More

    ಗ್ಲೋಬಲ್ ಗಾರ್ನರ್ ಮೇಳ ಇಂದಿನಿಂದ: ಅರಮನೆ ಮೈದಾನದಲ್ಲಿ ಆಯೋಜನೆ, ಅವಧೂತ ವಿನಯ್ ಗುರೂಜಿ ಚಾಲನೆ

    ಬೆಂಗಳೂರು: ಗ್ಲೋಬಲ್ ಗಾರ್ನರ್ ಸಂಸ್ಥೆ ಮತ್ತು ವಿಜಯವಾಣಿ, ಮತ್ತು ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಶನಿವಾರ ಹಾಗೂ ಭಾನುವಾರ (ಡಿ.17 ಮತ್ತು 18) ‘ಗ್ಲೋಬಲ್ ಗಾರ್ನರ್ ಎಕ್ಸ್​ಪೋ’ ನಡೆಯಲಿದೆ.

    ಗ್ಲೋಬಲ್ ಗಾರ್ನರ್ ಮೇಳ ಇಂದಿನಿಂದ: ಅರಮನೆ ಮೈದಾನದಲ್ಲಿ ಆಯೋಜನೆ, ಅವಧೂತ ವಿನಯ್ ಗುರೂಜಿ ಚಾಲನೆಅರಮನೆ ಮೈದಾನದಲ್ಲಿರುವ ಪ್ರಿನ್ಸಸ್ ಗಾಲ್ಪ್ ಗೇಟ್ 9ರಲ್ಲಿ ನಡೆಯಲಿರುವ ಎಕ್​ಪೋಗೆ ಅವಧೂತ ವಿನಯ್ ಗುರೂಜಿ, ನಟಿ ಮತ್ತು ಬಿಜೆಪಿ ಮುಖಂಡೆ ಮಾಳವಿಕಾ ಅವಿನಾಶ್ ಶನಿವಾರ ಬೆಳಗ್ಗೆ 10.30ಕ್ಕೆ ಚಾಲನೆ ನೀಡಲಿದ್ದಾರೆ. ಈ ವೇಳೆ ಸಂಸ್ಥೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ (ಸಿಎಂಡಿ) ವಿಕಾಸ್ ರಾವತ್ ಭಾಗವಹಿಸಲಿದ್ದಾರೆ.

    ಗ್ರಾಹಕರು ಮತ್ತು ಉತ್ಪಾದಕರು ಇಬ್ಬರಿಗೂ ಸಹಾಯವಾಗುವ ರೀತಿಯಲ್ಲಿ ಮೇಳವನ್ನು ಆಯೋಜಿಸಲಾಗಿದೆ. ಹೊಸದಾಗಿ ಬಿಜಿನೆಸ್ ಆರಂಭಿಸುವವರಿಗೆ ಮಾಹಿತಿ ನೀಡಲಾಗುತ್ತದೆ. ಹೊಸದಾಗಿ ಉತ್ಪನ್ನಗಳನ್ನು ತಯಾರಿಸುವ ವರಿಗೆ ಮಾರುಕಟ್ಟೆ ಕಲ್ಪಿಸಲು ಬೇಕಾದ ಸಿದ್ಧತೆಗಳನ್ನು ಮೇಳದಲ್ಲಿ ತಿಳಿಸಿಕೊಡಲಾಗುತ್ತದೆ.

    ಗ್ಲೋಬಲ್ ಗಾರ್ನರ್ ಸಂಸ್ಥೆ ಕರ್ನಾಟಕ ಮತ್ತು ಗೋವಾ ಮಾರುಕಟ್ಟೆ ಮುಖ್ಯಸ್ಥ ದೇವರಾಜ್, ಇದೊಂದು ಬಹು ಆಯಾಮದ ಮೇಳ ವಾಗಿದೆ. ಇಲ್ಲಿ ವಿದ್ಯಾ ರ್ಥಿಗಳು, ಮಹಿಳೆ ಯರು, ವ್ಯಾಪಾರಿಗಳು, ಗ್ರಾಹಕರು, ಉತ್ಪಾದಕರು, ನವೋದ್ಯಮ ಆರಂಭಿಸಲು ಚಿಂತನೆ ನಡೆಸುತ್ತಿರುವವರು, ಹೊಸದಾಗಿ ಬಿಜಿನೆಸ್ ಆರಂಭಿಸಲು ನೆರವು ಬಯಸುತ್ತಿರುವವರು- ಹೀಗೆ ಸೇರಿ ವರ್ಗದ ಜನರಿಗೆ ಗ್ಲೋಬಲ್ ಗಾರ್ನರ್ ಮೇಳವು ಸಹಾಯವಾಗಲಿದೆ ಎಂದು ವಿವರಿಸಿದರು.

    ಹೊಸದಾಗಿ ಉತ್ಪನ್ನಗಳನ್ನು ತಯಾರಿಸಿ ಮಾರ್ಕೆಟ್ ಮಾಡುವುದು ಹೇಗೆಂದು ತಿಳಿಯ ದಿದ್ದರೆ, ಮೇಳದಲ್ಲಿ ವೇದಿಕೆ ಕಲ್ಪಿಸಲಾಗುತ್ತದೆ. ಈಗಾಗಲೇ ಮಾರುಕಟ್ಟೆ ಮಾಡುತಿರುವವರಿಗೆ ವಿಸ್ತರಣೆಗೆ ಕೌಶಲದ ಬಗ್ಗೆ ತಿಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಗ್ಲೋಬಲ್ ಗಾರ್ನರ್ ಸಂಸ್ಥೆಯಲ್ಲಿ 20 ಕೋಟಿಗೂ ಹೆಚ್ಚಿನ ವಸ್ತುಗಳಿದ್ದು, ಸುಲಭವಾಗಿ ಆನ್​ಲೈನ್, ಆಫ್​ಲೈನ್​ನಲ್ಲಿ ಖರೀದಿಸಬಹುದಾಗಿದೆ.

    ಗ್ಲೋಬಲ್ ಗಾರ್ನರ್ ಮೇಳ ಇಂದಿನಿಂದ: ಅರಮನೆ ಮೈದಾನದಲ್ಲಿ ಆಯೋಜನೆ, ಅವಧೂತ ವಿನಯ್ ಗುರೂಜಿ ಚಾಲನೆಗ್ಲೋಬಲ್ ಗಾರ್ನರ್ ಎಕ್ಸ್​ಪೋ’ ಬಹು ಆಯಾಮದ ಮೇಳವಾಗಿದೆ. ಗ್ರಾಹಕರು, ಉತ್ಪಾದಕರು, ವ್ಯಾಪಾರಿಗಳು ಹಾಗೂ ಹೊಸದಾಗಿ ಬಿಜಿನೆಸ್ ಶುರು ಮಾಡಲು ಚಿಂತನೆ ನಡೆಸುತ್ತಿರುವವರಿಗೆ ವೇದಿಕೆಯಾಗಿದೆ. ಪ್ರತಿಯೊಬ್ಬರೂ ಈ ವೇದಿಕೆಯನ್ನ ಬಳಸಿಕೊಳ್ಳಬೇಕು.

    | ದೇವರಾಜ್ ಗ್ಲೋಬಲ್ ಗಾರ್ನರ್ ಸಂಸ್ಥೆ, ಕರ್ನಾಟಕ-ಗೋವಾ ಮಾರುಕಟ್ಟೆ ಮುಖ್ಯಸ್ಥ

    ಗ್ಲೋಬಲ್ ಗಾರ್ನರ್ ಮೇಳ ಇಂದಿನಿಂದ: ಅರಮನೆ ಮೈದಾನದಲ್ಲಿ ಆಯೋಜನೆ, ಅವಧೂತ ವಿನಯ್ ಗುರೂಜಿ ಚಾಲನೆ

    ಇಂಧನ ಉತ್ಪಾದನೆಯಲ್ಲಿ ಭಾರತ 3ನೇ ಸ್ಥಾನದ ಗುರಿ: ಕೇಂದ್ರ ಸಚಿವ ಹರ್ದೀಪ್​ಸಿಂಗ್ ಪುರಿ ಹೇಳಿಕೆ

    ನನ್ನ ಸಾವು 2034ಕ್ಕೆ! ಡೆತ್​ ಡೇ ಸಂಭ್ರಮಿಸಲು ಆಹ್ವಾನ ಪತ್ರಿಕೆ ಹಂಚಿದ ಮಾಜಿ ಸಚಿವ: ಕಾರಣ ಕೇಳಿದ್ರೆ ದಂಗಾಗ್ತೀರಾ

    ಭಾರತದ ಅತ್ಯಂತ ದುಬಾರಿ ಕಾರು ಖರೀದಿಸಿದ ಹೈದರಾಬಾದ್​ ಉದ್ಯಮಿ: ಇದರ ಬೆಲೆ ಕೇಳಿದ್ರೆ ಹುಬ್ಬೇರೋದು ಖಚಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts