More

    ಬೀಚ್​ಗೆ ಮೈತುಂಬ ಬಟ್ಟೆ ಹಾಕ್ಕೊಂಡು ಬಂದು ಟ್ರೋಲ್​ ಆದ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​!

    ಮುಂಬೈ: ಉರ್ಫಿ ಜಾವೇದ್​ ಹೆಸರು ಕೇಳಿದರೆ ಸಾಕು ಅವರ ಬಗ್ಗೆ ತುಂಬಾ ಗೊತ್ತಿರುವವರಿಗೆ ಆಕೆಯ ಅರೆಬರೆ ಮೈಮಾಟ ಪ್ರದರ್ಶನವೇ ಕಣ್ಮುಂದೆ ಬರುತ್ತದೆ. ಸದಾ ಕನಿಷ್ಠ ಬಟ್ಟೆ ತೊಟ್ಟು ಸಖತ್​ ಹಾಟ್​ ಆಗಿ ಕಾಣಿಸಿಕೊಳ್ಳುವ ಈ ಬಾಲಿವುಡ್​ ನಟಿ, ಜಾಲತಾಣದಲ್ಲಿ ತಮ್ಮ ಅರೆಬರೆ ಬಟ್ಟೆಯಿಂದಲೇ ಫೇಮಸ್​ ಆಗುತ್ತಿದ್ದಾಳೆ.

    ಅರೆಬೆತ್ತಲೆ ದೇಹ ಕಾಣುವಂತೆ ಪ್ರತಿನಿತ್ಯ ವಿಭಿನ್ನ ಉಡುಗೆ ತೊಟ್ಟು ಮುಂಬೈ ಬೀದಿಯಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆಕೆಯ ಇನ್​ಸ್ಟಾಗ್ರಾಂ ಇಣುಕಿ ನೋಡಿದರೆ ಅಲ್ಲಿ ಅರೆಬೆತ್ತಲೆ ಫೋಟೋಗಳ ರಾಶಿಯೇ ಇದೆ. ಇದೇ ಕಾರಣಕ್ಕೆ ಆಗಾಗ ಟ್ರೋಲ್​ ಆಗುವ ಉರ್ಫಿ ಇದೀಗ ಮತ್ತೊಮ್ಮೆ ಟ್ರೋಲ್​ ಆಗಿದ್ದಾರೆ. ಆದರೆ, ಈ ಬಾರಿ ಮೈ ತುಂಬಾ ಬಟ್ಟೆ ಹುಟ್ಟಿರುವ ಕಾರಣಕ್ಕೆ ಉರ್ಫಿ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ.

    ದುಬೈನ ಬೀಚ್​ನಲ್ಲಿ ಮೈ ತುಂಬ ಬಟ್ಟೆ ಧರಿಸಿ ಉರ್ಫಿ ಕಾಣಿಸಿಕೊಂಡಿದ್ದಾರೆ. ಈ ರೀತಿಯ ಸಾಂಪ್ರದಾಯಿಕ ಅವತಾರದಲ್ಲಿ ಉರ್ಫಿ ಕಾಣಿಸಿಕೊಳ್ಳುವದೇ ತುಂಬಾ ವಿರಳ. ಅದರಲ್ಲೂ ಬಿಕಿನಿಯಲ್ಲಿ ಪ್ರವಾಸಿಗರು ಮಿಂದೇಳುವ ಬೀಚ್​ಗೆ ಸಲ್ವಾರ್​ ಸೂಟ್​ ಧರಿಸಿ ಭೇಟಿ ನೀಡಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಉರ್ಫಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಉರ್ಫಿ ಜಾವೇದ್​ ಪ್ಯಾರೆಲೆಲ್​ ಯೂನಿವರ್ಸ್​ ಎಂದು ವಿಡಿಯೋ ಮೇಲೆ ಬರೆಯಲಾಗಿದೆ. ವಿಡಿಯೋ ನೆಟ್ಟಿಗರ ಗಮನ ಸೆಳೆದಿದ್ದು, ಕಾಮೆಂಟ್​ ಮೂಲಕ ಉರ್ಫಿಯ ಕಾಲೆಳೆಯುತ್ತಿದ್ದಾರೆ.

    ಮುಂಬೈನ ಸಾರ್ವಜನಿಕ ಪ್ರದೇಶದಲ್ಲಿ ಅರೆಬೆತ್ತಲೆಯಾಗಿ ಕಾಣಿಸಿಕೊಳ್ಳುವ ನೀನು ಟೂ ಪೀಸ್​ ಹಾಕಿಕೊಂಡು ನೀರಿನಲ್ಲಿ ಮಿಂದೇಳುವ ಬೀಚ್​ನಲ್ಲಿ ಮೈ ತುಂಬ ಬಟ್ಟೆ ಹಾಕಿಕೊಂಡಿದ್ದೀಯಲ್ಲಾ ಇದೇನಾ ನಿನ್ನ ಸಂಸ್ಕೃತಿ? ನಿಮ್ಮ ಮನೆಯಲ್ಲಿ ಇದೇನಾ ಹೇಳಿಕೊಟ್ಟಿರುವುದು ಎಂದೆಲ್ಲ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

    ಇನ್ನು ಬಿಗ್​ ಬಾಸ್​ ಒಟಿಟಿ ಷೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಭಾರಿ ಪ್ರಸಿದ್ಧಿ ಪಡೆದಿರುವ ಈ ಉರ್ಫಿ ಜಾವೇದ್, ಯಾವುದಕ್ಕೂ ಕೇರ್‌ ಮಾಡದೇ ತನ್ನ ಮೈಮಾಟ ಪ್ರದರ್ಶನ ಮಾಡುವಲ್ಲಿ ಎತ್ತಿದ ಕೈ. ಪ್ರತಿದಿನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಡ್ಡೆ ಹುಡುಗರ ಮೈ ಬಿಸಿಯೇರಿಸುವಂತಹ ಫೋಟೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಅವರ ಹಾಟ್​ ಅವತಾರಕ್ಕೆ ಫಿದಾ ಆಗಿರುವ ಅಭಿಮಾನಿಗಳು ಪ್ರತಿದಿನ ಅವರ ಫೋಟೋ ಅಥವಾ ವಿಡಿಯೋಗಳಿಗೆ ಎದುರು ನೋಡುತ್ತಲೇ ಇರುತ್ತಾರೆ. (ಏಜೆನ್ಸೀಸ್​)

    View this post on Instagram

    A post shared by Uorfi (@urf7i)

    ಗ್ಲೋಬಲ್ ಗಾರ್ನರ್ ಮೇಳ ಇಂದಿನಿಂದ: ಅರಮನೆ ಮೈದಾನದಲ್ಲಿ ಆಯೋಜನೆ, ಅವಧೂತ ವಿನಯ್ ಗುರೂಜಿ ಚಾಲನೆ

    ಇಂಧನ ಉತ್ಪಾದನೆಯಲ್ಲಿ ಭಾರತ 3ನೇ ಸ್ಥಾನದ ಗುರಿ: ಕೇಂದ್ರ ಸಚಿವ ಹರ್ದೀಪ್​ಸಿಂಗ್ ಪುರಿ ಹೇಳಿಕೆ

    ನನ್ನ ಸಾವು 2034ಕ್ಕೆ! ಡೆತ್​ ಡೇ ಸಂಭ್ರಮಿಸಲು ಆಹ್ವಾನ ಪತ್ರಿಕೆ ಹಂಚಿದ ಮಾಜಿ ಸಚಿವ: ಕಾರಣ ಕೇಳಿದ್ರೆ ದಂಗಾಗ್ತೀರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts