More

    ಹೇಗಿದ್ದ ಕೃತಿ ಖರಬಂದ ಹೇಗಾಗಿದ್ದಾರೆ ಗೊತ್ತಾ?

    ಮುಂಬೈ: ಕೃತಿ ಖರಬಂದ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್​ನಲ್ಲಿ ನೆಲೆಗೊಂಡಿರುವುದಷ್ಟೇ ಅಲ್ಲ, ಅಲ್ಲಿ ಒಂದರಹಿಂದೊಂದು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿರುವ ಅವರು, ’14 ಫೇರೆ’ ಎಂಬ ಹೊಸ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದೆ.

    ಇದನ್ನೂ ಓದಿ: ಶಾರುಖ್​ ‘ಪಠಾಣ್​’ ಚಿತ್ರಕ್ಕೆ ಜಾನ್​ ಅಬ್ರಹಂಗೆ 20 ಕೋಟಿ ಸಂಭಾವನೆ.. ದೀಪಿಕಾಗೆಷ್ಟಿರಬಹುದು?

    ದೇವಾಂಶು ಸಿಂಗ್​ ನಿರ್ದೇಶನದ ’14 ಫೇರೆ’ ಚಿತ್ರದಲ್ಲಿ ವಿಕ್ರಾಂತ್ ಮಾಸ್ಸೆ ಜತೆಗೆ ಕೃತಿ ಅಭಿನಯಿಸಬೇಕಿತ್ತು. ಇಷ್ಟರಲ್ಲಾಗಲೇ ಚಿತ್ರೀಕರಣ ಸಹ ಪ್ರಾರಂಭವಾಗಿರಬೇಕಿತ್ತು. ಆದರೆ, ಕೃತಿ ಹಾಸಿಗೆ ಹಿಡಿದಿರುವುದರಿಂದ, ಚಿತ್ರೀಕರಣವನ್ನು ಮುಂದೂಡಲಾಗಿದೆ.

    ಇಷ್ಟಕ್ಕೂ ಕೃತಿಗೆ ಏನಾಗಿದೆ ಎಂದರೆ, ಮಲೇರಿಯಾ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಈ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ತಮಗೆ ಮಲೇರಿಯಾ ಆಗಿದೆ ಎಂದು ತಮ್ಮ ಹೊಸ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.

    ಇದನ್ನೂ ಓದಿ: ‘ಮಮ್ಮಿ’ ಲೋಹಿತ್​ ನಿರ್ಮಾಣದ ಚಿತ್ರದಲ್ಲಿ ಡಿಂಪಲ್​ ಕ್ವೀನ್​ ರಚಿತಾ ನಾಯಕಿ

    ‘ಇದು ನನ್ನ ಮಲೇರಿಯಾವಾಲಾ ಮುಖ. ನನ್ನ ಬಗ್ಗೆ ಚಿಂತಿಸುತ್ತಿರುವ ಎಲ್ಲರಿಗೂ ತಿಳಿಸಲು ಬಯಸುವುದೇನೆಂದರೆ, ದಿನದಿಂದ ದಿನಕ್ಕೆ ನಾನು ಸುಧಾರಿಸುತ್ತಿದ್ದೇನೆ ಮತ್ತು ಆದಷ್ಟು ಬೇಗ ಗುಣಮುಖಳಾಗುತ್ತೇನೆ ಎಂಬ ವಿಶ್ವಾಸದಲ್ಲಿದ್ದೇನೆ. ಈ ವರ್ಷ ನನಗೆ ಸಾಕಷ್ಟು ತಾಳ್ಮೆ ಮತ್ತು ನನ್ನ ಬಗ್ಗೆ ನಾನು ಹೆಚ್ಚು ಗಮನಹರಿಸಬೇಕು ಮತ್ತು ನನ್ನನ್ನು ನಾನು ಪ್ರೀತಿಸಬೇಕು ಎಂದು ತೋರಿಸಿಕೊಟ್ಟಿದೆ. ಸದ್ಯದಲ್ಲೇ ಹುಷಾರಾಗಿ, ಆದಷ್ಟು ಬೇಗ ಕೆಲಸಕ್ಕೆ ವಾಪಸ್ಸಾಗುವುದಕ್ಕೆ ಕಾಯುತ್ತಿದ್ದೇನೆ’ ಎಂದು ಕೃತಿ ಬರೆದುಕೊಂಡಿದ್ದಾರೆ.

    ‘ಮಮ್ಮಿ’ ಲೋಹಿತ್​ ನಿರ್ಮಾಣದ ಚಿತ್ರದಲ್ಲಿ ಡಿಂಪಲ್​ ಕ್ವೀನ್​ ರಚಿತಾ ನಾಯಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts