More

    VIDEO: 51ನೇ ವಸಂತಕ್ಕೆ ಕಾಲಿಟ್ಟ ಮಾಜಿ ವೇಗಿ ವೆಂಕಟೇಶ್​ ಪ್ರಸಾದ್​..

    ಬೆಂಗಳೂರು: ಭಾರತೀಯ ಕ್ರಿಕೆಟ್​ನ ಅತ್ಯಂತ ಯಶಸ್ವಿ ಬೌಲರ್​ಗಳಲ್ಲಿ ಒಬ್ಬರೆನಿಸಿರುವ ವೆಂಕಟೇಶ್​ ಪ್ರಸಾದ್​ ಬುಧವಾರ 51ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 90ರ ದಶಕದಲ್ಲಿ ರಾಷ್ಟ್ರೀಯ ತಂಡದ ಭಾಗವಾಗಿದ್ದ ವೆಂಕಟೇಶ್​ ಪ್ರಸಾದ್​ ಹುಟ್ಟುಹಬ್ಬಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸಮಿತಿ (ಐಸಿಸಿ) ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ವಿಡಿಯೋ ಪ್ರಕಟಿಸಿ ಶುಭಾಶಯ ಕೋರಿದೆ. ಬೆಂಗಳೂರಿನಲ್ಲಿ ನಡೆದ 1996ರ ಏಕದಿನ ವಿಶ್ವಕಪ್​ ಟೂನಿರ್ಯ ಕ್ವಾರ್ಟರ್ ಫೈನಲ್  ಪಂದ್ಯದಲ್ಲಿ ಆಮೀರ್​ ಸೊಹೈಲ್​ ಅವರನ್ನು ಬೌಲ್ಡ್​ ಮಾಡಿದ್ದ ವಿಡಿಯೋವನ್ನು ಐಸಿಸಿ ಪ್ರಕಟಿಸಿದೆ. ಅಲ್ಲದೆ, ಮಾಜಿ ವೇಗಿ ದೊಡ್ಡ ಗಣೇಶ್​ ಸೇರಿದಂತೆ, ಹಾಲಿ -ಮಾಜಿ ಕ್ರಿಕೆಟಿಗರು ವೆಂಕಟೇಶ್​ ಪ್ರಸಾದ್​ಗೆ ಶುಭಾಶಯ ಕೋರಿದ್ದಾರೆ.

    ಇದನ್ನೂ ಓದಿ:ಇಂಗ್ಲೆಂಡ್​ ಮಣಿಸುವ ಮೂಲಕ ಭಾರತದ ದಾಖಲೆ ಹಿಂದಿಕ್ಕಿದ ಐರ್ಲೆಂಡ್​..!

    ಕರ್ನಾಟಕದ ಮತ್ತೋರ್ವ ವೇಗಿ ಜಾವಗಲ್​ ಶ್ರೀನಾಥ್​, ಸ್ಪಿನ್ನರ್​ ಅನಿಲ್​ ಕುಂಬ್ಳೆ ಹಾಗೂ ರಾಹುಲ್​ ದ್ರಾವಿಡ್​, 90ರ ದಶಕದಲ್ಲಿ ರಾಷ್ಟ್ರೀಯ ತಂಡದಲ್ಲಿ ಕಾಯಂ ಸ್ಥಾನ ಪಡೆದಿದ್ದರು. ಬೌಲಿಂಗ್​ನಲ್ಲಿ ವೆಂಕಿ, ಶ್ರೀನಾಥ್​, ಕುಂಬ್ಳೆ ಮಿಂಚುತ್ತಿದ್ದರೆ, ರಾಹುಲ್​ ದ್ರಾವಿಡ್​ ಬ್ಯಾಟಿಂಗ್​ನಲ್ಲಿ ತಂಡಕ್ಕೆ ಆಧಾರವಾಗುತ್ತಿದ್ದರು. ಎದುರಾಳಿ ತಂಡಕ್ಕೆ ಕಡಿವಾಣ ಹಾಕುವುದರಲ್ಲಿ ನಿಪುಣರಾಗಿದ್ದ ವೆಂಕಟೇಶ್​ ಪ್ರಸಾದ್​, ರಾಜ್ಯ ಹಾಗೂ ರಾಷ್ಟ್ರೀಯ ತಂಡದಲ್ಲಿ 90ರ ದಶಕದಲ್ಲಿ ಶ್ರೀನಾಥ್​ ಹಾಗೂ ವೆಂಕಿ ಜೋಡಿ ಭಲೇ ವೇಗದ ಜೋಡಿ ಎನಿಸಿಕೊಂಡಿತ್ತು. ಇಂದಿಗೆ (ಆ.5) 51ನೇ ವರ್ಷಕ್ಕೆ ಕಾಲಿಟ್ಟಿರುವ ಮಾಜಿ ವೇಗಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    1996ರ ಏಕದಿನ ವಿಶ್ವಕಪ್​ನ ಬೆಂಗಳೂರಿನಲ್ಲಿ ನಡೆದ ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ವೆಂಕಟೇಶ್​ ಪ್ರಸಾದ್​ ಎಸೆತವನ್ನು ಬೌಂಡರಿಗಟ್ಟಿದ ಪಾಕಿಸ್ತಾನದ ಆಮೀರ್​ ಸೊಹೈಲ್​, ವೆಂಕಟೇಶ್​ ಅವರನ್ನು ಚೆಂಡನ್ನು ತೋರಿಸಿ ಅಣಕ್ಕಿಳಿಸಿದರು. ಆದರೆ, ಮರು ಎಸೆತದಲ್ಲಿಯೇ ಸೊಹೈಲ್​ ಅವರನ್ನು ಬೌಲ್ಡ್​ ಮಾಡಿದ ವೆಂಕಟೇಶ್​ ಸೇಡಿಗೆ ಕ್ಷಣಾರ್ಧದಲ್ಲಿಯೇ ಸೇಡು ತೀರಿಸಿಕೊಂಡಿದ್ದರು. ಈ ವಿಡಿಯೋ ಯೂಟ್ಯೂಬ್​ನಲ್ಲಿ ಸಂಚಲವನ್ನೇ ಸೃಷ್ಟಿಸಿದೆ. ರಾಷ್ಟ್ರೀಯ ತಂಡದ ಪರ 33 ಟೆಸ್ಟ್​, 161 ಏಕದಿನ ಪಂದ್ಯಗಳಿಂದ ಕ್ರಮವಾಗಿ 96 ಹಾಗೂ 196 ವಿಕೆಟ್​ ಕಬಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts