More

    ಲಗ್ಗೆ ಇಡಲಿವೆ ಖಾದಿ ಮಾಸ್ಕ್‌; ಡಬಲ್‌ ಲೇಯರ್‌ ಮುಖಗವಸು ತಯಾರಿಕೆ ಕಾರ್ಯಾರಂಭ

    ನವದೆಹಲಿ: ಸದ್ಯದ ಪರಿಸ್ಥಿತಿಯಲ್ಲಿ ಎಷ್ಟೇ ಮಾಸ್ಕ್‌ ಇದ್ದರೂ ಅದು ಸಾಕಾಗುತ್ತಿಲ್ಲ, ಇನ್ನೊಂದೆಡೆ ಹಲವು ರಾಜ್ಯಗಳಲ್ಲಿ ಆರೋಗ್ಯ ಸಿಬ್ಬಂದಿ ಕೂಡ ಮಾಸ್ಕ್‌ ರಕ್ಷಣೆ ಇಲ್ಲದೇ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಬಂದಿದೆ, ಅದೇ ಮತ್ತೊಂದೆಡೆ, ಈಗ ದೊರಕುತ್ತಿರುವ ಕೆಲವು ಮಾಸ್ಕ್‌ಗಳ ಗುಣಮಟ್ಟದ ಬಗ್ಗೆಯೂ ಸಂಶಯವೇ ಇದೆ.

    ಇವೆಲ್ಲಾ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅತ್ಯಂತ ಸುರಕ್ಷಿತ ಎನ್ನಲಾದ ಡಬಲ್‌ ಲೇಯರ್‌ ಇರುವ ಖಾದಿ ಮಾಸ್ಕ್‌ ಅನ್ನು ತಯಾರಿಸಲು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಂದೆ ಬಂದಿದ್ದು, ಈಗಾಗಲೇ ಅನೇಕ ಮಾಸ್ಕ್‌ಗಳನ್ನೂ ತಯಾರಿಸಿದೆ.

    ಈ ಮಾಸ್ಕ್‌ಗೆ ತಯಾರಿಕೆಗೆ ಕೆಲ ಸರ್ಕಾರಗಳು ಈಗಾಗಲೇ ಬೇಡಿಕೆ ಒಡ್ಡಿವೆ. ಜಮ್ಮು ಮತ್ತು ಕಾಶ್ಮೀರದಿಂದ 7.5 ಲಕ್ಷ ಮಾಸ್ಕ್‌ಗಳಿಗೆ ಬೇಡಿಕೆ ಬಂದಿದೆ. ಇದಕ್ಕಾಗಿ ಸಕಲ ಸಿದ್ಧತೆಗಳೂ ನಡೆದಿವೆ. ಜಮ್ಮುವಿನಿಂದ 5 ಲಕ್ಷ, ಪುಲ್ವಾಮಾದಿಂದ 1.40 ಲಕ್ಷ, ಉಧಂಪುರ ಜಿಲ್ಲೆಯಿಂದ ಒಂದು ಲಕ್ಷ ಮತ್ತು ಕುಪ್ವಾರಾ ಜಿಲ್ಲೆಯಿಂದ 10 ಸಾವಿರ ಮಾಸ್ಕ್‌ಗಳಿಗೆ ಬೇಡಿಕೆ ಬಂದಿದ್ದು, ಏಪ್ರಿಲ್ 20 ರೊಳಗೆ ಈ ಜಿಲ್ಲೆಗಳ ಅಭಿವೃದ್ಧಿ ಆಯುಕ್ತರಿಗೆ ಅದನ್ನು ಪೂರೈಕೆ ಮಾಡಲಾಗುವುದು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹೇಳಿದೆ.

    ಮಾಸ್ಕ್‌ ತಯಾರಿಕೆಗೆ ಟ್ಚಿಸ್ಟೆಡ್‌ ಖಾದಿ ಫ್ಯಾಬ್ರಿಕ್‌ ಬಳಕೆ ಮಾಡಲಾಗುತ್ತಿದೆ. ಏಕೆಂದರೆ ಇದಕ್ಕೆ ಶೇಕಡಾ 70 ರಷ್ಟು ತೇವಾಂಶವನ್ನು ಹೀರಿಕೊಳ್ಳುವ ಗುಣವಿದೆ. ಕರೊನಾ ಸೋಂಕಿತ ವ್ಯಕ್ತಿ ಸೀನಿದರೆ ಅಥವಾ ಕೆಮ್ಮಿನ ಸಂದರ್ಭಗಳಲ್ಲಿ ರೋಗಾಣು ಹೊರಕ್ಕೆ ಹೋಗದಂತೆ ಈ ಮಾಸ್ಕ್‌ ನೆರವಾಗಲಿದೆ. ಅಷ್ಟೇ ಅಲ್ಲದೇ, ಇದು ಖಾದಿಯ ಬಟ್ಟೆಯಾದ್ದರಿಂದ ಇದನ್ನು ಧರಿಸಿದ ವ್ಯಕ್ತಿಗೆ ಯಾವುದೇ ರೀತಿಯಲ್ಲಿಯೂ ಉಸಿರುಗಟ್ಟಿದಂತೆ ಅನ್ನಿಸುವುದಿಲ್ಲ, ಬದಲಿಗೆ ಗಾಳಿಯು ಸುಲಭವಾಗಿ ಒಳಗೆ ಪ್ರವೇಶ ಮಾಡಿದ ಅನುಭವ ಆಗುತ್ತದೆ ಎಂದು ಮಂಡಳಿ ತಿಳಿಸಿದೆ.

    “ಖಾದಿಯನ್ನು ಕೈಯಿಂದ ನೂಲುವ ಮೂಲಕ ತಯಾರಿಸುವ ಕಾರಣ, ಇದು ಅತ್ಯಂತ ಸುರಕ್ಷಿತವಾಗಿವೆ ಮಾತ್ರವಲ್ಲದೇ ಈಗಿನ ಮಾಸ್ಕ್‌ಗಳು ಮರುಬಳಕೆ ಮಾಡುವಂತಿಲ್ಲ. ಆದರೆ ಖಾದಿ ಬಟ್ಟೆಗಳಿಂದ ಮಾಡಿದ ಮಾಸ್ಕ್‌ಗಳನ್ನು ಸುಲಭದಲ್ಲಿ ಮರುಬಳಕೆ ಮಾಡಬಹುದು, ಅದನ್ನು ತೊಳೆಯಬಹುದು ಕೂಡ. ಏನೇ ಮಾಡಿದರೂ ಅದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ’ ಎಂದೂ ಮಂಡಳಿ ತಿಳಿಸಿದೆ.

    ಇದಕ್ಕಾಗಿ ಸದ್ಯ ಜಮ್ಮು ಸಮೀಪದ ನಾಗ್ರೊಟ್ಟಾದ ಖಾದಿ ಹೊಲಿಗೆ ಕೇಂದ್ರವನ್ನು ಮಾಸ್ಕ್‌ ತಯಾರಿಕಾ ಕೇಂದ್ರವನ್ನಾಗಿ ಮಾಡಲಾಗಿದೆ. ಇಲ್ಲಿ ದಿನಕ್ಕೆ 10 ಸಾವಿರ ಮಾಸ್ಕ್‌ ತಯಾರಾಗುತ್ತದೆ. ಇನ್ನುಳಿದಂತೆ ವಿವಿಧ ಸ್ವಸಹಾಯ ಗುಂಪುಗಳು ಇದನ್ನು ತಯಾರಿಸಲಾಗುತ್ತಿದೆ. 7.5 ಲಕ್ಷ ಮಾಸ್ಕ್‌ ತಯಾರಿಸಲು ಸುಮಾರು 75 ಸಾವಿರ ಮೀಟರ್ ಖಾದಿ ಬಟ್ಟೆಯ ಅಗತ್ಯವಿದೆ.

    ಕ್ರಿಕೆಟ್​ ವಿಶ್ವದ ಬೌಲರ್​ಗಳ ಪಾಲಿನ ಸಿಂಹಸ್ವಪ್ನ ವೀರೇಂದ್ರ ಸೆಹ್ವಾಗ್​ಗೆ ರಾಮಾಯಣದ ಈ ಪಾತ್ರವೇ ಸ್ಫೂರ್ತಿಯಂತೆ!

    ಕ್ಯಾನ್ಸರ್​ ಗೆದ್ದ ಬಾಲಿವುಡ್​ ತಾರೆ ಸೊನಾಲಿ ಬೇಂದ್ರೆ ಕೊಟ್ಟಿದ್ದಾರೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸ್ಮೂದಿಯ ರೆಸಿಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts