More

    ವಿಜಯಾನಂದ ಚಿತ್ರ ಯುವ ಸಮುದಾಯಕ್ಕೆ ಮಾದರಿ: ಸಿಎಂ ಬೊಮ್ಮಾಯಿ ಮೆಚ್ಚುಗೆ

    ಬೆಳಗಾವಿ: ಪ್ರಸ್ತುತ ಜೀವನ ಚರಿತ್ರೆ ಆಧಾರಿತ ಚಲನಚಿತ್ರಗಳು ಹೆಚ್ಚಿಗೆ ಬರುತ್ತಿವೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಡಾ.‌ ವಿಜಯ ಸಂಕೇಶ್ವರ ಅವರ ಜೀವನಾಧಾರಿತ ವಿಜಯಾನಂದ ಚಿತ್ರ ಉತ್ತಮವಾಗಿದ್ದು, ಯುವ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಶಿಸಿದರು.

    ನಗರದ ಕೆಎಲ್ಇ ಸಂಸ್ಥೆಯ ಲಿಂಗರಾಜು ಕಾಲೇಜು ಮೈದಾನದಲ್ಲಿ ‌ಮಂಗಳವಾರ ಆಯೋಜಿಸಿದ್ದ “ವಿರಾಟಪುರದ ವಿರಾಗಿ” ಚಲನಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ‌ದ ಸಿಎಂ ಬೊಮ್ಮಾಯಿ ವಿಜಯಾನಂದ ಸಿನಿಮಾ ಬಗ್ಗೆಯೂ ಮಾತನಾಡಿದರು.

    ಲಿಂಗೈಕ್ಯರಾದ ಹಾನಗಲ್ ಕುಮಾರ ಶಿವಯೋಗಿಗಳ ಕುರಿತು ಎಲ್ಲರಿಗೂ ಗೊತ್ತೆ ಇದೆ. ಅವರು ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಸ್ಥಾಪಿಸಿದ ಶಿವಯೋಗಿ ಮಂದಿರ ಇನ್ನೂ ಇದೆ. ಆಧ್ಯಾತ್ಮಿಕ, ಪರಂಪರೆ, ಮಹಾತ್ಮಾರನ್ನು ತಯಾರ ಮಾಡುವ ಶಿವಯೋಗ ಮಂದಿರವಿದೆ. ಶಿವಯೋಗಿಗಳು ವೀರಶೈವ ಸಮುದಾಯವನ್ನು ಕಟ್ಟಿ ಬೆಳೆಸಿದ್ದಾರೆ ಎಂದರು.

    ವೀರಶೈವ ಲಿಂಗಾಯತ ಸಮುದಾಯ ಚಲನಾಶೀಲ ಸಮಾಜವಾಗಿದೆ. ಇದು ಎಲ್ಲರನ್ನೂ ಬೆಳೆಸಿದೆ. ಹಳ್ಳಿಗಾಡಿನಲ್ಲಿ ಶಿಕ್ಷಣಕ್ಕ ಹೆಚ್ಚು ಮಹತ್ವ ಕೊಟ್ಟಿದೆ. ಅಕ್ಷರ, ದಾಸೋಹ, ಪರಂಪರೆ ಕಟ್ಟಿಕೊಂಡು ಹೋಗುತ್ತಿದೆ ಎಂದು ತಿಳಿಸಿದರು.

    ವಿರಾಟಪುರದ ವಿರಾಗಿ ಚಲನಚಿತ್ರ ಯುವ ಪೀಳಿಗೆ ಮಾದರಿಯಾಗಿದೆ. ತುಂಬಾ ಸಂಶೋಧನೆ ಮಾಡಿದ್ದಾರೆ. ಇದು ಉತ್ತಮ ಬಯೋಪಿಕ್ ಚಿತ್ರವಾಗಿ ಹೊರಬರಲಿ ಎಂದರು ಹಾರೈಸಿದರು.

    ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೆಎಲ್ಇ ಕಾರ್ಯಾಧ್ಯಕ್ಷ ಡಾ.‌ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ ಇತರರಿದ್ದರು.

    ನಿಮ್ಮ ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ ಈ ಡೈಮಂಡ್​ ಕಾರ್ಡ್​ನಲ್ಲಿರುವ ಮೂರನೇ 8 ಅನ್ನು ಪತ್ತೆ ಹಚ್ಚಿ!

    ಸಿನಿಮಾ ಎಫೆಕ್ಟ್​! ಮನೆ ಬಾಡಿಗೆ ಕೊಡಲು ಹೋದಾಗ ಮಾಲೀಕನಿಂದ ಅನುಭವಿಸಿದ ಕಹಿ ಘಟನೆ ಬಿಚ್ಚಿಟ್ಟ ಬಾಲಿವುಡ್​ ನಟಿ

    ನಿದ್ದೆ ಮಾಡೋವಾಗ ಗೊರಕೆ ನಿಲ್ಲಿಸಲು ಇಲ್ಲಿದೆ ಸರಳ ಉಪಾಯ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts