More

    ರಾಜಧಾನಿಯಲ್ಲಿ ಬಿಬಿಎಂಪಿ ಖಾತಾ ಆಂದೋಲನ, ಆಸ್ತಿವಂತರಿಗೆ ಸದವಕಾಶ: ಎಂದಿನಿಂದ, ಎಲ್ಲೆಲ್ಲಿ?; ಇಲ್ಲಿದೆ ವಿವರ

    ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಲ್ಲ ಸ್ವತ್ತುಗಳನ್ನು ನಗರ ಪಾಲಿಕೆ ವಹಿಗಳಲ್ಲಿ ದಾಖಲಿಸಿ ಆಸ್ತಿ ತೆರಿಗೆಗೆ ಒಳಪಡಿಸಲು ಹಾಗೂ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ಒದಗಿಸುವ ಉದ್ದೇಶದಿಂದ ನಗರಾದ್ಯಂತ ಫೆ.27ರಿಂದ ‘ಖಾತಾ ಆಂದೋಲನ’ ಕಾರ್ಯಕ್ರಮ ನಡೆಯಲಿದೆ.

    ಪಾಲಿಕೆಯ ಎಲ್ಲ ವಲಯಗಳಲ್ಲಿರುವ ಸಹಾಯಕ ಕಂದಾಯ ಅಧಿಕಾರಿ (ಎಆರ್‌ಒ) ಕಚೇರಿಗಳಲ್ಲಿ ಸ್ಥಾಪಿಸಲಾಗುವ ಹೆಲ್ಪ್‌ಡೆಸ್ಕ್‌ಗಳು ಪ್ರತಿ ನಿತ್ಯ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಾರ್ಯನಿರ್ವಹಿಸಲಿವೆ. ಹೆಲ್ಪ್‌ಡೆಸ್ಕ್‌ನ ಸಿಬ್ಬಂದಿ ಸ್ವತ್ತಿನ ಮಾಲೀಕರಿಗೆ ಹೊಸದಾಗಿ ಖಾತೆ ನೋಂದಾಯಿಸಿಕೊಳ್ಳುವ ಕುರಿತು ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಮಾಲೀಕರು ಸಂಬಂಧಪಟ್ಟ ವಿಭಾಗದ ಸಹಾಯಕ ಕಂದಾಯಕ ಅಧಿಕಾರಗಳ ಕಚೇರಿಗಳನ್ನು ಸಂಪರ್ಕಿಸಿ ಸ್ವತ್ತಿನ ದಾಖಲೆಗಳನ್ನು ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

    ಖಾತೆ ನೋಂದಣಿ ಕುರಿತು ಸಲ್ಲಿಕೆಯಾಗುವ ಅರ್ಜಿಗಳನ್ನು ನಿಗದಿತ ಕಾಲಮಿತಿಯಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸಲಾಗುತ್ತದೆ. ಖಾತಾ ಆಂದೋಲನ ಕಾರ್ಯದ ಮೇಲ್ವಿಚಾರಣೆಗೆ ವಲಯ ಉಪ ಆಯುಕ್ತರಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಉಪವಿಭಾಗ ಕಚೇರಿ ಮತ್ತು ಅಧಿಕಾರಿಯ ವಿವರ ಪಡೆಯಲು ಸಾರ್ವಜನಿಕರು 1533, 080-22221188ಕ್ಕೆ ಕರೆ ಮಾಡಬಹುದು.

    ಇದನ್ನೂ ಓದಿ: ಮಂಡ್ಯದಲ್ಲಿ ಭೀಕರ ಮರ್ಡರ್​: ರುಂಡ ಕತ್ತರಿಸಿ, ಶವ ಪೀಸ್ ಪೀಸ್ ಮಾಡಿ ನಾಲೆಗೆಸೆದ ಹಂತಕರು

    ನಮೂನೆ-ಎ ವಹಿಯಲ್ಲಿ ಖಾತೆ ನೋಂದಣಿಗೆ ಅಗತ್ಯವಿರುವ ದಾಖಲೆಗಳನ್ನು ನೀಡಬೇಕಿದೆ. ರೆವಿನ್ಯೂ ಪ್ರದೇಶಕ್ಕೆ ಸ್ವತ್ತಿನ ಹಕ್ಕು ನಿರೂಪಿಸುವ ದಾಖಲೆಗಳು (ಹಿಂದಿನ ಮತ್ತು ಪ್ರಸ್ತುತ ಮಾಲೀಕತ್ವದ), ಭೂಪರಿವರ್ತನೆ ಆದೇಶ ಮತ್ತು ಸರ್ವೆ ನಕ್ಷೆ, ಪಹಣಿ, ಸ್ವತ್ತಿನ ಋಣಭಾರ ರಾಹಿತ್ಯ ಪ್ರಮಾಣ ಪತ್ರ, ಸ್ವತ್ತಿನ ವಿಸ್ತೀರ್ಣ ಮತ್ತು ಪ್ರದೇಶವನ್ನು ಗುರುತಿಸಿರುವ ಸ್ವಯಂ ದೃಢೀಕೃತ ನಕ್ಷೆ, ಗ್ರಾಮಠಾಣ ಪ್ರದೇಶಕ್ಕೆ ಸ್ವತ್ತಿನ ಹಕ್ಕು ನಿರೂಪಿಸುವ ದಾಖಲೆಗಳು, ಹಿಂದಿನ ಸ್ಥಳೀಯ ಸಂಸ್ಥೆಯು ವಿತರಿಸಿರುವ ನಮೂನೆ-9, ಸ್ವತ್ತಿನ ಋಣಭಾರ ರಾಹಿತ್ಯ ಪ್ರಮಾಣ ಪತ್ರ, ತಹಶೀಲ್ದಾರ್/ ಭೂಮಾಪಕರು ನೀಡಿರುವ ಸರ್ವೆ ನಕ್ಷೆ, ಸ್ವತ್ತಿನ ವಿಸ್ತೀರ್ಣ ಮತ್ತು ಪ್ರದೇಶವನ್ನು ಗುರುತಿಸಿರುವ ಸ್ವಯಂ ದೃಢೀಕೃತ ನಕ್ಷೆ ದಾಖಲೆಗಳನ್ನು ಸಲ್ಲಿಸಬೇಕು. ಅಲ್ಲದೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ), ಕರ್ನಾಟಕ ಗೃಹ ಮಂಡಳಿ(ಕೆಎಚ್‌ಬಿ) ಸೇರಿ ಇತರ ಪ್ರಾಧಿಕಾರದಿಂದ ಹಂಚಿಕೆಯಾಗಿರುವ ಹಂಚಿಕೆ ಪತ್ರ, ಸ್ವಾಧೀನ ಪತ್ರ, ಸ್ವತ್ತಿನ ಋಣಭಾರ ರಾಹಿತ್ಯ ಪ್ರಮಾಣ ಪತ್ರ (ನಮೂನೆ-15), ಗುತ್ತಿಗೆ ಕರಾರು ಪತ್ರ, ಬಿಡಿಎ ಅನುಮೋದಿತ ಬಡಾವಣೆಗಳಲ್ಲಿ ಸ್ವತ್ತಿನ ಹಕ್ಕು ನಿರೂಪಿಸುವ ದಾಖಲೆಗಳು, ಬಡಾವಣೆ ನಕ್ಷೆ, ಬಿಡಿಎಯಿಂದ ಬಿಡುಗಡೆ ಆದೇಶ, ಸ್ವತ್ತಿನ ಋಣಭಾರ ರಾಹಿತ್ಯ ಪ್ರಮಾಣ ಪತ್ರ (ನಮೂನೆ-15), ಸ್ವತ್ತಿನ ವಿಸ್ತೀರ್ಣ ಮತ್ತು ಪ್ರದೇಶವನ್ನು ಗುರುತಿಸಿರುವ ಸ್ವಯಂ ದೃಢೀಕೃರಿಸಿದ ನಕ್ಷೆ ದಾಖಲೆ ಸಲ್ಲಿಸತಕ್ಕದ್ದು. ಬಿಡಿಎ ರೀಕನ್ವೆ ಪ್ರದೇಶದಲ್ಲಿರುವ ಸ್ವತ್ತಿನ ಹಕ್ಕು ವರ್ಗಾವಣೆ ದಾಖಲೆಗಳು, ಸ್ವತ್ತಿನ ಋಣಭಾರ ರಾಹಿತ್ಯ ಪ್ರಮಾಣ ಪತ್ರ, ಸ್ವತ್ತಿನ ವಿಸ್ತೀರ್ಣ ಮತ್ತು ಪ್ರದೇಶವನ್ನು ಗುರುತಿಸುವ ಸ್ವಯಂ ದೃಢೀಕರಿಸಿದ ನಕ್ಷೆ, ಸುಧಾರಣಾ ವೆಚ್ಚ ಪಾವತಿಸಿರುವ ರಶೀದಿ ಪ್ರತಿ ಸಲ್ಲಿಸಬೇಕು.

    ಸಾರ್ವಜನಿಕರಿಗೆ ಪರಿಣಾಮಕಾರಿ ಸೇವೆ ನೀಡಲು ‘ಖಾತಾ ಅಂದೋಲನ’ ಕಾರ್ಯಕ್ರಮ ಆಯೋಜಿಸಲಾಗಿದೆ. ಹೊಸ ವಾರ್ಡ್‌ನ ಹೆಸರಿನಲ್ಲಿ ಖಾತಾ ಮಾಡಿಕೊಳ್ಳಲಾಗುತ್ತದೆ. ಖಾತಾ ಆಂದೋಲನ ನಿಮಿತ್ತ ಪಾಲಿಕೆಗೆ ಅಂದಾಜು 100 ಕೋಟಿ ರೂ.ಆದಾಯ ಬರುವ ನಿರೀಕ್ಷೆ ಇದೆ. ನಗರದ ಹೊರ ವಲಯಗಳಲ್ಲಿ ಅಕ್ರಮವಾಗಿ ‘ಬಿ’ ಸ್ವತ್ತಿನ ಖಾತಾಗಳಿಗೆ ‘ಎ’ಖಾತೆ ನೀಡಲಾಗುತ್ತಿರುವ ಬಗ್ಗೆ ದೂರುಗಳು ದಾಖಲಾಗಿದ್ದು, ಇದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. 2022ರ ಮಾ.31ರ ಅವಧಿಗೆ 3,100 ಕೋಟಿ ರೂ.ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ 2023ರ ಫೆ.21ರ ಅವಧಿಯಲ್ಲೇ 3 ಸಾವಿರ ಕೋಟಿ ರೂ. ಆದಾಯ ಹರಿದು ಬಂದಿದೆ. ಮಾರ್ಚ್ ಅಂತ್ಯದ ವೇಳೆಗೆ 4 ಸಾವಿರ ಕೋಟಿ ರೂ.ಆದಾಯ ಸಂಗ್ರಹಿಸಲು ಗುರಿ ಹೊಂದಿದ್ದೇವೆ.
    | ಡಾ.ಆರ್.ಎಲ್.ದೀಪಕ್ ವಿಶೇಷ ಆಯುಕ್ತ ಬಿಬಿಎಂಪಿ (ಕಂದಾಯ)

    ಖಾತಾ ಅಂದರೇನು?

    ಖಾತಾ ಎಂದರೆ ನಿಮ್ಮ ಸ್ವತ್ತಿನ ಕಂದಾಯ ನಿರ್ಧಾರಣೆಗಾಗಿ ನೀಡಲಾಗುವ ಒಂದು ದಾಖಲೆ. ಇದರಲ್ಲಿ ಸ್ವತ್ತಿನ ಸ್ಥಳ, ಅಳತೆ, ಚೆಕ್ಕುಬಂದಿ, ಕಟ್ಟಡ ಹಾಗೂ ಇತರ ವಿವರ ದಾಖಲಿಸಿ ಸ್ವತ್ತಿನ ಕಂದಾಯ ಪಾವತಿಗೆ ಜವಾಬ್ದಾರಾಗಿರುವ ವ್ಯಕ್ತಿಯನ್ನು ಗುರುತಿಸುವುದು. ಬಿಬಿಎಂಪಿ ವ್ಯಾಪ್ತಿಯ ಸ್ವತ್ತುಗಳ ವಿವರಗಳನ್ನು ನಗರ ಪಾಲಿಕೆಯಲ್ಲಿ ದಾಖಲಿಸಿಕೊಳ್ಳದೆ ಇರುವ ಸ್ವತ್ತಿನ ಮಾಲೀಕರು/ ಅನುಭವದಾರರು ಖಾತೆ ಪಡೆಯಲು ಸಂಬಂಧಪಟ್ಟ ಸಹಾಯ ಕಂದಾಯ ಅಧಿಕಾರಿಯ ಕಚೇರಿಯನ್ನು ಸಂಪರ್ಕಿಸಬಹುದು.

    ಇದನ್ನೂ ಓದಿ: ಮುಂದಿನ ಮುಖ್ಯಮಂತ್ರಿ ಯಾರು?; ಇದೊಂದೇ ಪ್ರಶ್ನೆಗೆ ಯುವಕರ ಮಧ್ಯ ಮಾರಾಮಾರಿ, ಕೊಲೆ ಬೆದರಿಕೆ

    ನಮೂನೆ ಎ ವಹಿಯಲ್ಲಿ ಖಾತಾ ನೋಂದಾಯಿಸಲು ಪ್ರತಿ ನೋಂದಾಯಿತ ಪತ್ರದ ನೋಂದಣಿ ಶುಲ್ಕದ ಶೇ.2 ಅಥವಾ ಕನಿಷ್ಠ 500 ರೂ., ನಮೂನೆ ’ಬಿ’ಯಲ್ಲಿ ಸ್ವತ್ತಿನ ವಿವರ ನಮೂದಿಸಲು ಯಾವುದೇ ಶುಲ್ಕ ಇರುವುದಿಲ್ಲ. ಹೆಲ್ಪ್‌ಡೆಸ್ಕ್‌ಗಳಲ್ಲಿ ಸ್ವೀಕರಿಸುವ ಖಾತೆ ಅರ್ಜಿಗಳೊಂದಿಗೆ ತೆರಿಗೆದಾರರು ಪರಿಶೀಲನಾ ಪಟ್ಟಿ ಅನ್ವಯ ದಾಖಲೆಗಳನ್ನು ಸಲ್ಲಿಸಲಾಗಿದೆಯೇ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅರ್ಜಿದಾರರು ಸಲ್ಲಿಸಿರುವ ಹಾಗೂ ಸಲ್ಲಿಸದೇ ಇರುವ ದಾಖಲೆ ನಮೂದಿಸಿ ಸ್ವೀಕೃತಿ ನೀಡಲಾಗುತ್ತದೆ.

    ಸೇವೆ ವಿವರ

    • ಸ್ವತ್ತಿನ ವಿಸ್ತೀರ್ಣ ಅನುಮೋದನೆ ಪ್ರಾಧಿಕಾರ ನಿಗದಿತ ಅವಧಿ
    • 400 ಚ.ಅಡಿ.ವರೆಗೆ ಕಂದಾಯ ಅಧಿಕಾರಿ 7 ದಿನ
    • 4001 ಚ.ಅಡಿಯಿಂದ 6000 ಚ.ಅಡಿ ವಲಯ ಉಪ ಆಯುಕ್ತರು 10 ದಿನ
    • 6001 ಚ.ಅಡಿ ಮೇಲ್ಪಟ್ಟು ವಲಯ ಜಂಟಿ ಆಯುಕ್ತರು 15 ದಿನ

    ವಲಯವಾರು ಸಂಪರ್ಕಿಸುವ ವಿವರ

    • ವಲಯ ವಲಯ ಉಪ ಆಯುಕ್ತರ ಹೆಸರು ಮೊಬೈಲ್ ಸಂಖ್ಯೆ ಕಚೇರಿ ಸಂಖ್ಯೆ
    • ಪೂರ್ವ ಶ್ರೀನಿವಾಸ್ 9480684259 080-25595239
    • ಪಶ್ಚಿಮ ಮಂಜುನಾಥಸ್ವಾಮಿ 9480683467 080-23464648
    • ದಕ್ಷಿಣ ಆರ್.ಲಕ್ಷ್ಮೀದೇವಿ 9480683456 080-22975731
    • ಬೊಮ್ಮನಹಳ್ಳಿ ಶಶಿಕಲಾ 9480684171 080-25735608
    • ಮಹದೇವಪುರ ಸರೋಜದೇವಿ 9480684059 080-28512229
    • ಆರ್.ಆರ್.ನಗರ ಮಲ್ಲಿಕಾರ್ಜುನ್ 9739674405 080-28603827
    • ದಾಸರಹಳ್ಳಿ ಡಿ.ಕೆ.ಬಾಬು 9480684353 080-22975906
    • ಯಲಹಂಕ ಮಮತ 9844629339 08022975935

    ಬೇರೆ ಜಿಲ್ಲೆಗೆ ವರ್ಗಾವಣೆ; ಮೊಬೈಲ್​ಫೋನ್​ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಪೊಲೀಸ್ ಕಾನ್​ಸ್ಟೆಬಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts