More

    1200 ಕೋಟಿ ರೂ ಪರಿಹಾರ ಯಡಿಯೂರಪ್ಪ ತಮ್ಮ ಮನೆಯಿಂದ ಕೊಟ್ರಾ?: ಹುಬ್ಬಳ್ಳಿಯಲ್ಲಿ ಡಿಕೆಶಿ ವಾಗ್ದಾಳಿ

    ಹುಬ್ಬಳ್ಳಿ: ಕರೊನಾ ಲಸಿಕೆಗಾಗಿ ನಾವು 100 ಕೋಟಿ ಕೊಟ್ಟರೇ ಅದಕ್ಕೆ ಕೊಂಕು ಮಾತನಾಡುವ ಬಿಜೆಪಿಯವರು, ಕೇವಲ 1200 ಕೋಟಿ ರೂಪಾಯಿ ಕರೊನಾ ಪರಿಹಾರ ಪ್ಯಾಕೇಜ್ ಕೊಟ್ಟು ಸಾಕಷ್ಟು ಬಿಲ್ಡಪ್ ತೆಗೆದುಕೊಳ್ಳುತ್ತಾರಲ್ಲಾ, ಆ 1200 ಕೋಟಿಯನ್ನು ಯಡಿಯೂರಪ್ಪ ತಮ್ಮ ಮನೆಯಿಂದ ಕೊಟ್ಟಿದ್ದಾ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
    ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವು 45 ಜನ ಎಂಎಲ್ಎ, ಎಂಎಲ್ಸಿಗಳಿದ್ದೇವೆ ಹೀಗಾಗಿ 100 ಕೋಟಿ ಕೊಡಲು ಸಿದ್ಧರಾಗಿದ್ದೇವೆ. ನಾವು ಈ ವಿಚಾರದಲ್ಲಿ ಪಾರದರ್ಶಕವಾಗಿರುತ್ತೇವೆ, ಲಸಿಕೆ ಚುಚ್ಚಲು ಖರ್ಚು ಬೇಡ. ಆದ್ರೆ ಯಡಿಯೂರಪ್ಪನವರಿಗೆ ಈಗಲೂ ಕೇಳುತ್ತಿದ್ದೇವೆ. ಪರ್ಮಿಷನ್ ಕೊಡುತ್ತಿಲ್ಲ. ಸರ್ಕಾರ ನಮಗೆ ಯಾಕೆ ಲಸಿಕೆ ನೀಡಲು ಕೊಡುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.
    ನಮ್ಮ ಆದ್ಯತೆಯೂ ಎಲ್ಲರಿಗೂ ವ್ಯಾಕ್ಸಿನ್ ಕೊಡಬೇಕು ಎನ್ನೋದು ಇದೆ. ಕೇಂದ್ರ ಸರ್ಕಾರ ಎಲ್ಲರಿಗೂ ಲಸಿಕೆ ಕೊಡಬೇಕಿತ್ತು. ಆದ್ರೆ ಸರ್ಕಾರ ಇದಿಯೊ ಇಲ್ವೋ ಎನ್ನೋದೆ ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಕರೊನಾ ಎದುರಿಸಲು. ದೇಶ ಇದರಿಂದ ಬಚಾವ್ ಆಗಲು ಕೇಂದ್ರ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ಕೊಡುತ್ತಿದ್ದೇವೆ. ಎಲ್ಲ ಸಹಕಾರದ ಮೂಲಕ ಜನ ಉಳಿಯಬೇಕು ಅನ್ನೋದೇ ನಮ್ಮ ಆಶಯ. ಕೊರೊನಾಗೆ ಯಾವುದೇ ಜಾತಿ, ಧರ್ಮ ಇಲ್ಲ ಎಂದರು.
    ಕರೊನಾದಿಂದ ತತ್ತರಿಸಿರುವವರಿಗೆ ರಾಜ್ಯ ಸರ್ಕಾರ ಬಿಡಿಗಾಸಿನ ಪರಿಹಾರ ಘೋಷಿಸಿದೆ. ತೋಟಗಾರಿಕೆಗೆ 10 ಸಾವಿರ ಘೋಷಣೆ ಮಾಡಿದ್ದಾರೆ. ಇದು ಒಂದು ಗುಂಟೆಗೆ ನೂರು ರೂಪಾಯಿ ಆಯಿತು. ಅದಕ್ಕೆ ಆರ್ಜಿ ಹಾಕೋಕೆ ಯಾರಾದ್ರು ಬರ್ತಾರಾ…? ಬೇಸಿಕ್ ಕಾಮನ್ ಸೆನ್ಸ್ ಇಲ್ವಾ ಸರ್ಕಾರಕ್ಕೆ? ಕಳೆದ ಬಾರಿಯೂ ಯಾರಿಗೂ ಪರಿಹಾರ ಸಿಗಲಿಲ್ಲ ಶೆಟ್ಟರ್ ಸಾಹೇಬ್ರೆ ನಿಮ್ಮ ಬಳಿ ಲಿಸ್ಟ್ ಇದ್ರೆ ಕೋಡಿ‌, ನಾನೇ ನಿಮಗೆ ಸನ್ಮಾನ ಮಾಡಿ ಹೋಗ್ತಿನಿ ಎಂದು ಜಗದೀಶ್ ಶೆಟ್ಟರ್ ಉದ್ದೇಶಿಸಿ ಲೇವಡಿ ಮಾಡಿದರು.

    ರೋಹಿಣಿ ಸಿಂಧೂರಿ ಹುಟ್ಟುಹಬ್ಬದಂದೇ ಸಂಸದ ಪ್ರತಾಪ್​ ಸಿಂಹರಿಂದ ವಾಗ್ದಾಳಿಯ ಉಡುಗೊರೆ

    ಬಿಎಸ್​​ವೈ ನಿವಾಸಕ್ಕೆ ಶಾಸಕರ ನಿಯೋಗ ! ಯೋಗೇಶ್ವರ್​ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts