More

    ಸುರಕ್ಷಿತ ಎನ್ನಲಾಗುವ ಲಾರ್ಜ್​ ಕ್ಯಾಪ್​ ಮ್ಯೂಚುಯಲ್ ಫಂಡ್‌ಗಳ ಸರಾಸರಿ ಲಾಭ ಶೇ 19.83; ಇದರಲ್ಲಿ ನಂಬರ್ 1 ಫಂಡ್​ ಯಾವುದು ಗೊತ್ತೆ?

    ನವದೆಹಲಿ: ಮ್ಯೂಚುಯಲ್ ಫಂಡ್‌ಗಳ ಪೈಕಿ ಲಾರ್ಜ್​ ಕ್ಯಾಪ್​ ಫಂಡ್​ಗಳನ್ನು ಹೆಚ್ಚು ಸುರಕ್ಷಿತ ಹಾಗೂ ಸ್ಥಿರ ಆದಾಯ ನೀಡುವ ಹೂಡಿಕೆಯಾಗಿ ಪರಿಗಣಿಸಲಾಗುತ್ತದೆ. ಏಕೆಂದರೆ, ಲಾರ್ಜ್​ ಕ್ಯಾಪ್​ ಮ್ಯೂಚುಯಲ್ ಫಂಡ್‌ಗಳ ಹಣವನ್ನು ಬೃಹತ್​ ಕಂಪನಿಗಳ ಷೇರುಗಳಲ್ಲಿ ತೊಡಗಿಸಲಾಗುತ್ತದೆ. ಈ ಕಂಪನಿಗಳು ಹೆಚ್ಚು ಸುರಕ್ಷಿತ ಎಂದೇ ಪರಿಗಣಿಸಲಾಗುವುದರಿಂದ ಇವುಗಳಲ್ಲಿ ರಿಸ್ಕ್​ ಅಂಶ ಕಡಿಮೆ ಇರುತ್ತದೆ. ಸ್ಮಾಲ್​ ಕ್ಯಾಪ್​ ಮತ್ತು ಮಿಡ್ ಕ್ಯಾಪ್​ ಫಂಡ್​ಗಳಿಗೆ ಹೋಲಿಸಿದರೆ ಸಾಮಾನ್ಯವಾಗಿ ಲಾರ್ಜ್​ ಕ್ಯಾಪ್ ಮ್ಯೂಚುಯಲ್ ಫಂಡ್‌ಗಳಲ್ಲಿ ಲಾಭಾಂಶದ ಪ್ರಮಾಣ ಕಡಿಮೆ ಇರುತ್ತದೆ ಎಂದೇ ಆಂದಾಜಿಸಲಾಗುತ್ತದೆ. ಆದರೆ, 2023ನೇ ವರ್ಷದಲ್ಲಿ ಲಾರ್ಜ್​ ಕ್ಯಾಪ್​ ಮ್ಯೂಚುಯಲ್ ಫಂಡ್‌ಗಳು ಕೂಡ ಹೂಡಿಕೆದಾರರಿಗೆ ಸಾಕಷ್ಟು ಪ್ರಮಾಣದ ಲಾಭವನ್ನು ತಂದುಕೊಟ್ಟಿವೆ ಎಂದು ಅಂಕಿ-ಅಂಶಗಳು ಸೂಚಿಸುತ್ತವೆ.

    ಲಾರ್ಜ್​ ಕ್ಯಾಪ್ ಫಂಡ್​ಗಳ ವರ್ಗದಲ್ಲಿ 2023ರಲ್ಲಿ ಶೇಕಡಾ 19.83ರಷ್ಟು (ವಾರ್ಷಿಕ ಬಡ್ಡಿ ಆಧಾರದಲ್ಲಿ) ಸರಾಸರಿ ಆದಾಯ ದೊರೆತಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಲಾರ್ಜ್ ಕ್ಯಾಪ್​ ಫಂಡ್​ಗಳಲ್ಲಿ ವಿವಿಧ ಮ್ಯೂಚುಯಲ್ ಫಂಡ್ ಸಂಸ್ಥೆಗಳ ಅಂದಾಜು 30 ಯೋಜನೆಗಳಿವೆ.

    ಈ ಪೈಕಿ 13 ಲಾರ್ಜ್ ಕ್ಯಾಪ್ ಯೋಜನೆಗಳು ಶೇಕಡಾ 20 ಕ್ಕಿಂತ ಹೆಚ್ಚು ಲಾಭ ನೀಡಿವೆ. ಈ ವಿಭಾಗದಲ್ಲಿ ನಿಪ್ಪಾನ್ ಇಂಡಿಯಾ ಲಾರ್ಜ್ ಕ್ಯಾಪ್ ಫಂಡ್ ಅತಿ ಹೆಚ್ಚು ಲಾಭ ನೀಡಿ ಟಾಪರ್ ಆಗಿದೆ. ಇದು ಶೇಕಡಾ 27.87ರಷ್ಟು ಪ್ರಾಫಿಟ್ ಗಳಿಸಿಕೊಟ್ಟಿದೆ. ಎಚ್​ಡಿಎಫ್​ ಟಾಪ್ 100 ಫಂಡ್ ಮತ್ತು ಬ್ಯಾಂಕ್ ಆಫ್ ಇಂಡಿಯಾ ಬ್ಲೂಚಿಪ್ ಫಂಡ್ ಕ್ರಮವಾಗಿ ಶೇಕಡಾ 25.64 ಮತ್ತು ಶೇಕಡಾ 25.58ರಷ್ಟು ಲಾಭ ನೀಡಿವೆ.

    ಇನ್ವೆಸ್ಕೊ ಇಂಡಿಯಾ ಲಾರ್ಜ್‌ಕ್ಯಾಪ್ ಫಂಡ್ ಮತ್ತು ಬಂಧನ್ ಲಾರ್ಜ್ ಕ್ಯಾಪ್ ಫಂಡ್ 2023 ರಲ್ಲಿ ಕ್ರಮವಾಗಿ ಶೇಕಡಾ 22.29 ಮತ್ತು 22.02 ಗಳಿಕೆ ಮಾಡಿವೆ. ಎಡೆಲ್‌ವೀಸ್ ಲಾರ್ಜ್ ಕ್ಯಾಪ್ ಫಂಡ್ ಶೇಕಡಾ 21.49ರಷ್ಟು ಆದಾಯ ನೀಡಿದೆ.

    ದೊಡ್ಡ ಕ್ಯಾಪ್ ಯೋಜನೆಗಳನ್ನು Nifty 100 – TRI ಮತ್ತು S&P BSE 100 – TRI ಜತೆ ಹೋಲಿಕೆ ಮಾಡಲಾಗುತ್ತದೆ. Nifty 100 – TRI ಅಂದರೆ, ಎನ್​ಎಸ್ಇ (ನ್ಯಾಷನಲ್​ ಸ್ಟಾಕ್​ ಎಕ್ಸ್​ಚೇಂಜ್) ಷೇರು ಮಾರುಕಟ್ಟೆಯಲ್ಲಿರುವ 100 ಪ್ರಮುಖ ಕಂಪನಿಗಳು ಷೇರುಗಳ ಸೂಚ್ಯಂಕ. S&P BSE 100 – TRI ಎಂದರೆ ಬಿಎಸ್​ಇ (ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​) ಷೇರು ಮಾರುಕಟ್ಟೆಯಲ್ಲಿರುವ 100 ಪ್ರಮುಖ ಕಂಪನಿಗಳು ಷೇರುಗಳ ಸೂಚ್ಯಂಕ. 2023ರಲ್ಲಿ ಈ ಎರಡೂ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 17.05 ಮತ್ತು ಶೇಕಡಾ 19.02ರಷ್ಟು ಏರಿಕೆ ಕಂಡಿವೆ.

    2023ರ ನವೆಂಬರ್ 30ರ ಅವಧಿಯವರೆಗೆ ಲಾರ್ಜ್ ಕ್ಯಾಪ್ ಫಂಡ್​ಗಲ್ಲಿ ಹೂಡಿಕೆ ಮಾಡಲಾಗಿರುವ ಒಟ್ಟು ಮೊತ್ತವು 2.76 ಲಕ್ಷ ಕೋಟಿ ರೂಪಾಯಿ ಅಗಿದೆ. ವಿವಿಧ ರೀತಿಯ ಮ್ಯೂಚುವಲ್​ ಫಂಡ್​ ವರ್ಗಗಳ ಪೈಕಿ ಇದು ಎರಡನೇ ಅತಿಹೆಚ್ಚಿನ ಹೂಡಿಕೆಯಾಗಿದೆ.

    ಲಾರ್ಜ್​ ಕ್ಯಾಪ್ ಫಂಡ್​ಗಳ ಹೂಡಿಕೆಯು 2023ರಲ್ಲಿ ಜನವರಿಯಿಂದ ನವೆಂಬರ್​ವರೆಗೆ ಸರಿಸುಮಾರು 16.19% ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಇದರಲ್ಲಿನ ಹೂಡಿಕೆಯು ರೂ 2.38 ಲಕ್ಷ ಕೋಟಿಯಿಂದ ರೂ 2.76 ಲಕ್ಷ ಕೋಟಿಗೆ ತಲುಪಿದೆ.

    ನಾಚಿಕೆಯೇ ಇಲ್ಲ: ಮುಖ್ಯಮಂತ್ರಿ, ಸಚಿವರ ಮೇಲೆ ವಾಗ್ದಾಳಿ ಮುಂದುವರಿಸಿದ ಕೇರಳ ರಾಜ್ಯಪಾಲರು

    ಶೈಕ್ಷಣಿಕ ಅರ್ಹತೆ ಇದ್ದರೂ ನಿರುದ್ಯೋಗದಿಂದ ಬೇಸರ… ಸಂಸತ್ತಿನ ಹೊರಗೆ ಬಂಧಿಸಲ್ಪಟ್ಟ ನೀಲಂ ಸೋದರ, ತಾಯಿ ಹೇಳುವುದೇನು?

    ಲೋಕಸಭೆ ಭದ್ರತಾ ಲೋಪ ಕುರಿತು ಶಾ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts