More

    ಹಾಸಿಗೆಗಳಿಲ್ಲ ಎನ್ನುತ್ತವೆ ಆಸ್ಪತ್ರೆಗಳು, ರಾಜಕೀಯ ಮಾಡಿದರೆ ಹುಷಾರ್ ಎನ್ನುತ್ತಾರೆ ಸಿಎಂ. ಮುಂದೇನು?

    ನವದೆಹಲಿ: ಕರೊನಾ ರೋಗಿಗಳಿಗಾಗಿ ಖಾಲಿ ಇರುವ ಹಾಸಿಗೆಗಳು ಮತ್ತು ಆರೋಗ್ಯ ಸೇವೆಗಳ ಕುರಿತು ದೆಹಲಿ ಕರೊನಾ ಆ್ಯಪ್​​​ನಲ್ಲಿನ ಮಾಹಿತಿ ಹಾಗೂ ಆಸ್ಪತ್ರೆಗಳ ಪ್ರತಿಕ್ರಿಯೆಯ ನಡುವಿನ ವ್ಯತ್ಯಾಸವು ದೆಹಲಿಯ ಕರೋನವೈರಸ್ ರೋಗಿಗಳ ಕುಟುಂಬಗಳಲ್ಲಿ ಗೊಂದಲ ಮತ್ತು ಸಂಕಟವನ್ನು ಹೆಚ್ಚಿಸುತ್ತಿದೆ.

    ರಾಜಧಾನಿಯಲ್ಲಿ ಕರೋನವೈರಸ್ ರೋಗಿಗಳಿಗೆ ಹಾಸಿಗೆಗಳ ಕೊರತೆಯಿಲ್ಲ ಎಂದು ದೆಹಲಿ ಸರ್ಕಾರವು ಹೇಳುತ್ತಿದ್ದರೆ, ನಗರದ ಹಲವಾರು ಪ್ರಮುಖ ಆಸ್ಪತ್ರೆಗಳು ಕೋವಿಡ್-19 ರೋಗಿಗಳ ಹಾಸಿಗೆಗಳು ಭರ್ತಿಯಾಗಿವೆ ಎಂದು ತಿಳಿಸುತ್ತಿವೆ.

    ಇದನ್ನೂ ಓದಿ: ದೆಹಲಿ ಆಸ್ಪತ್ರೆಗಳು ಸ್ಥಳೀಯರಿಗಷ್ಟೇ ಮೀಸಲು; ತಜ್ಞರ ಸಮಿತಿ ಶಿಫಾರಸು; ಅನುಷ್ಠಾನಕ್ಕೆ ಮುಂದಾದ ಸರ್ಕಾರ

    ದೆಹಲಿ ಸರ್ಕಾರ ಅಭಿವೃದ್ಧಿಪಡಿಸಿದ ಸ್ಮಾರ್ಟ್ ‌ಫೋನ್ ಆ್ಯಪ್‌ನಲ್ಲಿ ಡಜನ್ ಗಟ್ಟಲೆ ಖಾಲಿ ಹಾಸಿಗೆಗಳ ಪಟ್ಟಿ ಮಾಡಲಾಗಿದೆ ಮತ್ತು ರಾಜಧಾನಿಯಲ್ಲಿ ಯಾವುದೇ ಆರೋಗ್ಯ ರಕ್ಷಣೆ ಸೌಲಭ್ಯಗಳ ಕೊರತೆಯಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಆದರೆ ವಾಸ್ತವವಾಗಿ ನಮ್ಮಲ್ಲಿ ಯಾವುದೇ ಖಾಲಿ ಹಾಸಿಗೆಗಳು ಲಭ್ಯವಿಲ್ಲ ಎಂದು ಮ್ಯಾಕ್ಸ್ ಆಸ್ಪತ್ರೆ, ಫೋರ್ಟಿಸ್ ಹಾಗೂ ಹೋಲಿ ಫ್ಯಾಮಿಲಿ ಆಸ್ಪತ್ರೆಗಳು ಹೇಳಿವೆ.

    “ದೆಹಲಿ ಕರೋನಾ” ಅಪ್ಲಿಕೇಶನ್‌ನ ಮಾಹಿತಿಯನ್ನು ಅನುಸರಿಸಿ, ಸುದ್ದಿ ಸಂಸ್ಥೆಯೊಂದು ನಗರದಲ್ಲಿ ಹಲವಾರು ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಫೋರ್ಟಿಸ್ ಆಸ್ಪತ್ರೆಗಳ ಸರಣಿಯಲ್ಲಿ ರೋಗಿಗಳಿಗೆ 32 ಹಾಸಿಗೆಗಳು ಲಭ್ಯವಿದೆಯೇ ಎಂದು ಪರಿಶೀಲಿಸಿದೆ.

    ಇದನ್ನೂ ಓದಿ: VIDEO: ಹೀಗೊಂದು ಮದುವೆ: ಉಂಗುರದ ಬದಲು ಮಾಸ್ಕ್​ ಎಕ್ಸ್​ಚೇಂಜ್​!

    “ನಮ್ಮಲ್ಲಿ ಈಗ ಯಾವುದೇ ಖಾಲಿ ಹಾಸಿಗೆಗಳಿಲ್ಲ. ಆದರೆ ನೀವು ರೋಗಿಗಳ ವಿವರಗಳನ್ನು ನೀಡಿದರೆ, ನಾವು ಹಾಸಿಗೆ ಸೌಲಭ್ಯ ಕಲ್ಪಿಸಿಕೊಡಲು ಪ್ರಯತ್ನಿಸಬಹುದು.. ಐಸಿಯುಗಳು (ತೀವ್ರ ನಿಗಾ ಘಟಕಗಳು) ಸೇರಿ ಎಲ್ಲ ಹಾಸಿಗೆಗಳೂ ಭರ್ತಿಯಾಗಿವೆ, ದೆಹಲಿ ಕರೊನಾ ಆ್ಯಪ್​​​ನಲ್ಲಿ ಸಮಸ್ಯೆ ಇದೆ” ಎಂದು ಪ್ರತಿನಿಧಿಯೊಬ್ಬರು ಹೇಳಿದರು.

    ದಕ್ಷಿಣ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯು ಇದೇ ರೀತಿಯ ಉತ್ತರವನ್ನು ನೀಡಿದ್ದು, ಅಪ್ಲಿಕೇಶನ್‌ನಲ್ಲಿ ಲಭ್ಯವಿರುವಂತೆ ಪಟ್ಟಿ ಮಾಡಲಾದ 69 ಹಾಸಿಗೆಗಳಲ್ಲಿ ಯಾವುದೂ ಖಾಲಿ ಇಲ್ಲ ಎಂದು ಹೇಳಿದೆ.

    ಇದನ್ನೂ ಓದಿ: ಈ ಮುದುಕನಿಗೆ ಇದೆಂತಾ ಶಿಕ್ಷೆ!: ಆಸ್ಪತ್ರೆ ಬಿಲ್ ಪಾವತಿಸದಿದ್ರೆ ಈ ರೀತಿ ಹಿಂಸೆ ಕೊಡೋದಾ?!

    “ಇದೀಗ ಯಾವುದೇ ಹಾಸಿಗೆಗಳು ಲಭ್ಯವಿಲ್ಲ. ಅಪ್ಲಿಕೇಶನ್ ಅನ್ನು ಪರಿಷ್ಕರಿಸಲಾಗಿಲ್ಲ” ಎಂದು ಪ್ರವೇಶ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿ ಕರೋನಾ ಆ್ಯಪ್‌ನಲ್ಲಿ ಸುಮಾರು 200 ಖಾಲಿ ಹುದ್ದೆಗಳಿವೆ ಎಂದು ಹೇಳಲಾಗಿದೆಯಾದರೂ ತಮ್ಮಲ್ಲಿ ಅಷ್ಟು ಹಾಸಿಗೆಗಳು ಲಭ್ಯವಿಲ್ಲ ಎಂದು ದೆಹಲಿಯಲ್ಲಿ ಆಸ್ಪತ್ರೆಗಳ ಸರಣಿ ಹೊಂದಿರುವ ಮ್ಯಾಕ್ಸ್ ಹಾಸ್ಪಿಟಲ್ ಹೇಳಿದೆ.

    ಈ ಆಸ್ಪತ್ರೆ ಸರಣಿಯಲ್ಲಿ ಶೇ.100 ಹಾಸಿಗೆಗಳು ಭರ್ತಿಯಾಗಿದ್ದು, ದೆಹಲಿಗೆ ನೀಡಲಾದ ಎಲ್ಲ 429 ಹಾಸಿಗೆಗಳೂ ಭರ್ತಿಯಾಗಿವೆ ಎಂದು ಮ್ಯಾಕ್ಸ್ ಆಸ್ಪತ್ರೆಯ ಪ್ರತಿನಿಧಿ ತಿಳಿಸಿದ್ದಾರೆ.

    ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ನಲ್ಲಿ 302 ಹಾಸಿಗೆಗಳು ಲಭ್ಯ ಇವೆ ಎಂದು ಹೇಳಲಾಗಿದೆಯಾದರೂ ವಾಸ್ತವವಾಗಿ ಇಲ್ಲಿ ಅಂದಾಜು 270 ಹಾಸಿಗೆಗಳಿವೆ ಮತ್ತು ನಮ್ಮಲ್ಲಿ ಮಾನವ ಸಂಪನ್ಮೂಲದ ಕೊರತೆ ಇದೆ ಎಂದು ಆಸ್ಪತ್ರೆ ಹೇಳಿದೆ.

    ಇದನ್ನೂ ಓದಿ: ಎರಡೂವರೆ ತಿಂಗಳ ಹೆಣ್ಣುಮಗು ಅಳುವ ಸದ್ದೇ ಇರಲಿಲ್ಲ; ಲಾಕ್​ಡೌನ್​ನಿಂದಾಗಿ ಹೆತ್ತಮ್ಮ ಮಾಡಿದ್ದೇನು?

    ಈ ಕುರಿತು ಮಾತನಾಡಿದ ಆಮ್ ಆದ್ಮಿ ಪಕ್ಷದ ಶಾಸಕ ರಾಘವ್ ಚಾಧಾ,”ಈ ಮೊಬೈಲ್ ಅಪ್ಲಿಕೇಶನ್ ಒಂದು ಉಪಕ್ರಮವಾಗಿದೆ ಮತ್ತು ಇಡೀ ದೇಶದಲ್ಲಿ ಈ ಡೇಟಾವನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸುವ ಏಕೈಕ ರಾಜ್ಯ ಇದೊಂದೇ ಆಗಿದೆ. ಕೆಲವು ದಿನಗಳ ಹಿಂದಷ್ಟೇ ಪ್ರಾರಂಭಿಸಲಾದ ಈ ಆ್ಯಪ್​​ನಲ್ಲಿ ಕೆಲವು ಗೊಂದಲಗಳಿದ್ದು, ಶೀಘ್ರವೇ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದ್ದಾರೆ.

    ಮಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಕುರಿತು ಶನಿವಾರ ಮಾತನಾಡಿ, ದೆಹಲಿಯಲ್ಲಿ ಕರೋನವೈರಸ್ ರೋಗಿಗಳಿಗೆ ಹಾಸಿಗೆಗಳ ಕೊರತೆಯಿಲ್ಲ ಮತ್ತು ರೋಗಲಕ್ಷಣಗಳನ್ನು ಹೊಂದಿರುವವರು ಆಸ್ಪತ್ರೆಯನ್ನು ಸಂಪರ್ಕಿಸಬೇಕೆಂದು ಒತ್ತಾಯಿಸಿದರು.

    ಇದನ್ನೂ ಓದಿ: ‘ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡಲು ಇನ್ಮುಂದೆ ವಿಡಿಯೋ ಮಾಡಿದ್ರೆ ಶೂಟ್ಔಟ್​!​’

    “ಕೆಲವು ಆಸ್ಪತ್ರೆಗಳು COVID-19 ರೋಗಿಗಳಿಗೆ ಪ್ರವೇಶವನ್ನು ನಿರಾಕರಿಸುತ್ತಿವೆ. ಆಸ್ಪತ್ರೆಯ ರೋಗಿಗಳ ಹಾಸಿಗೆ ಲಭ್ಯತೆ ಕುರಿತು ರಾಜಕೀಯ, ಕಾಳಸಂತೆ ನಡೆಸಲು ಸಾಧ್ಯವಾಗುತ್ತದೆ ಎಂದು ಭಾವಿಸುವವರಿಗೆ ನಾನು ಖಡಕ್ ಎಚ್ಚರಿಕೆ ನೀಡುತ್ತಿದ್ದೇನೆ ಹಾಸಿಗೆಗಳು ಲಭ್ಯವಿದ್ದಾಗಲೂ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸುತ್ತಿರುವವರ ವಿರುದ್ಧ ನಾವು ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.
    ಕರೋನವೈರಸ್ ರೋಗಿಗಳಿಗೆ ಅಂದಾಜು 5,000 ಹಾಸಿಗೆಗಳು ಲಭ್ಯವಿವೆ. ಕೆಲವು ಆಸ್ಪತ್ರೆಗಳು ಸಮಯಕ್ಕೆ ಸರಿಯಾಗಿ ಮಾಹಿತಿಯನ್ನು ನವೀಕರಿಸುತ್ತಿಲ್ಲ ಅಥವಾ ಹಾಸಿಗೆಗಳ ಲಭ್ಯತೆಯ ಬಗ್ಗೆ ನಿಜವಾದ ಮಾಹಿತಿಯನ್ನು ನೀಡುತ್ತಿಲ್ಲ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಶುಕ್ರವಾರ ಹೇಳಿದ್ದಾರೆ.

    ಇದನ್ನೂ ಓದಿ:  ಶಾಕಿಂಗ್ ನ್ಯೂಸ್​: ಕೋವಿಡ್ 19 ರೋಗಿಯ ಶವವನ್ನು ಎಸೆದ ಆ್ಯಂಬುಲೆನ್ಸ್ ಸಿಬ್ಬಂದಿ!

    ಇತ್ತೀಚಿನ ದಿನಗಳಲ್ಲಿ ದೆಹಲಿಯಲ್ಲಿ ಕರೊನಾವೈರಸ್ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದ್ದು, ಪ್ರತಿದಿನ ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ.
    ನಗರದಲ್ಲಿ ಶನಿವಾರ 1,320 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳು ಅಂದಾಜು 27,000 ಹಾಗೂ ಮತ್ತು ಸಾವಿನ ಸಂಖ್ಯೆ 761 ಕ್ಕೆ ಏರಿದೆ.

    ಪ್ರವೇಶ ಕೊಡದ ಎಂಟು ಆಸ್ಪತ್ರೆಗಳು: 13 ಗಂಟೆ ಸುತ್ತಿ ಆಂಬ್ಯುಲೆನ್ಸ್​ನಲ್ಲೇ ಪ್ರಾಣಬಿಟ್ಟ ಗರ್ಭಿಣಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts