More

    ರಾಜ್ಯಕ್ಕೆ 8 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಆಗಮನ: ನಾಳೆ ರಾಜ್ಯಾದ್ಯಂತ ಬೃಹತ್ ಲಸಿಕಾ ಅಭಿಯಾನ

    ಬೆಂಗಳೂರು: ದೀರ್ಘ ಅವಧಿಯ ನಂತರ ರಾಜ್ಯವು 8 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಸ್ವೀಕರಿಸಿದ್ದು, ಈ ವಾರಾಂತ್ಯದಲ್ಲಿ (ಜ. 21) ಬೃಹತ ಲಸಿಕಾ ಅಭಿಯಾನ ಆಯೋಜಿಸಿದ್ದು, ಆ ಮೂಲಕ ಆರೋಗ್ಯ ಇಲಾಖೆಯು ತಿಂಗಳಾಂತ್ಯದ ವೇಳೆಗೆ ಶೇ. 50 ಮುನ್ನೆಚ್ಚರಿಕೆ ಡೋಸ್ ವಿತರಿಸುವ ಗುರಿ ಹೊಂದಿದೆ. ಸದ್ಯ ರಾಜ್ಯದಲ್ಲಿ 8 ಲಕ್ಷ ಡೋಸ್ ಕೋವಿಶೀಲ್ಡ್ ಹಾಗೂ 4 ಲಕ್ಷ ಕೋವ್ಯಾಕ್ಸಿನ್ ಲಸಿಕೆ ದಾಸ್ತಾನು ಹೊಂದಿದ್ದು, ಈಗಾಗಲೇ ಬೇಡಿಕೆಗೆ ಅನುಗುಣವಾಗಿ ಆಯಾ ಜಿಲ್ಲೆಗಳಿಗೆ ಲಸಿಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ರಾಜ್ಯದಲ್ಲಿ ಈವರೆಗೂ ಶೇ. 22 ಮಂದಿ ಮುನ್ನೆಚ್ಚರಿಕೆ ಲಸಿಕೆ ಪಡೆದುಕೊಂಡಿದ್ದಾರೆ. ಕೋವಿಡ್ ಮೂರನೇ ಅಲೆಯಲ್ಲಿ ಎದುರಾದ ಒಮಿಕ್ರಾನ್ ವೈರಸ್ ಅಷ್ಟೇನು ಗಂಭೀರ ಪ್ರಭಾವ ಬೀರದ ಕಾರಣ ಹಾಗೂ ನಂತರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದ್ದರ ಪರಿಣಾಮ ಜನರು ಮುನ್ನೆಚ್ಚರಿಕೆ ಡೋಸ್ ಪಡೆಯುವ ಬಗ್ಗೆ ಆಸಕ್ತಿ ತೋರಲಿಲ್ಲ. ಹಾಗೂ ಮೂರನೇ ಅಲೆಯಲ್ಲಿ ಯಾವುದೇ ಗಂಭೀರ ತೊಂದರೆಗಳು ಆಗದ ಕಾರಣ ಹಾಗೂ ಲಸಿಕೆಗೆ ಬೇಡಿಕೆ ಇಲ್ಲದಿದ್ದರಿಂದ ಸರ್ಕಾರವೂ ಲಸಿಕೆ ಶಿಬಿರಗಳನ್ನು ನಿಲ್ಲಿಸಿತು. ಅಲ್ಲದೆ ರಾಜ್ಯದ ಬಹುಪಾಲು ಜನರು ತೆಗೆದುಕೊಂಡಿದ್ದ ಕೋವಿಶೀಲ್ಡ್ ಲಸಿಕೆ ದಾಸ್ತಾನು ಬಗ್ಗೆಯೂ ಗಮನ ಹರಿಸಲಿಲ್ಲ. ಜನರೂ ಸಹ ಮುನ್ನೆಚ್ಚರಿಕೆ ಡೋಸ ಪಡೆಯುವ ಬಗ್ಗೆ ಆಸಕ್ತಿ ತೋರಿಸಲಿಲ್ಲ.

    ಆದರೆ ಜೀನಾ, ಯುಎಸ್ ಸೇರಿ ಕೆಲ ದೇಶಗಳಲ್ಲಿ ಕೋವಿಡ್ ನಾಲ್ಕನೇ ಅಲೆ ಎದುರಾಗುತ್ತಲೇ ಜನರು ಕಳವಳಗೊಂಡು ಮುನ್ನೆಚ್ಚರಿಕೆ ಡೋಸ್ ಪಡೆಯಲು ಮುಂದಾದಾಗ ಕೋವ್ಯಾಕ್ಸಿನ್ ಹೊರತುಪಡಿಸಿ ಬೇರೆ ಲಸಿಕೆ ಲಭ್ಯವಿರಲಿಲ್ಲ. ಆದರೆ ಲಸಿಕೆಗೆ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕೋವಿಶೀಲ್ಡ್ ಲಸಿಕೆಯ ಬೇಡಿಕೆ ಸಲ್ಲಿಸಿತ್ತು. ಅದರಂತೆ ರಾಜ್ಯಕ್ಕೆ 8 ಲಕ್ಷ ಡೋಸ್ ಲಸಿಕೆ ಆಗಮಿಸಿದೆ. ವಿಶೇಷ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಲಸಿಕೆ ವಿತರಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ.

    ರಾಷ್ಟ್ರೀಯ ಆರೋಗ್ಯ ಮಿಷನ್‌ನ ರಾಜ್ಯ ನಿರ್ದೇಶಕ ನವೀನ್ ಭಟ್ ಮಾತನಾಡಿ, ರಾಜ್ಯವು ಎರಡು ದಿನಗಳ ಹಿಂದಷ್ಟೇ 8 ಲಕ್ಷ ಡೋಸ್ ಲಸಿಕೆ ಹೊಂದಿದ್ದು, ಇದರ ವಿತರಣೆ ಕುರಿತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಈ ತಿಂಗಳೊಳಗೆ 8 ಲಕ್ಷ ಡೋಸ್ ಲಸಿಕೆ ವಿತರಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಮುನ್ನೆಚ್ಚರಿಕೆ ಡೋಸ್ ಕುರಿತು ವ್ಯಾಪಕ ಪ್ರಚಾರ ನೀಡಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಸದ್ಯ ದಾಸ್ತಾನು ಹೊಂದಿರುವ ಲಸಿಕೆಯ ಶೇ. 80 ಪ್ರತಿಶತ ಪೂರ್ಣಗೊಳ್ಳುತ್ತಲೇ ಹೆಚ್ಚಿನ ಲಸಿಕೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

    ಒಟ್ಟಿಗೆ ಹುಡುಗಿ ಮನೆಗೆ ನುಗ್ಗಿದ ಹಾಲಿ, ಮಾಜಿ ಪ್ರೇಮಿಗಳಿಬ್ಬರು ಅರೆಸ್ಟ್​​! ಇತ್ಯರ್ಥಕ್ಕೆ ಹೋಗಿ ಇಕ್ಕಟ್ಟಿಗೆ ಸಿಲುಕಿದರು

    ಬ್ಯಾಂಕ್​ ಮುಂದೆಯೇ ಹೆಚ್ಚು ಸಮಯ ಕಳೆಯುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕನ ಅಸಲಿ ಮುಖವಾಡ ಬಯಲು!

    ಮೇಲಿನ ಮನೆಯ ಶೋಯಬ್, ಕೆಳಗಿನ ಮನೆಯ ಶಾಜಿಯಾ ಒಂದೇ ದಿನ ಗಾಯಬ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts