More

    ಮೆಡಿಕಲ್ ಆಕ್ಸಿಜನ್ ಉತ್ಪಾದನೆ 10 ಪಟ್ಟು ಹೆಚ್ಚಿದೆ : ಪ್ರಧಾನಿ ಮೋದಿ

    ನವದೆಹಲಿ : ಭಾರತದಲ್ಲಿ ಕರೊನಾ ರೋಗಿಗಳ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಲಿಖ್ವಿಡ್​ ಮೆಡಿಕಲ್ ಆಕ್ಸಿಜನ್​ ಉತ್ಪಾದನೆಯು ಈಗ 10 ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಪಿಎಂ ಮೋದಿ ಅವರು ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್​ ಕಿ ಬಾತ್​’ನಲ್ಲಿ ಮಾತನಾಡುತ್ತಾ, ಆಕ್ಸಿಜನ್ ಪೂರೈಕೆಗಾಗಿ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು. “ಸಾಮಾನ್ಯವಾಗಿ 900 ಮೆಟ್ರಿಕ್ ಟನ್​ಗಳಷ್ಟು ಒಂದು ದಿನಕ್ಕೆ ಎಲ್​ಎಂಒ ಉತ್ಪಾದನೆ ನಡೆಯುತ್ತಿತ್ತು. ಇಂದು ದಿನಕ್ಕೆ 9,500 ಮೆಟ್ರಿಕ್ ಟನ್​​ಗಳ ಉತ್ಪಾದನೆಯಾಗುತ್ತಿದೆ” ಎಂದರು.

    ಇದನ್ನೂ ಓದಿ: ಲಾಕ್​ಡೌನ್ ವಿಸ್ತರಣೆ : ಸಿಎಂ ಯಡಿಯೂರಪ್ಪ ಹೇಳಿದ್ದೇನು ?

    ಕೆಲವು ವಾರಗಳ ಹಿಂದೆ ಆಸ್ಪತ್ರೆಗಳಿಂದ ಇನ್ನು ಕೆಲವೇ ಗಂಟೆಗಳ ಆಕ್ಸಿಜನ್ ಉಳಿದಿದೆ ಎಂದು ಅನೇಕ ಎಸ್​ಒಎಸ್​ ಬರುತ್ತಿದ್ದವು. ಸಾಮಾಜಿಕ ಮಾಧ್ಯಮದಲ್ಲೂ ದೇಶದಾದ್ಯಂತದ ನಾಗರೀಕರ ಆಕ್ಸಿಜನ್ ಬೇಡಿಕೆಗಳು ಕಂಡುಬಂದವು. ಈ ಸನ್ನಿವೇಶದಲ್ಲಿ ಆಕ್ಸಿಜನ್ ಕೊರತೆಯನ್ನು ನೀಗಿಸಲು ಖಾಸಗಿ ಘಟಕಗಳಲ್ಲಿರುವ ಸ್ಟಾಕ್​ ಸೇರಿದಂತೆ ಎಲ್ಲಾ ಲಿಖ್ವಿಡ್ ಆಕ್ಸಿಜನ್ಅನ್ನು ವೈದ್ಯಕೀಯ ಉದ್ದೇಶಕ್ಕೆ ಮಾತ್ರ ಬಳಸಬೇಕೆಂದು ಸರ್ಕಾರ ನಿರ್ದೇಶಿಸಿತು. ಜೊತೆಗೆ ವಿದೇಶದಿಂದ ತುರ್ತು ವೈದ್ಯಕೀಯ ಸಹಾಯ ಹರಿದುಬಂತು. ರಾಜ್ಯಗಳ ಆಕ್ಸಿಜನ್ ಬೇಡಿಕೆ ಈಡೇರಿಸಲು ವಿಶೇಷ ಆಕ್ಸಿಜನ್ ಎಕ್ಸ್​​ಪ್ರೆಸ್​ ರೈಲುಗಳನ್ನು ಆರಂಭಿಸಲಾಯಿತು ಎಂದರು.

    ಕರೊನಾ ವಿರುದ್ಧದ ಹೋರಾಟದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಕರೊನಾ ವಾರಿಯರ್​ಗಳ ಮಹತ್ವಪೂರ್ಣ ಸೇವೆ ಎಲ್ಲರೂ ಹೆಮ್ಮೆ ಪಡುವಂಥದ್ದು ಎಂದ ಮೋದಿ, ಸರ್ಕಾರವು ಕರೊನಾ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು. ಇಂದು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಏಳು ವರ್ಷಗಳನ್ನು ಪೂರೈಸಿರುವುದನ್ನು ಕೇಳುಗರಿಗೆ ನೆನಪಿಸಿದ ಮೋದಿ, ತಮ್ಮ ಸರ್ಕಾರದ ಧ್ಯೇಯವಾದ “ಸಬ್​ಕಾ ಸಾಥ್, ಸಬ್​ಕಾ ವಿಕಾಸ್​, ಸಬ್​ಕಾ ವಿಶ್ವಾಸ್​” ಎಂಬಂತೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು. (ಏಜೆನ್ಸೀಸ್)

    ಬೀದಿನಾಯಿಯ ಮೇಲೆ ಕ್ರೌರ್ಯ ಮೆರೆದವನ ಬಂಧನ

    ಕೋವಿಡ್ ನಿಯಂತ್ರಣಕ್ಕೆ ಹೊಸ ಅಸ್ತ್ರ : ಲಘುವಿಮಾನದಲ್ಲಿ ಔಷಧ ಸಿಂಪಡಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts