More

    ಅಚ್ಚರಿ ಮೂಡಿಸಿದ ಖಲಿಸ್ತಾನ್ ಜಿಂದಾಬಾದ್ ಭಿತ್ತಿಪತ್ರ; ದೇಶದ್ರೋಹಿ ಕೃತ್ಯಕ್ಕೆ ಕುಮ್ಮಕ್ಕು ಯಾರದು?

    ಅಮೃತಸರ: ಖಲಿಸ್ತಾನ್ ಜಿಂದಾಬಾದ್ ಎಂದು ಬರೆದಿರುವ ಭಿತ್ತಿಪತ್ರಗಳು ಸಿರ್ಸಾ ಜಿಲ್ಲೆಯ ಕಲಾನ್​​ವಾಲಿಯ ಕೆಲವು ಧಾರ್ಮಿಕ ಸ್ಥಳಗಳು ಸೇರಿ ವಿವಿಧೆಡೆ ಗೋಡೆಗಳ ಮೇಲೆ ಕಾಣಿಸಿಕೊಂಡಿದ್ದು, ಅಚ್ಚರಿ ಮೂಡಿಸಿವೆ. ಈ ಭಿತ್ತಿಪತ್ರಗಳನ್ನು ನೋಡಿ ಅಚ್ಚರಿಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಅವನ್ನು ಕಿತ್ತು ಹಾಕಿದರು.

    ಇದನ್ನೂ ಓದಿ: ತಮಗೆ ತಾವೇ ದಂಡ ಹಾಕಿಸಿಕೊಂಡು ಮಾದರಿಯಾದ ಅಧಿಕಾರಿ!

    ಈ ಕೃತ್ಯವನ್ನು ಯಾವುದೇ ಸಂಘಟನೆ ಹೊರತಾಗಿ ಕೆಲವು ಕಿಡಿಗೇಡಿಗಳು ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ, ಘಟನೆಯ ಬಗ್ಗೆ ಕೆಲವು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಆ ಪೋಸ್ಟರ್ ಹಾಕಿದ ವ್ಯಕ್ತಿಗಳನ್ನು ಗುರುತಿಸಲು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ ಎಂದು ಕಲಾನ್​​ವಾಲಿ ಪೊಲೀಸ್ ಠಾಣಾಧಿಕಾರಿ ರಾಜಾರಾಮ್ ಹೇಳಿದ್ದಾರೆ.

    ಇದನ್ನೂ ಓದಿ: ಹಾಸಿಗೆಗಳಿಲ್ಲ ಎನ್ನುತ್ತವೆ ಆಸ್ಪತ್ರೆಗಳು, ರಾಜಕೀಯ ಮಾಡಿದರೆ ಹುಷಾರ್ ಎನ್ನುತ್ತಾರೆ ಸಿಎಂ. ಮುಂದೇನು?

    ಈ ಕುರಿತು ಪೊಲೀಸರು ಅಲ್ಲಿಯ ನಿವಾಸಿಗಳನ್ನು ವಿಚಾರಿಸಿದ್ದಾರೆ. ಆದರೆ ಭಿತ್ತಿಪತ್ರಗಳನ್ನು ಯಾರು ಅಂಟಿಸಿದ್ದಾರೆ ಎಂಬುದು ಗೊತ್ತಿಲ್ಲ ಎಂದು ನಿವಾಸಿಗಳು ತಿಳಿಸಿದ್ದಾರೆ. ಬೆಳಿಗ್ಗೆ ಖಲಿಸ್ತಾನ್ ಜಿಂದಾಬಾದ್ ಎಂದು ಬರೆದಿರುವ ಪೋಸ್ಟರ್‌ಗಳನ್ನು ಕೆಲವು ಗೋಡೆಗಳ ಮೇಲೆ ಅಂಟಿಸಿರುವುದನ್ನು ಅಲ್ಲಿಯ ನಿವಾಸಿಗಳು ನೋಡಿದ್ದಾರೆ.

    ಇದನ್ನೂ ಓದಿ: VIDEO: ಹೀಗೊಂದು ಮದುವೆ: ಉಂಗುರದ ಬದಲು ಮಾಸ್ಕ್​ ಎಕ್ಸ್​ಚೇಂಜ್​!

    ರೈಲು ನಿಲ್ದಾಣದ ಬಳಿ ಇರುವ ಗುರುದ್ವಾರ ಸಿಂಗ್ ಸಭಾ, ತಖ್ತ್​​ಮಲ್ ರಸ್ತೆಯಲ್ಲಿರುವ ಗುರುದ್ವಾರ ರಾಮ್ ತೀರ್ಥ. ಶ್ರೀ ದುರ್ಗಾ ದೇವಸ್ಥಾನ, ಖುಹ್​​ ವಾಲಾ ಬಜಾರ್‌ನ ಶ್ರೀ ಬಾಲಾಜಿ ದೇವಸ್ಥಾನ ಮತ್ತು ರಾಮ್ ಬಾಗ್‌ನಲ್ಲಿರುವ ನಂದ ಬಾಬಾ ಸಂಸ್ಥೆಯ ಗೋಡೆಗಳ ಮೇಲೆ ಈ ಭಿತ್ತಿಪತ್ರಗಳು ಕಂಡುಬಂದಿದ್ದವು.

    ಶಾಕಿಂಗ್ ನ್ಯೂಸ್​: ಕೋವಿಡ್ 19 ರೋಗಿಯ ಶವವನ್ನು ಎಸೆದ ಆ್ಯಂಬುಲೆನ್ಸ್ ಸಿಬ್ಬಂದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts