More

    ಐಸಿಸಿ ಏಕದಿನ ರ‌್ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ ನಂ. 1, ರೋಹಿತ್ ಶರ್ಮ ನಂ. 2

    ದುಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮ ಐಸಿಸಿ ಏಕದಿನ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ ಕ್ರಮವಾಗಿ ನಂ. 1 ಮತ್ತು 2 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ವೇಗಿ ಜಸ್‌ಪ್ರೀತ್ ಬುಮ್ರಾ ನಂ. 2 ಪಟ್ಟವನ್ನು ಕಾಯ್ದುಕೊಂಡಿದ್ದಾರೆ.

    ಇಂಗ್ಲೆಂಡ್-ಐರ್ಲೆಂಡ್ ಏಕದಿನ ಸರಣಿಯ ಬಳಿಕ ಪರಿಷ್ಕೃತಗೊಂಡ ಐಸಿಸಿ ರ‌್ಯಾಂಕಿಂಗ್ ಬುಧವಾರ ಬಿಡುಗಡೆಯಾಗಿದ್ದು, ಕೊಹ್ಲಿ 871 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ 855 ಅಂಕದೊಂದಿಗೆ ದ್ವಿತೀಯ ಮತ್ತು ಪಾಕಿಸ್ತಾನದ ಬಾಬರ್ ಅಜಮ್ 829 ಅಂಕದೊಂದಿಗೆ ತೃತೀಯ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

    ಐರ್ಲೆಂಡ್ ನಾಯಕ ಆಂಡ್ರೋ ಬಲ್ಬಿರ್ನಿ ಇಂಗ್ಲೆಂಡ್ ವಿರುದ್ಧ ಅಂತಿಮ ಏಕದಿನ ಪಂದ್ಯದಲ್ಲಿ ಸಿಡಿಸಿದ 113 ರನ್ ಸಾಧನೆಯಿಂದ 4 ಸ್ಥಾನ ಬಡ್ತಿ ಪಡೆದು 42ನೇ ಸ್ಥಾನಕ್ಕೇರಿದ್ದಾರೆ. 142 ರನ್ ಸಿಡಿಸಿದ ಪಂದ್ಯದ ಮತ್ತೋರ್ವ ಹೀರೋ ಪೌಲ್ ಸ್ಟರ್ಲಿಂಗ್ 1 ಸ್ಥಾನ ಮೇಲೇರಿ 26ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ನಾಯಕ ಇವೊಯಿನ್ ಮಾರ್ಗನ್ ಶತಕ ಸಿಡಿಸಿದ ಸಾಧನೆಯಿಂದ 1 ಸ್ಥಾನ ಮೇಲೇರಿ 22ನೇ ಸ್ಥಾನ ಗಳಿಸಿದ್ದಾರೆ. 2ನೇ ಏಕದಿನ ಪಂದ್ಯದಲ್ಲಿ 82 ರನ್ ಸಿಡಿಸಿ ಮಿಂಚಿದ್ದ ಜಾನಿ ಬೇರ್ ಸ್ಟೋ 13ನೇ ಸ್ಥಾನಕ್ಕೇರಿದ್ದಾರೆ.

    ಇದನ್ನೂ ಓದಿ: VIDEO: 51ನೇ ವಸಂತಕ್ಕೆ ಕಾಲಿಟ್ಟ ಮಾಜಿ ವೇಗಿ ವೆಂಕಟೇಶ್​ ಪ್ರಸಾದ್​..

    ಇಂಗ್ಲೆಂಡ್ ಬೌಲರ್‌ಗಳಲ್ಲಿ ಲೆಗ್ ಸ್ಪಿನ್ನರ್ ಆದಿಲ್ ರಶೀದ್ 29ರಿಂದ 25ನೇ ಸ್ಥಾನಕ್ಕೇರಿದ್ದಾರೆ. ಸರಣಿಯಲ್ಲಿ 8 ವಿಕೆಟ್ ಕಬಳಿಸಿ ಮಿಂಚಿದ ಎಡಗೈ ವೇಗಿ ಡೇವಿಡ್ ವಿಲ್ಲಿ 6 ಸ್ಥಾನ ಮೇಲೇರಿ 51ನೇ ಸ್ಥಾನ ಗಳಿಸಿದ್ದಾರೆ.

    ಸರಣಿಯ 2 ಪಂದ್ಯ ಗೆದ್ದ ಸಾಧನೆಯಿಂದ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡ ಐಸಿಸಿ ವಿಶ್ವಕಪ್ ಸೂಪರ್ ಲೀಗ್‌ನಲ್ಲಿ 20 ಅಂಕ ಕಲೆಹಾಕಿದ್ದರೆ, ಐರ್ಲೆಂಡ್ 10 ಅಂಕ ಪಡೆದಿದೆ. 2023ರ ಏಕದಿನ ವಿಶ್ವಕಪ್‌ಗೆ ಅರ್ಹತಾ ರೇಸ್ ಆಗಿರುವ ಸೂಪರ್‌ಲೀಗ್‌ನಲ್ಲಿ ಒಟ್ಟು 13 ತಂಡಗಳಿದ್ದು, ಇದೇ ಮೊದಲ ಸರಣಿ ಆಗಿದೆ.

    ರಾಮಮಂದಿರ ಶಿಲಾನ್ಯಾಸಕ್ಕೆ ಕ್ರೀಡಾತಾರೆಯರ ಸಂಭ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts