More

    ರೋಹಿಣಿ ಸಿಂಧೂರಿ ಹುಟ್ಟುಹಬ್ಬದಂದೇ ಸಂಸದ ಪ್ರತಾಪ್​ ಸಿಂಹರಿಂದ ವಾಗ್ದಾಳಿಯ ಉಡುಗೊರೆ

    ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್​ ಸಿಂಹ ಮತ್ತೊಮ್ಮೆ ಗುಡುಗಿದ್ದಾರೆ. ಹುಟ್ಟುಹಬ್ಬ ದಿನದಂದೇ ರೋಹಿಣಿ ಸಿಂಧೂರಿ ವಿರುದ್ಧ ಪ್ರತಾಪ್​ ಸಿಂಹ್​ ವಾಗ್ದಾಳಿ ನಡೆಸಿದ್ದಾರೆ.

    ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್​ ಸಿಂಹ, ಜನ ಕರೊನಾ ಸಂಕಷ್ಟದಲ್ಲಿ ಇರುವಾಗ ಸ್ವಿಮ್ಮಿಂಗ್ ಪೂಲ್ ಬೇಕಿತ್ತಾ ನಿಮಗೆ? ಎಂದು ರೋಹಿಣಿ ಸಿಂಧೂರಿ ಅವರನ್ನು ಪ್ರಶ್ನಿಸಿದ್ದರು.

    ಔಷಧ ಖರೀದಿಗೆ ಕಾನೂನು ಅಡ್ಡ ಬರುತ್ತೆ. ಆದರೆ, 28 ಲಕ್ಷ ರೂ. ಖರ್ಚು ಮಾಡಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸೋಕೆ ಕಾನೂನು ಅಡ್ಡ ಬರಲಿಲ್ವಾ? ಪಾಪದ ಜನರನ್ನು ರಕ್ಷಿಸೋದು ಬಿಟ್ಟು, ಮೋಜು ಮಸ್ತಿಗೆ ಉತ್ತೇಜನ ಕೊಡುವ ಇಂತಹ ಅಧಿಕಾರಿಯಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಕಿಡಿಕಾರಿದರು.

    ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ 41 ಕೋಟಿ ರೂ. ಹಣ ಬಂದಿದೆ. ಅದರಲ್ಲಿ 39 ಕೋಟಿ ರೂ. ಖರ್ಚಾಗಿದೆ ಎಂದು ಹೇಳಿದ್ದೀರಿ. 39 ಕೋಟಿ ರೂ. ಯಾರಿಗೆ ಕೊಟ್ಟಿದ್ದೀರಿ? ಯಾವುದಕ್ಕೆ ಖರ್ಚು ಮಾಡಿದ್ದೀರಿ ಎಂದು ಮಾಹಿತಿ ಕೊಡಿ. ಜಿಲ್ಲಾಧಿಕಾರಿ ಹಾಗೂ ಡಿಎಚ್ಒ ಮೊದಲು ಲೆಕ್ಕ ಕೊಡಲಿ ಎಂದು ಆಗ್ರಹಿಸಿದರು.

    ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸಲು ಪ್ರಧಾನಿಯವರು ದೇಶಾದ್ಯಂತ 1 ಲಕ್ಷ ವೆಂಟಿಲೇಟರ್ ಕೊಟ್ಟಿದ್ದಾರೆ. ಅವುಗಳನ್ನು ಇನ್‌ಸ್ಟಾಲ್ ಮಾಡಿ ಅಂದ್ರೆ ಅಧಿಕಾರಿಗಳು ಕತೆ ಹೇಳುತ್ತಿದ್ದಾರೆ. ಇವುಗಳನ್ನೆಲ್ಲಾ ಕೇಳಿದ್ರೆ ತಪ್ಪಾ? ಪಿಎಂ ಕೇರ್​ನಿಂದ ಬಂದ 40 ವೆಂಟಿಲೇಟರ್​ಗಳನ್ನು ಇನ್ನು ಅಳವಡಿಕೆ ಮಾಡಿಲ್ಲ. ಇದು ಜಿಲ್ಲಾ ಅಧಿಕಾರಿಗಳ ವೈಫಲ್ಯ ತೋರಿಸುತ್ತದೆ. ಇದನ್ನು ಪ್ರಶ್ನಿಸಿದರೆ, ಜನಪ್ರತಿನಿಧಿಗಳು, ಅಧಿಕಾರಿಗಳ ಮಧ್ಯೆ ಅಸಹಕಾರ ಹೇಗಾಗುತ್ತೆ ಎಂದು ಪ್ರಶ್ನಿಸಿದರು.

    ಸಿಎಂ ಯಡಿಯೂರಪ್ಪ ಅವರು ಕೋವಿಡ್ ರೋಗಿಗಳಿಗೆ ನೆರವಾಗಲೆಂದು ಸ್ಟೆಪ್ ಡೌನ್ ಅಸ್ಪತ್ರೆ ತೆರೆಯಲು ಹೇಳಿದ್ರು. ಖಾಸಗಿ ಆಸ್ಪತ್ರೆಯವರು ಸೂಕ್ತ ಸೌಲಭ್ಯ ತೋರಿಸಿದ ನಂತರ ಸಮಿತಿ ಒಪ್ಪಿಗೆ ಮೇರೆಗೆ ಆಸ್ಪತ್ರೆ ತೆರೆಯಲು ಅನುಮತಿ ಇತ್ತು. ಮೈಸೂರಿನಲ್ಲಿ ನಾಯಿಕೊಡೆಗಳಂತೆ ಸ್ಟೆಪ್ ಡೌನ್ ಆಸ್ಪತ್ರೆ ನಿರ್ವಹಿಸುತ್ತಿದ್ದವು. ಶಾಸಕ ರಾಮದಾಸ್ ಅವರು ಇದರ ಭ್ರಷ್ಟಾಚಾರ ಪತ್ತೆ ಹಚ್ಚುವ ತನಕ ಯಾರೂ ಗಮನಹರಿಸಿರಲಿಲ್ಲ. ನೀವು ಯಾರ ಅನುಮತಿ ಪಡೆದು 16 ಸ್ಟೆಪ್ ಡೌನ್ ಆಸ್ಪತ್ರೆ ಗೆ ಅನುಮತಿ ನೀಡಿದ್ದೀರಿ. ದಲು ಅದಕ್ಕೆ ಉತ್ತರ ಕೊಡಿ ಎಂದು ಜಿಲ್ಲಾಧಿಕಾರಿಗಳು ಪ್ರಶ್ನಿಸಿ, ತರಾಟೆಗೆ ತೆಗೆದುಕೊಂಡರು. (ದಿಗ್ವಿಜಯ ನ್ಯೂಸ್​)

    ಮೆಡಿಕಲ್ ಆಕ್ಸಿಜನ್ ಉತ್ಪಾದನೆ 10 ಪಟ್ಟು ಹೆಚ್ಚಿದೆ : ಪ್ರಧಾನಿ ಮೋದಿ

    ‘ಆಮೀರ್‌ಖಾನ್‌ ಎದುರು ಖ್ಯಾತ ವೈದ್ಯ ಬಿಚ್ಚಿಟ್ಟಿದ್ದಾರೆ ನೋಡಿ ಮೆಡಿಕಲ್‌ ಮಾಫಿಯಾ ರಹಸ್ಯ- ಈಗೇನ್‌ ಮಾಡ್ತೀರಾ?’

    ಮೂರು ಬಾರಿ ಗರ್ಭಿಣಿ, ಗರ್ಭಪಾತ: ಮಾಜಿ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ ನಟಿ ಚಾಂದಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts