨ ಚಿತ್ರದಲ್ಲಿ ರಾಕಿ ಬಾಯ್ ಪುತ್ಥಳಿ ನಿರ್ಮಿಸಿದ್ದ ಶಿವಮೊಗ್ಗದ ಕಲಾವಿದ ಜೀವನ್, ದಾಖಲೆಯ ಅಪ್ಪು ಪುತ್ಥಳಿಯನ್ನು ತಯಾರಿಸಿದ್ದಾರೆ.

    ಈ ಪ್ರತಿಮೆ 23 ಅಡಿ ಎತ್ತರವಿದ್ದು ಅತೀ ದೊಡ್ಡ ಪುತ್ಥಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬಳ್ಳಾರಿಯ ನಲ್ಲಚರಾವು ಪ್ರದೇಶದ ಜಿಲ್ಲಾ ಕ್ರೀಡಾಂಗಣದ ಮುಂದೆ ಈ ಪ್ರತಿಮೆ ತಲೆಯತ್ತಲು ಸಿದ್ದವಾಗಿದೆ. ಈ ಪ್ರತಿಮೆಯನ್ನು ಕಬ್ಬಿಣ ಹಾಗೂ ಫೈಬರ್ ಮಿಶ್ರಣದಲ್ಲಿ ತಯಾರು ಮಾಡಲಾಗಿದ್ದು ಬರೋಬ್ಬರಿ 23 ಅಡಿ ಎತ್ತರವಿದೆ.

    ಇದೇ ತಿಂಗಳು 21 ರಂದು ನಡೆಯುವ ಬಳ್ಳಾರಿ ಉತ್ಸವದಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಅಪ್ಪು ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಈ ಪ್ರತಿಮೆಯನ್ನು ಸತತ ಐದು ತಿಂಗಳ ಕಾಲದಿಂದ 15 ಜನರು ತಯಾರು ಮಾಡುತ್ತಿದ್ದರು.

    ಈ ಪ್ರತಿಮೆ ತಯಾರಿಸಲು ಖರ್ಚೂ ಭಾರಿ ಪ್ರಮಾಣದಲ್ಲಿ ನಡೆದಿದ್ದು ಬರೋಬ್ಬರಿ 20 ಲಕ್ಷ ವೆಚ್ಚದಲ್ಲಿ ಅಪ್ಪು ಪ್ರತಿಮೆ ನಿರ್ಮಾಣವಾಗಿದೆ. ದಾಖಲೆಯ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲು ಬಳ್ಳಾರಿ ಜಿಲ್ಲಾಡಳಿತವೂ ಸಿದ್ಧತೆ ನಡೆಸುತ್ತಿದ್ದು ಪುತ್ತಳಿ ಅನಾವರಣಕ್ಕೆ ತಯಾರಿ ನಡೆಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts