More

    6000 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿರುವ ‘ಕೆಜಿಎಫ್ 2’ ಸೆನ್ಸಾರ್ ಪ್ರಮಾಣ ಪತ್ರ ವೈರಲ್!

    ನಟ ಯಶ್ ಅಭಿನಯದ ಕೆಜಿಎಫ್ 2′ ಚಿತ್ರದ ರಿಲೀಸ್‌ಗೆ ಈಗಾಗಲೇ ದಿನಗಣನೆ ಶುರುವಾಗಿದೆ. ಹೌದು, ಈ ಚಿತ್ರದ ಟ್ರೈಲರ್‌ ಮಾರ್ಚ್. 27 ರಂದು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸೌಂಡು ಮಾಡುತ್ತಿದೆ. ಚಿತ್ರದ ಮೇಲಿನ ನಿರೀಕ್ಷೆಯನ್ನು ಟ್ರೈಲರ್ ಹೆಚ್ಚು ಮಾಡಿದೆ ಎಂದರೇ ತಪ್ಪಾಗುವುದಿಲ್ಲ. ಇನ್ನು, ಈ ಸಿನಿಮಾದ ಅಪ್​ಡೇಡ್​ಗಳಿಗೆ ಕಾಯುತ್ತಿರುವ ಅಭಿಮಾನಿಗಳಿಗೆ ಒಂದು ಹೊಸ ಸುದ್ದಿ. ಅದುವೆ ಈ ಸಿನಿಮಾ ಸೆನ್ಸಾರ್ ಪ್ರಕ್ರಿಯೆಯಲ್ಲಿ ಪಾಸ್ ಆಗಿದ್ದು, ಪ್ರಮಾಣ ಪತ್ರ ಕೂಡಾ ಸಿಕ್ಕಿದೆ.
    ಕೆಜಿಎಫ್ 2′ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಇನ್ನು ಚಿತ್ರದ ಪ್ರದರ್ಶನ ಸಮಯ 2 ಗಂಟೆ 48 ನಿಮಿಷ ಇದೆ ಎಂಬ ಮಾಹಿತಿ ಹೊರಬಿದ್ದಿದೆ. ಸದ್ಯ, ಸಿನಿಮಾದ ಸೆನ್ಸಾರ್ ಸರ್ಟಿಫಿಕೇಟ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಯು/ಎ ಪ್ರಮಾಣ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿದೆ. ನಟ ಯಶ್ ಅವರ ಅಭಿಮಾನಿಗಳು ಈ ಪತ್ರವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುತ್ತಾ ಸಿಕ್ಕಾಪಟ್ಟೆ ಸಂಭ್ರಮಿಸುತ್ತಿದ್ದಾರೆ.
    ಅಂದಹಾಗೆ, ‘ಕೆಜಿಎಫ್ 2′ ಸಿನಿಮಾ ಕರ್ನಾಟಕದಲ್ಲಿ ಮಾತ್ರ ಅಲ್ಲ, ವಿಶ್ವಾದ್ಯಂತ ಏಪ್ರಿಲ್ 14 ರಂದು ತೆರೆಗಪ್ಪಳಿಸಲಿದೆ. ಈ ಸಿನಿಮಾ ಬರಿ ನಮ್ಮ ದೇಶದಲ್ಲೇ 6 ಸಾವಿರ ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅಬ್ಬರಿಸಲಿದೆ ಎನ್ನಲಾಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಕೆಜಿಎಫ್ 2′ ಒಟ್ಟಿಗೆ ತೆರೆ ಕಾಣಲಿರುವ ಕಾರಣ, ಚಿತ್ರ ಅಧಿಕ ಪರದೆಗಳಲ್ಲಿ ರಿಲೀಸ್ ಆಗಲಿದೆ.
    ಇನ್ನು, ಇಂಡಿಯಾ ಬಿಟ್ಟರೆ ಹೊರ ದೇಶಗಳಲ್ಲಿ ಕೂಡಾ ಈ ಸಿನಿಮಾಗೆ ಹೆಚ್ಚು ಬೇಡಿಕೆ ಇದ್ದು, ಬೇರೆ ದೇಶಗಳಲ್ಲೂ 3000 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದೆ. ರಿಲೀಸ್​ಗೂ ಮುನ್ನವೇ ಟೀಸರ್, ಹಾಡು, ಟ್ರೈಲರ್, ಪೋಸ್ಟರ್​ಗಳ ಮೂಲಕವೇ ಬಹಳಷ್ಟು ದಾಖಲೆಗಳನ್ನು ಬರೆದಿರುವ ಈ ಸಿನಿಮಾಗೆ ರಿಲೀಸ್ ಆದ ನಂತರ ಪ್ರತಿಕ್ರಿಯೆ ಹೇಗಿರಲಿದೆ ಎಂದು ಕಾದು ನೋಡಬೇಕಿದೆ

    ನಿಮ್ಮಿಂದ ಲೈಂಗಿಕ ಕಿರುಕುಳ ಅನುಭವಿಸಿದ ಎಲ್ಲರೂ… ಸಲ್ಮಾನ್​ಗೆ ಮಾಜಿ ಪ್ರೇಯಸಿ ವಾರ್ನಿಂಗ್?

    ಪರಭಾಷೆಯ ಸ್ಟಾರ್​ಗಳಿಂದ ‘ವಿಕ್ರಾಂತ್​ ರೋಣ’ ಹೊಸ ಟೀಸರ್ ಲಾಂಚ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts