More

    ಚುನಾವಣೆಗೆ ಜಿಲ್ಲಾಡಳಿತ ಸಜ್ಜು,ಜಿಲ್ಲಾ ಚುನಾವಣಾಧಿಕಾರಿ
    ಮನೆಯಲ್ಲೇ ಮತದಾನ ಅಂತ್ಯ,ಮತಚೀಟಿ ವಿತರಣೆ ಆರಂಭ
    ನಾಳೆಯಿಂದ ಕರ್ತವ್ಯನಿರತರ ಮತದಾನಕ್ಕೆ ಚಾಲನೆ

    ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
    ಲೋಕಸಭಾ ಚುನಾವಣೆಗೆ ಏ.26ರಂದು ನಡೆಯಲಿರುವ ಮತದಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾ ಶಾಖೆ ಅಗತ್ಯ ಸಿದ್ಧತೆ ಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರು ಹೇಳಿದರು.
    ಡಿಸಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಉಮೇದುವಾರರ ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾ ಡಿದ ಅವರು,ತುಮಕೂರು ಜಿಲ್ಲೆ ಶಿರಾ ಮತ್ತು ಪಾವಗಡ ತಾಲೂಕುಗಳು ಸೇರಿ ಕ್ಷೇತ್ರದ ವ್ಯಾಪ್ತಿಯ 8ವಿಧಾನಸಭಾ ಕ್ಷೇತ್ರಗಳ ಮತಗಟ್ಟೆ ಗಳಿಗೆ ಸರಬರಾಜಾಗಲಿರುವ ಬ್ಯಾಲೆಟ್‌ಯುನಿಟ್,ಕಂಟ್ರೋಲ್ ಯುನಿಟ್ ಮತ್ತು ವಿವಿಪ್ಯಾಟ್‌ಗಳ 2ನೇ ಹಂತದ ರ‌್ಯಾಂಡಮೈಜೇಶನ್ ಮತ್ತು ಹಂಚಿಕೆ ವಿಧಾನಗಳ ಕುರಿತು ಮಾಹಿತಿ ನೀಡಿದರು.
    ಮತಗಟ್ಟೆಗಳಿಗೆ ಮತಯಂತ್ರಗಳ ಹಂಚಿಕೆ ಕಾರ್ಯ ಏ.25ರಂದು ನಡೆಯಲಿದ್ದು,ಇದರ ಪ್ರಕ್ರಿಯೆಗಳನ್ನು ಉಮೇದುವಾರರು ಅಥ ವಾ ಅವರಿಂದ ನಿಯೋಜಿತರಾದವರು ವೀಕ್ಷಿಸಬಹುದಾಗಿದೆ. ಈ ವಿದ್ಯಾಮಾನಗಳನ್ನು ರಾಜಕೀಯ ಪಕ್ಷಗಳ ಪ್ರತಿ ಮತಗಟ್ಟೆ ಏಜೆಂಟರಿಗೆ ತಿಳಿಸುವಂತೆ ಹಾಗೂ ಯಾವುದೇ ಅಡಚಣೆಗಳಾಗದಂತೆ ನೋಡಿಕೊಳ್ಳುವಂತೆ ಮನವಿ ಮಾಡಿದರು.
    ಕ್ಷೇತ್ರ ವ್ಯಾಪ್ತಿಯ 2168ಮತಗಟ್ಟೆಗಳಿಗೆ ಪ್ರತಿ ಕೇಂದ್ರಕ್ಕೆ 2 ಮತಯಂತ್ರಗಳಂತೆ 4336 ಮತಯಂತ್ರಗಳನ್ನು ಹಂಚಿಕೆ ಮಾಡಲಾಗುವು ದು. ತುರ್ತು ಸಂದರ್ಭಗಳಿಗೆಂದು ಹೆಚ್ಚುವರಿ 897ಮತಯಂತ್ರಗಳನ್ನು ಕಾಯ್ದಿರಿಸಲಾಗಿದೆ. ಚುನಾವಣೆಯಲ್ಲಿ 5233 ಬ್ಯಾಲೆಟ್‌ಯೂ ನಿಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
    ಹಿರಿಯ ನಾಗರಿಕರು(85+)ಹಾಗೂ ಅಂಗವಿಕಲರ ಮನೆ ಮತದಾನ ಮಂಗಳವಾರ ಅಂತಿಮ ದಿನವಾಗಿದೆ. ಅಗತ್ಯ ಸೇವೆಗಳಿಗೆ ನಿಯೋಜಿತ ಮತದಾರರು ಮತ ಚಲಾಯಿಸಲು ತಹಸೀಲ್ದಾರ್ ಕಚೇರಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಏ.19,20 ಮತ್ತು 21ರಂದು ಬೆಳಗ್ಗೆ 10ರಿಂದ ಸಂಜೆ 5ಗಂಟೆರೊಳಗೆ ಮತ ಚಲಾಯಿಸಬಹುದಾಗಿದೆ ಎಂದರು.
    ಮತ ಚೀಟಿ ವಿತರಿಸುವ ಕಾರ‌್ಯ ಜಿಲ್ಲಾದ್ಯಂತ ಮಂಗಳವಾರದಿಂದ ಆರಂಭವಾಗಿದೆ. ಖಾಸಗಿಯಾಗಿ ವಿತರಿಸುವ ಪಕ್ಷದ ಚಿಹ್ನೆ ಇರುವ ಚೀಟಿಗಳನ್ನು ಮತಗಟ್ಟೆಯೊಳಗೆ ಕೊಂಡೊಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಜಿಲ್ಲಾ ಚುನಾವಣಾ ಶಾಖೆಯಿಂದ ವಿತರಿ ಸುವ ಮತಚೀಟಿಗಳಲ್ಲಿ ಮತಗಟ್ಟೆ ವಿವರವಿರುವ ಕ್ಯೂಆರ್ ಕೋಡ್ ನಮೂದಿಸಲಾಗಿದೆ ಎಂದರು. ಚುನಾವಣಾ ವೀಕ್ಷಕ ಮನೋಹರ ಮರಾಂಡಿ,ಎಡಿಸಿ ಬಿ.ಟಿ.ಕುಮಾರಸ್ವಾಮಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts