More

    ನಾಳೆ ಕೋಲಾರ ಬಂದ್​; ಪ್ರಮೋದ್​ ಮುತಾಲಿಕ್​ ಪ್ರವೇಶಕ್ಕೆ ನಿಷೇಧ ಹೇರಿದ ಜಿಲ್ಲಾಡಳಿತ

    ಕೋಲಾರ/ಗದಗ: ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ‌ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆದಿದ್ದನ್ನು ಖಂಡಿಸಿ ನಾಳೆ ಕೋಲಾರ ಬಂದ್​​ಗೆ ಕರೆ ನೀಡಲಾಗಿದೆ. ಈ ಬಂದ್​​ನಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭಾಗವಹಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಅವರಿಗೆ ಜಿಲ್ಲೆಯನ್ನು ಪ್ರವೇಶಿಸದಂತೆ ನಿಷೇಧ ಹೇರಿ‌ ಕೋಲಾರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

    ಈ ಮುನ್ನ ಮುತಾಲಿಕ್​ ಅವರು ಕೋಮು ಸಾಮರಸ್ಯ ಕದಡುವಂಥ ಪ್ರಚೋದನಾ ಭಾಷಣ ಮಾಡಿರುವ ಉದಾಹರಣೆ ಇದೆ, ಅವರ ಮೇಲೆ ಈ ಕುರಿತಾಗಿ ಸುಮಾರು 30 ಪ್ರಕರಣಗಳೂ ದಾಖಲಾಗಿದ್ದವು. ಆದ್ದರಿಂದ ಜಿಲ್ಲೆಯಲ್ಲಿ ಶಾಂತಿ ಸಂರಕ್ಷಿಸುವ ನಿಟ್ಟಿನಲ್ಲಿ ಮುತಾಲಿಕ್​ ಅವರು ನವೆಂಬರ್​ 18 ರಿಂದ ನ. 24 ರವರೆಗಿನ 7 ದಿನಗಳು ಕೋಲಾರ ಜಿಲ್ಲೆಗೆ ಭೇಟಿ ನೀಡುವುದಾಗಲಿ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಥವಾ ಇನ್ಯಾವುದೇ ಆಡಿಯೋ-ವಿಡಿಯೋ ಮಾಧ್ಯಮದ ಮುಖಾಂತರ ಭಾಷಣ ಮಾಡುವುದಾಗಲೀ ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಇಂದು(ನ.17) ಆದೇಶ ಹೊರಡಿಸಿದ್ದಾರೆ.

    ಇದನ್ನೂ ಓದಿ: ಗೋವಾ ಚುನಾವಣೆಯಲ್ಲಿ ಲಿಯಾಂಡರ್ ಪೇಸ್ ಸ್ಪರ್ಧೆ, ಸಿಎಂ ಅಭ್ಯರ್ಥಿ ಆಗ್ತಾರಾ ಟೆನಿಸ್​ ದಿಗ್ಗಜ?

    ಮುತಾಲಿಕ್​ ಆಕ್ರೋಶ: ಕೋಲಾರ ಜಿಲ್ಲಾಡಳಿತದ ಈ ಆದೇಶದ ವಿರುದ್ಧ ಗದಗದಲ್ಲಿ ಪ್ರತಿಕ್ರಿಯಿಸಿರುವ ಪ್ರಮೋದ್​ ಮುತಾಲಿಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗದಗ ಪೊಲೀಸರು ನನಗೆ ನಿಷೇಧ ಆದೇಶ ತಲುಪಿಸಿದ್ದಾರೆ. ಸುಳ್ಳು ಕೇಸ್ ನಮೂದಿಸಿ ಪ್ರವೇಶ ನಿಷೇಧ ಮಾಡಿದ್ದಾರೆ. ತಕ್ಷಣ ಬೆಂಗಳೂರಿಗೆ ಹೋಗಿ ಈ ಆದೇಶಕ್ಕೆ ತಡೆ ತಗೊಂಡು ನಾಳೆ ಕೋಲಾರಕ್ಕೆ ಹೋಗ್ತೀನಿ ಎಂದಿದ್ದಾರೆ.

    “ನಾನು ಕಾನೂನ ಬಾಹಿರ ಭಾಷಣ ಮಾಡಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳಲಿ. ಬಿಜೆಪಿ ಸರ್ಕಾರ ತಕ್ಷಣ ಜಿಲ್ಲಾಡಳಿತಕ್ಕೆ ನಿಷೇಧ ಆದೇಶ ವಾಪಸ್​ ಪಡೆಯುವಂತೆ ಸೂಚಿಸಬೇಕು. ತಾಲಿಬಾನ್ ರೀತಿಯಲ್ಲಿ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದೆ. ಆರ್.ಎಸ್.ಎಸ್., ವಿಎಚ್.ಪಿ., ಬಿಜೆಪಿ ಸೇರಿ ‌ಹಿಂದೂ ಸಂಘಟನೆಗಳು ನಾಳಿನ ಬಂದ್​​ಗೆ ಬೆಂಬಲ ನೀಡಿವೆ” ಎಂದು ಮುತಾಲಿಕ್​ ಹೇಳಿದ್ದಾರೆ.

    ರೈತರ ವಿರುದ್ಧದ ಎಲ್ಲಾ ಕೇಸುಗಳು ರದ್ದು! ಚುನಾವಣೆ ಸಮಯಕ್ಕೆ ಮಹತ್ವದ ನಿರ್ಧಾರ!

    ದಾಖಲೆ ಯಶಸ್ಸಿನೊಂದಿಗೆ ವಿವಾದಕ್ಕೆ ಸಿಲುಕಿದ ಜೈಭೀಮ್​! ನಟ ಸೂರ್ಯ ಮನೆಗೆ ಪೊಲೀಸ್ ಭದ್ರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts