More

    ಕೆಐಎಡಿಬಿ ಭೂ ದರ ನಿಗದಿಗೊಂದು ನೀತಿ

    ಬೆಂಗಳೂರು: ಒಂದು ಅನುಮತಿಯೊಂದಿಗೆ ಕೈಗಾರಿಕೆ ಆರಂಭಕ್ಕೆ ಅವಕಾಶ ನೀಡಲು ನಿರ್ಧರಿಸಿದ ಸರ್ಕಾರ, ಈಗ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯಲ್ಲೂ ಸುಧಾರಣೆಗೆ ಮುಂದಾಗಿದೆ. ಕೆಐಎಡಿಬಿಯಿಂದ ಈಗಾಗಲೇ ಭೂ ಹಂಚಿಕೆ ಮಾಡಿರುವ ಹಳೇ ಪ್ರಕರಣಗಳಿಗೂ ಅನ್ವಯಿಸುವಂಥ ಹಾಗೂ ಮುಂದಿನ ಹೊಸ ಹಂಚಿಕೆಗೂ ಅನ್ವಯ ಆಗುವಂಥ ಪ್ರತ್ಯೇಕ ವೈಜ್ಞಾನಿಕ ನೀತಿ ತರುವಂತೆ ಅಧಿಕಾರಿಗಳಿಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸೂಚಿಸಿದ್ದಾರೆ.

    ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ಕೆಐಎಡಿಬಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಂಡಳಿಯಿಂದ ಭೂಸ್ವಾಧೀನ ಪಡಿಸಿಕೊಂಡಿರುವ ಭೂ ಮಾಲೀಕರಿಗೆ ಪರಿಹಾರ ನೀಡುವ ಕಾರ್ಯ ಚುರುಕು ಗೊಳಿಸುವಂತೆ ಸೂಚಿಸಿದರು. ಭೂಮಾಲೀಕರಿಗೆ ಪರಿಹಾರ ನೀಡುವಲ್ಲಿ ಸಾಕಷ್ಟು ವಿಳಂಬವಾಗುವುದನ್ನು ತಡೆಯಲು ಒಂದು ಕಾಲಮಿತಿಯೊಳಗೆ ಭೂಸ್ವಾಧೀನ ಹಾಗೂ ಪರಿಹಾರ ನೀಡುವಂಥ ವ್ಯವಸ್ಥೆಯ ಮಾರ್ಗಸೂಚಿ ರೂಪಿಸುವಂತೆ ನಿರ್ದೇಶನ ನೀಡಿದರು. ಭೂದರದ ಕುರಿತು ಇರುವ ಗೊಂದಲಗಳ ಬಗ್ಗೆ ಹಲವಾರು ದೂರುಗಳು ಬಂದಿವೆ. ಭೂಮಿ ಹಂಚಿಕೆ ಸಮಯದಲ್ಲಿ ಒಂದು ದರ ಹಾಗೂ ಸೇಲ್ ಡೀಡ್ ಸಮಯದಲ್ಲಿ ಒಂದು ದರದ ನಿಗದಿಸಲಾಗುತ್ತಿದೆ. ಹೀಗಾಗಿ ನಿಯಮಗಳಲ್ಲಿ ಏಕರೂಪತೆ ತರಲು ನಾವು ಕಾರ್ಯಪ್ರವೃತ್ತರಾಗಬೇಕಾಗಿದೆ. ಕೈಗಾರಿಕೋದ್ಯಮಿಗಳಿಗೆ ಕೆಐಎಡಿಬಿ ಭೂಮಿ ಸರಿಯಾಗಿ ತೋರಿಸಲು ವೆಬ್​ಸೈಟ್​ನಲ್ಲಿ ಎಲ್ಲ ಮಾಹಿತಿ ನಮೂದಿಸಿ ಎಂದು ಸೂಚನೆ ನೀಡಿದರು.

    ಇದನ್ನೂ ಓದಿ: ಅಂತಾರಾಷ್ಟ್ರೀಯ ವಿಮಾನ ಹಾರಾಟ ಜುಲೈ 15 ರ ತನಕ ಇಲ್ಲ

    ಲ್ಯಾಂಡ್ ಆಡಿಟ್: ರಾಜ್ಯದಲ್ಲಿ ಕೈಗಾರಿಕೆಗಳಿಗೆ ಬಳಸಿರುವ ಭೂಮಿಯ ಸರ್ವೆ ನಡೆಸಲು ಸಚಿವರು ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿರುವ ಒಟ್ಟು ಭೂಮಿಯ ಪ್ರಮಾಣ, ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಇದುವರೆಗೂ ಸ್ವಾಧೀನ ಪಡಿಸಿಕೊಂಡಿರುವ ಭೂಮಿ ವಿವರ, ಅದರಲ್ಲಿ ಕೈಗಾರಿಕೆಗಳಿಗೆ ಎಷ್ಟು ಹಂಚಿಕೆ ಮಾಡಲಾಗಿದೆ, ಹಂಚಿಕೆ ಮಾಡಿರುವುದರಲ್ಲಿ ಕೈಗಾರಿಕೆಗಳು ಪ್ರಾರಂಭವಾಗಿರುವ ಅಥವಾ ಆಗದಿರುವ ಬಗ್ಗೆ ಮಾಹಿತಿ, ಭೂ ಹಂಚಿಕೆ ಬಳಿಕವೂ ಕೈಗಾರಿಕೆ ಆರಂಭಿಸದಿರುವುದಕ್ಕೆ ಕಾರಣ ಹಾಗೂ ಆ ಬಗ್ಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವಿಸ್ತೃವಾದ ಅಧ್ಯಯನ ಕೈಗೊಳ್ಳುವಂತೆ ತಿಳಿಸಿದರು.

    ಕೋವಿಡ್​ 19ಗೆ ಉಪ್ಪುನೀರು ರಾಮಬಾಣವಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts