More

    ಒಪ್ಪಿಗೆ ಕೊಟ್ಟಿದ್ದಕ್ಕೆ ಹೀರೋಯಿನ್​ಗೆ ಟಾರ್ಚರ್! ಕಾರಣ ಇದೇ ನೋಡಿ..

    ಮುಂಬೈ: ಹೀರೋ, ಹೀರೋಯಿನ್ ಅಥವಾ ಇನ್ಯಾವುದೇ ಸೆಲೆಬ್ರಿಟಿಗಳೇ ಆಗಿರಲಿ ಈಗ ಟ್ರೋಲಿಂಗ್ ಸಹಜ. ಯಾವುದೇ ಕೆಲಸವಿಲ್ಲದೆ ಸುಮ್ಮನಿರುವ ಅನೇಕರು ಯಾರು ಯಾರನ್ನೋ ಟ್ರೋಲ್ ಮಾಡುತ್ತಿರುತ್ತಾರೆ. ನಾಯಕಿಯರಿಗೆ ಈ ಸಮಸ್ಯೆ ಹೆಚ್ಚು. ಕೆಲವರು ಸರಿಯಾದ ಬಟ್ಟೆ ಧರಿಸಿಲ್ಲ, ಚೆನ್ನಾಗಿ ಡ್ರೆಸ್ ಮಾಡಿಕೊಂಡಿದ್ದಾರೆ ಎಂದು ಟ್ರೋಲ್ ಆಗುತ್ತಾರೆ. ಕೆಲವರು ಯಾಕೆ ಇಂತಹ ಸಿನಿಮಾ ಮಾಡುತ್ತಿದ್ದೀಯಾ ಎಂದು ಪೀಡಿಸುತ್ತಿದ್ದಾರೆ. ಇಂತಹದ್ದೇ ಸಮಸ್ಯೆ ರೈಮಾ ಸೇನ್ ಗೆ ಎದುರಾಗಿದೆ. ನೀವು ಒಪ್ಪಿಕೊಂಡ ಸಿನಿಮಾ ನಮಗೆ ಇಷ್ಟವಾಗಲಿಲ್ಲ ಎಂದು ಚಿತ್ರಹಿಂಸೆ ನೀಡುತ್ತಿದ್ದಾರೆ.

    ಇದನ್ನೂ ಓದಿ: ಭಾರತದಲ್ಲಿ ಸುದ್ದಿ ಪ್ರಸಾರ: ಖಾಸಗಿ ಕಂಪನಿಗೆ ಪರವಾನಗಿ ಹಸ್ತಾಂತರಿದ ಬಿಬಿಸಿ

    ನಾಯಕಿ ರೈಮಾ ಸೇನ್ ಗೆ ಕೆಲವರು ಟೀಕೆಯ ಹಂತ ಮೀರಿ ಬೆದರಿಕೆ ಹಾಕುವ ಮಟ್ಟಕ್ಕೆ ಇಳಿದಿದ್ದಾರೆ. ಫೋನ್​ಗೆ ಕರೆ ಮಾಡಿ ಈ ಸಿನಿಮಾ ರಿಜೆಕ್ಟ್ ಮಾಡಿ ಎಂದು ಕಾಮೆಂಟ್ ಮಾಡಿದ್ದಾರೆ.

    ಇಷ್ಟಕ್ಕೂ ಈ ಹೀರೋಯಿನ್​ಗೆ ಇಂತಹ ಬೆದರಿಕೆ ಬರಲು ಕಾರಣವೇನೆಂದು ನೋಡುವುದಾದರೆ ಈಕೆ ‘ಮಾ ಕಲಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ಈ ಚಿತ್ರವನ್ನು ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದೆ. ಆ ಪೋಸ್ಟರ್ ಬಿಡುಗಡೆಯಾದಾಗಿನಿಂದ ಆಕೆಗೆ ಹಲವು ಜನರಿಂದ ಬೆದರಿಕೆಗಳು ಬರುತ್ತಿವೆ. ಆ ಸಿನಿಮಾಗೆ ಯಾಕೆ ಒಪ್ಪಿಕೊಂಡೆ ಎಂದು ಕರೆ ಮಾಡಿ ಪೀಡಿಸುತ್ತಿದ್ದಾರೆ.

    “ಮಾ ಕಲಿ ಚಿತ್ರದ ಪೋಸ್ಟರ್ ಬಿಡುಗಡೆಯಾದಾಗಿನಿಂದ ಟೀಕೆಗಳಲ್ಲದೆ ನನಗೆ ಬೆದರಿಕೆಗಳೂ ಬರುತ್ತಿವೆ. ಸಿನಿಮಾ ರಿಲೀಸ್ ಆದ ನಂತರ ನಿಮ್ಮ ಅಭಿಪ್ರಾಯ ತಿಳಿಸಿ ಎಂದರೂ ಬಿಡದೆ ಸಾಮಾಜಿಕ ಮಾಧ್ಯಮಗಳಲ್ಲಿ, ಕರೆ ಮಾಡಿ ಸಿನಿಮಾ ಕೈಬಿಡುವಂತೆ ಟೀಕಿಸುತ್ತಿದ್ದಾರೆ.

    ಲೆಜೆಂಡರಿ ನಟಿ ಸುಚಿತ್ರಾ ಸೇನ್ ಅವರ ಮೊಮ್ಮಗಳು ಇಂತಹ ಚಿತ್ರಗಳನ್ನು ಮಾಡುತ್ತೀರಾ ಎಂದು ಹಲವರು ಕರೆ ಮಾಡಿ ಕೇಳುತ್ತಾರೆ? ಕಾಮೆಂಟ್​ಳನ್ನೂ ಮಾಡುತ್ತಿದ್ದಾರೆ. ನೀವು ಕೋಲ್ಕತ್ತಾದಲ್ಲಿ ಇದ್ದೀರಿ ಎಂದು ನೆನಪಿಡಿ ಎಂದು ಬೆದರಿಕೆ ಹಾಕುತ್ತಿದ್ದಾರೆ. ಇಂತಹ ಬೆದರಿಕೆ ಕರೆಗಳು ಮತ್ತು ಟೀಕೆಗಳನ್ನು ನಾನು ಸಹಿಸಲಾರೆ ಎಂದು ರೈಮಾ ಸೇನ್ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

    ಈ ಸಿನಿಮಾಕ್ಕೆ ಏಕೆ ವಿರೋಧ?: 1946ರ ಆಗಸ್ಟ್ 16ರಂದು ಕೋಲ್ಕತ್ತಾದಲ್ಲಿ ನಡೆದ ದಾರುಣ ಘಟನೆಯ ಹಿನ್ನೆಲೆಯಲ್ಲಿ ‘ಮಾ ಕಲಿ’ ಸಿನಿಮಾ ತಯಾರಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಪೋಸ್ಟರ್ ನಲ್ಲಿ ಕಾಳಿಕಾ ಮಾತೆಯನ್ನು ಒಂದು ಕಡೆ ಹಾಕಲಾಗಿದೆ. ಇನ್ನೊಂದೆಡೆ ಹಿಜಾಬ್ ಧರಿಸಿರುವ ಗಾಯಾಳು ಯುವತಿಯ ಮುಖವಿದೆ. ಇದು ಬಂಗಾಳದ ಇತಿಹಾಸದಿಂದ ಅಳಿಸಿಹೋಗಿರುವ ಕಥೆ ಎಂದು ಈ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

    ಅಂದಿನಿಂದ ರೈಮಾ ಸೇನ್ ಗೆ ಬೆದರಿಕೆಗಳು ತಪ್ಪುತ್ತಿಲ್ಲ. ಆಕೆ ಇತ್ತೀಚೆಗೆ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ವಿವಾದಕ್ಕೂ ಕಾರಣವಾಗಿದ್ದು ಗೊತ್ತೇ ಇದೆ. ಈ ಬೆಡಗಿ ಟಾಲಿವುಡ್‌ನಲ್ಲಿ ದಸರಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

    ಮುಖಂಡರ ಬಂಧನಕ್ಕೆ ಬಂಗಾಳ ಸರ್ಕಾರ ಪ್ರತಿಕಾರ.. ಎನ್‌ಐಎ ಅಧಿಕಾರಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts