More

    ಕೆ.ಜೆ. ಜಾರ್ಜ್​ಗೆ ಆದ ರೀತಿ ನನಗೂ ಆಗಬೇಕು, ನಾನು 40 ವರ್ಷ ಪಾರ್ಟಿ ಕಟ್ಟಿ ಬೆಳೆಸಿದ್ದೇನೆ: ಕೆ.ಎಸ್​. ಈಶ್ವರಪ್ಪ

    ಬೆಂಗಳೂರು: ನನ್ನನ್ನು ಮತ್ತು ರಮೇಶ್​ ಜಾರಕಿಹೊಳಿ ಅವರನ್ನು ಮತ್ತೆ ಮಂತ್ರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಹೀಗಾಗಿ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್​. ಈಶ್ವರಪ್ಪ ಅವರು ಹೇಳಿದರು.

    ನಗರದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ಬಿಜೆಪಿ ಕಟ್ಟಿದವರಲ್ಲಿ ನಾನೂ ಒಬ್ಬ. 90ರ ದಶಕದಲ್ಲಿ ಬಿಜೆಪಿ ರಾಜ್ಯದಲ್ಲಿ ಪ್ರವರ್ಧಮಾನದಲ್ಲಿತ್ತು. ಅನಂತ್ ಕುಮಾರ್, ಯಡಿಯೂರಪ್ಪ ಜತೆ ಹೆಗಲಿಗೆ ಹೆಗಲು ಕೊಟ್ಟು ಪ್ರವಾಸ ಮಾಡಿದ್ದೇನೆ. ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ, ಸದಾನಂದ ಗೌಡ ಅಧ್ಯಕ್ಷರಾದಾಗ ಪಾರ್ಟಿ ವೇಗವಾಗಿ ಬೆಳೆಯಿತು. 25 ಲೋಕಸಭಾ ಸ್ಥಾನ ಪಡೆಯೋಕೆ ಲಕ್ಷಾಂತರ ಕಾರ್ಯಕರ್ತರ ಶ್ರಮ ಇದೆ ಎಂದರು.

    ನನ್ನ ಮೇಲೆ ನಿರಾಧಾತ ಆರೋಪ ಬಂದಿತ್ತು. ಬಳಿಕ ಬಿಜೆಪಿ ಅಧ್ಯಕ್ಷರಿಗೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಬಯಕೆ ವ್ಯಕ್ತಪಡಿಸಿದ್ದೆ. ಆದರೆ ಆಗ ಅವರು ಬೇಡ ಎಂದರು. ಜಾರ್ಜ ವಿರುದ್ಧ ಆರೋಪ ಬಂದಾಗ ನಾನೇ ರಾಜೀನಾಮೆ ಕೊಡುವಂತೆ ಒತ್ತಾಯಿಸಿದ್ದೆ. ಅವರು ರಾಜೀನಾಮೆ ಕೊಟ್ಟರು ಕ್ಲೀನ್ ಚಿಟ್ ಸಿಕ್ಕ ನಂತರ ಮತ್ತೆ ಸಚಿವರಾದರು. ನನ್ನ ಕೇಸಲ್ಲೂ ಕ್ಲೀನ್ ಚಿಟ್ ಸಿಕ್ಕಿದೆ. ಕ್ಲೀನ್ ಚಿಟ್ ಸಿಕ್ಕ ಕೂಡಲೇ ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುತ್ತೇವೆ ಎಂದಿದ್ದರು‌. ಆದರೆ, ಸಿಎಂ ಜತೆ ಮಾತನಾಡಿದಾಗಲೂ ಸಿಎಂ ಏನೂ ಹೇಳಲಿಲ್ಲ. ಸೌಮ್ಯ ಪ್ರತಿಭಟನೆ ಮಾಡುವುದಾಗಿ ವರಿಷ್ಟರ ಗಮನಕ್ಕೆ ತಂದು ಬಂದಿದ್ದೆ, ಇದೀಗ ಈಶ್ವರಪ್ಪ, ಜಾರಕಿಹೊಳಿ ಅವರು ಕ್ಲೀನ್ ಚಿಟ್ ತೆಗೆದುಕೊಂಡಿದ್ದಾರೆ. ಅವರನ್ನು ನಾವು ಸಂಪುಟಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ಎಂದಿದ್ದಾರೆ. ಹೀಗಾಗಿ ನಾನು ಸಿಎಂ ಹಾಗೂ ವರಿಷ್ಠರಿಗೆ ಅಭಿನಂದಿಸುತ್ತೇನೆ ಎಂದರು.

    ನನ್ನನ್ನು ಹಾಗೂ ಜಾರಕಿಹೊಳಿ ಅವರನ್ನು ಆದಷ್ಟು ಬೇಗ ಸಂಪುಟಕ್ಕೆ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ನಮ್ಮನ್ನಷ್ಟೇ ಅಲ್ಲ, ಬೇರೆಯವರನ್ನೂ ತೆಗೆದುಕೊಂಡರೂ ನಮ್ಮದೇನೂ ಅಭ್ಯಂತರವಿಲ್ಲ. ನನಗೆ ಮಂತ್ರಿ ಮಾಡುವ ಭರವಸೆ ಬೆಳಗ್ಗೆ ಗೊತ್ತಾಗಿದೆ‌. ಹಾಗಾಗಿ ಪತ್ರಿಕಾಗೋಷ್ಠಿ ನಡೆಸಬೇಕಾಯಿತು. ಸಿಎಂ ನೀಡಿದ ಭರವಸೆಯಿಂದ ನನಗೆ ಸಮಾಧಾನವಾಗಿದೆ. ನನ್ನನ್ನೂ ಸೇರಿದಂತೆ 30-40 ವರ್ಷದ ಶ್ತಮದಿಂದ ಪಕ್ಷ ರಾಜ್ಯದಲ್ಲಿ ಈ ಮಟ್ಟಕ್ಕೆ ಬೆಳೆದಿದೆ. ಪಕ್ಷದಿಂದ ನಮಗೆ ಪ್ರತಿಫಲವೂ ಸಿಕ್ಕಿದೆ‌. ಅನಂತಕುಮಾರ್, ಪ್ರಲ್ಹಾದ್ ಜೋಶಿ ಕೇಂದ್ರ ಮಂತ್ರಿಯಾದರು, ಯಡಿಯೂರಪ್ಪ 4 ಬಾರಿ ಸಿಎಂ ಆದರು. ನಾನೂ ಡಿಸಿಎಂ ಆದೆ. ಬರುವ ದಿನಗಳಲ್ಲಿ ಧರ್ಮನಿಷ್ಟ, ರಾಷ್ಟ್ರನಿಷ್ಠ ರಾಜಕಾರಣ ಮಾಡುತ್ತೇವೆ ಎಂದು ಈಶ್ವರಪ್ಪ ಹೇಳಿದರು.

    ಸಿಎಂ ನನ್ನ ಜತೆ ಮಾತನಾಡಿಲ್ಲ. ಸಿಎಂ ಜತೆ ನಾನು ಮಾತನಾಡಿ ಅಧಿವೇಶನದಲ್ಲಿ ಭಾಗವಹಿಸುವ ನಿರ್ಧಾರ ತೆಗೆದುಕೊಳ್ಖುತ್ತೇನೆ. ನನಗೆ ಸಚಿವ ಆಗಬೇಕು ಅಂತಾ ಅಲ್ಲ‌. ಆದರೆ ಆಪಾದನೆ ಬಂದಿತ್ತಲ್ಲ. ನಾನು ಆರೋಪ ಮುಕ್ತವಾದ ಬಳಿಕ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು. ನನಗೆ ಕ್ಲೀನ್ ಚಿಟ್ ಸಿಕ್ಕು ನಾಲ್ಕು ತಿಂಗಳಾಗಿದೆ. ಹಾಗಾಗಿ ನಾನು ಸಂಪುಟ ಸೇರುವ ಇಚ್ಛೆ ವ್ಯಕ್ತಪಡಿಸಿದ್ದೇನೆ. ಈಗ ಭರವಸೆ ಸಿಕ್ಕಿದೆ. ಹಾಗಾಗಿ ನಾನು ಪ್ರತಿಭಟನೆಯಿಂದ ಹಿಂದೆ ಸರಿದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

    ಹೈಕಮಾಂಡ್ ರಾಜ್ಯದ ಯಾವ ನಾಯಕರನ್ನೂ ತಾತ್ಸರ ಮಾಡಿಲ್ಲ. ಯಡಿಯೂರಪ್ಪ- ಬೊಮ್ಮಾಯಿ ನಡುವೆ ಗೊಂದಲವಿಲ್ಲ ಎಂದು ಅವರೇ ಹೇಳಿದ್ದಾರೆ. ನನಗೆ ಮಂತ್ರಿ ಮಾಡುವುದರ ಹಿಂದೆ ಯಾವುದೇ ಪಿತೂರಿ ಇಲ್ಲ. ಪಿತೂರಿ ಇದೆ ಎಂದು ನಾನು ಹೇಳಿ ಪಕ್ಷ ಮೂರು ಭಾಗ ಮಾಡಲ್ಲ ಎಂದು ಕೇಳಿದರು. ನನ್ನನ್ಮು ಸಂಪುಟಕ್ಕೆ ತೆಗೆದುಕೊಳ್ಳುವುದಾಗಿ ಸಿಎಂ ಮಾಧ್ಯಮವೊಂದಕ್ಕೆ ಹೇಳಿದ್ದಾರೆ. ಅವರ ಮೇಲೆ ನನಗೆ ನಂಬಿಕೆ ಇದೆ. ನಾನು ಸಿಎಂ ಜತೆ ಮಾತನಾಡಿ ಅಧಿವೇಶನದಲ್ಲಿ ಭಾಗವಹಿಸಲು ತೀರ್ಮಾನಿಸುತ್ತೇನೆ ಎಂದು ತಿಳಿಸಿದರು.

    ಜಾರ್ಜ್​ಗೆ ಆದ ರೀತಿ ನನಗೂ ಆಗಬೇಕು. ನಾನು 40 ವರ್ಷ ಪಾರ್ಟಿ ಕಟ್ಟಿ ಬೆಳೆಸಿದ್ದೇನೆ ಎನ್ನುವ ಮೂಲಕ ಪರೋಕ್ಷವಾಗಿ ಪಕ್ಷದ‌ ಹೈ ಕಮಾಂಡ್​ಗೆ ಡಿಮ್ಯಾಂಡ್ ಇಟ್ಟ ಈಶ್ವರಪ್ಪ. ವಿರೋಧ ಪಕ್ಷದಲ್ಲಿ ಆಪಾದನೆ ಮುಕ್ತರಾಗಿ ಬಂದ ಶಾಸಕರಿಗೆ ಸಚಿವ ಕೊಡ್ತಾರೆ ನಮ್ಮಲ್ಲಿ ಯಾಕೆ ಇಲ್ಲ ಅಂತ ಪ್ರಶ್ನೆ ಮಾಡಿದರು. ನನಗೆ ಸಚಿವ ಆಗಬೇಕು ಅಂತ ಆಸೆ ಅಲ್ಲ. ಆಪಾದನೆ ಬಂದಿತ್ತು. ಇದೀಗ ಕ್ಲೀನ್ ಚಿಟ್​ ಪಡೆದು ಹೊರಬಂದಿದ್ದೇನೆ. ಮತ್ತೆ ಸಚಿವರಾಗಿ ಮಾಡುತ್ತೇವೆ ಅಂತಾ ಬಿಎಸ್‌ವೈ, ಸಿಎಂ ಹಾಗು ಕಟೀಲ್‌ ಹೇಳಿದ್ದರು. ಈಗ ಅದ್ದಕ್ಕಾಗಿ ಕೇಳುತ್ತಿದ್ದೇನೆ ಎಂದರು.

    ವಿಜಯಾನಂದ ಚಿತ್ರ ಯುವ ಸಮುದಾಯಕ್ಕೆ ಮಾದರಿ: ಸಿಎಂ ಬೊಮ್ಮಾಯಿ ಮೆಚ್ಚುಗೆ

    ಸಿನಿಮಾ ಎಫೆಕ್ಟ್​! ಮನೆ ಬಾಡಿಗೆ ಕೊಡಲು ಹೋದಾಗ ಮಾಲೀಕನಿಂದ ಅನುಭವಿಸಿದ ಕಹಿ ಘಟನೆ ಬಿಚ್ಚಿಟ್ಟ ಬಾಲಿವುಡ್​ ನಟಿ

    ಬೀಚ್​ಗೆ ಮೈತುಂಬ ಬಟ್ಟೆ ಹಾಕ್ಕೊಂಡು ಬಂದು ಟ್ರೋಲ್​ ಆದ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts