More

    ಭಾರತದ ಅತ್ಯಂತ ದುಬಾರಿ ಕಾರು ಖರೀದಿಸಿದ ಹೈದರಾಬಾದ್​ ಉದ್ಯಮಿ: ಇದರ ಬೆಲೆ ಕೇಳಿದ್ರೆ ಹುಬ್ಬೇರೋದು ಖಚಿತ

    ನವದೆಹಲಿ: ಹೈದರಾಬಾದ್​ ಮೂಲದ ಉದ್ಯಮಿ ನಾಸೀರ್​ ಖಾನ್​ (Businessman Naseer Khan) ಎಂಬುವರು ಭಾರತದ ಅತ್ಯಂತ ದುಬಾರಿ ಕಾರನ್ನು (India’s most expensive supercar) ಖರೀದಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

    ಮೆಕ್ಲಾರೆನ್​ 765 ಎಲ್​ಟಿ ಸ್ಪೈಡರ್ (McLaren 765 LT Spider)​ ಹೆಸರಿನ ಕಾರು ಭಾರತದ ದುಬಾರಿ ಕಾರು ಎಂಬುದು ಅಧಿಕೃತವಾಗಿದೆ. ಇದರ ಬೆಲೆ ಬರೋಬ್ಬರಿ 12 ಕೋಟಿ ರೂಪಾಯಿ. ಇತ್ತೀಚೆಗಷ್ಟೇ ಹೈದರಾಬಾದ್​ನ ತಾಜ್​ ಫಲಕ್ನುಮಾ ಪ್ಯಾಲೇಸ್​ನಲ್ಲಿ ಕಾರನ್ನು ಉದ್ಯಮಿಗೆ ಡೆಲಿವರಿ ಮಾಡಲಾಯಿತು.

    ನಾಸೀರ್ ಖಾನ್ ಅವರು ಮೆಕ್ಲಾರೆನ್ 765 ಎಲ್​ಟಿ ಸ್ಪೈಡರ್‌ ಮೇಲೆ ಸುಮಾರು 12 ಕೋಟಿ ರೂಪಾಯಿಗಳನ್ನು ಚೆಲ್ಲಿದ್ದು, ಇದು ಭಾರತದಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರುವ ಅತ್ಯಂತ ದುಬಾರಿ ಸೂಪರ್‌ಕಾರ್‌ಗಳಲ್ಲಿ ಒಂದಾಗಿದೆ. ಬಹುಶಃ ಭಾರತದಲ್ಲಿ 765 ಎಲ್​ಟಿ ಸ್ಪೈಡರ್‌ ಖರೀದಿ ಮಾಡಿದ ಮೊದಲ ಗ್ರಾಹಕರಾಗಿದ್ದಾರೆ.

    ಕಾರು ಆಗಮಿಸಿದ ಖುಷಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್​ ಮಾಡಿರುವ ನಾಸೀರ್​ ಖಾನ್​, ಮೆಕ್ಲಾರೆನ್​ 765 ಎಲ್​ಟಿ ಸ್ಪೈಡರ್​ಗೆ ನಮ್ಮ ಮನೆಗೆ ಸುಸ್ವಾಗತ. ಯಾವುದೇ ಕನಸು ಸಾಕಷ್ಟು ದೊಡ್ಡದೇನಲ್ಲ, ಹೀಗಾಗಿ ಯಾವಾಗಲೂ ನಿಮ್ಮ ಮಿತಿಗಳನ್ನು ಮುಂದಕ್ಕೆ ತಳ್ಳಿರಿ ಎಂದು ಇನ್​ಸ್ಟಾಗ್ರಾಂನಲ್ಲಿ ಕಾರಿನ ಫೋಟೋ ಜೊತೆಗೆ ತಮ್ಮ ಸಂತಸವನ್ನು ನಾಸೀರ್​ ಹಂಚಿಕೊಂಡಿದ್ದಾರೆ.

    ಅಂದಹಾಗೆ ನಾಸೀರ್​ ಅವರು ಕಾರುಗಳ ಮೇಲಿನ ಕ್ರೇಜ್​ ಜಾಸ್ತಿ ಇದೆ. ಈಗಾಗಲೇ ಅವರ ಬಳಿ ಫೆರಾರಿ 812 ಸೂಪರ್​ಫಾಸ್ಟ್​, ಲ್ಯಾಂಬೋರ್ಗಿನಿ ಅವೆಂಟಡಾರ್​, ಮರ್ಸಿಡೀಸ್​ ಬೆಂಜ್​ ಜಿ350ಡಿ, ರೋಲ್ಸ್​ ರಾಯ್ಸ್​ ಕುಲ್ಲಿನಾನ್​ ಬ್ಲ್ಯಾಕ್​ ಬ್ಯಾಡ್ಜ್​, ಫೋರ್ಡ್​ ಮುಸ್ತಾಂಗ್​ ಮತ್ತು ಲ್ಯಾಂಬೋರ್ಗಿನಿ ಉರುಸ್​ ಸೇರಿದಂತೆ ಅನೇಕ ದುಬಾರಿ ಕಾರುಗಳಿಗೆ ಮಾಲೀಕರಾಗಿದ್ದಾರೆ. (ಏಜೆನ್ಸೀಸ್​)

    ಬ್ರಿಟನ್​ನಲ್ಲಿ ಕೇರಳ ಮೂಲದ ನರ್ಸ್, ಆಕೆಯ ಮಕ್ಕಳಿಬ್ಬರ ದುರಂತ ಸಾವು: ಪತಿಯನ್ನು ವಶಕ್ಕೆ ಪಡೆದ ಪೊಲೀಸರು

    ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮನಿಗೆ ಗುಂಡೇಟು: ಅರೋಪಿ ಬಂಧನ

    15 ರನ್​ಗೆ ಆಲೌಟ್: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಾಖಲೆ ಬರೆದ ಸಿಡ್ನಿ ಥಂಡರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts